ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರುಮಂಗಳೂರು

Puttur: MDMA ಮಾರಾಟಕ್ಕೆ ಯತ್ನ – ಆರೋಪಿಯ ಬಂಧನ

Puttur: ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್‌ ಬಳಿಯೊಂದರ ಬಾಡಿಗೆ ಮನೆಯೊಂದರಿಂದ ಮಹಮ್ಮದ್ ಮುಸ್ತಾಫ ಎಂಬಾತನನ್ನು ಬಂಧಿಸಿದ್ದಾರೆ.‌

ಬಂಧಿತ ಆರೋಪಿ ಕಬಕ ನಿವಾಸಿಯಾಗಿದ್ದು, ನ.15ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್ ಬಳಿಯ ಬಾಡಿಗೆ ಕೋಣೆಯೊಂದರಲ್ಲಿ ಮಹಮ್ಮದ್ ಮುಸ್ತಾಫ ಎಂಬಾತ MDMA ನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ‌.

ಬಂಧಿತನಿಂದ 14 ಗ್ರಾಂ ನಿಷೇದಿತ ಮಾದಕ ಮನೋನ್ಮಾದಕ ವಸ್ತು MDMAನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈತನ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 109/2025 ಕಲಂ;- 8(C),22(b) NDPS ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಮಹಮ್ಮದ್ ಮುಸ್ತಪಾ ವಿರುದ್ಧ ಈಗಾಗಲೇ ಪುತ್ತೂರು ನಗರ ಠಾಣೆಯಲ್ಲಿ ಅಕ್ರ:141/2015 ಪೋಕ್ಸ್ ಪ್ರಕರಣ ದಾಖಲಾಗಿ, ಸದ್ರಿ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿರುತ್ತದೆ. ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 48/2024, 108/2024 ರಲ್ಲಿ ಮಾದಕವಸ್ತು ಮಾರಾಟದ ಪ್ರಕರಣಗಳು ದಾಖಲಾಗಿದೆ

ಇದನ್ನೂ ಓದಿ:Alert: ನೀವು ವಾಟ್ಸಾಪ್ ಬಳಸ್ತಿದ್ದೀರಾ..? ಹಾಗಾದ್ರೆ ಈ ಸ್ಟೋರಿ ಗಮನವಿಟ್ಟು ಓದಿ!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 39

You cannot copy content of this page