Metro : ನಮ್ಮ ಮೆಟ್ರೋ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ತಾ ಇದೆ. ಹೌದು…! ತುಮಕೂರಿನ ಜನರಿಗೆ ಮೆಟ್ರೋದಿಂದ ಈ ಒಳ್ಳೆಯ ವಿಚಾರ ಕೇಳಿ ಬರುತ್ತಿದೆ. 59.6 ಕಿಲೋಮೀಟರ್ ಗ್ರೀನ್ ಲೈನ್ ವಿಸ್ತರಣೆಗೆ ಡಿಪಿಆರ್ ರೆಡಿ ಮಾಡ್ಬೇಕು ಹಾಗೂ ಈ ಸಲುವಾಗಿ ನವೆಂಬರ್ 20ರವರೆಗೆ ಗಡು ನೀಡಲಾಗಿದೆ. ಮಾದಾವರದಿಂದ ತುಮಕೂರು ವರೆಗಿನ ಹಸಿರು ಮಾರ್ಗ ಇದಾಗಿದೆ. ಈ ಸಲುವಾಗಿ ನವೆಂಬರ್ 21ರಂದು ಟೆಂಡರ್ ತೆರೆಯುವ ಸಾಧ್ಯತೆ ಇದೆ. ಗ್ರೀನ್ ಲೈನ್ ಅನ್ನು ವಿಸ್ತಾರ ಮಾಡಬೇಕೇ ಅನ್ನುವ ಯೋಚನೆ ಇದಾಗಿದ್ದು ಬೆಂಗಳೂರುನಿಂದ ತುಮಕೂರುವರೆಗೆ ಮೆಟ್ರೋವನ್ನು ವಿಸ್ತರಣೆ ಮಾಡುವ ಉದ್ದೇಶವಾಗಿದೆ.
ಮೊಟ್ಟ ಮೊದಲ ಬಾರಿಗೆ ಅಂತರ್ ಜಿಲ್ಲಾ ಸಂಚಾರ ;
ಮೊಟ್ಟ ಮೊದಲ ಬಾರಿಗೆ ಅಂತರ್ ಜಿಲ್ಲಾ ಸಂಚಾರ ಇದಾಗಿದ್ದು, ಬೆಂಗಳೂರು ಮೆಟ್ರೋ, ತುಮಕೂರುವರೆಗೆ ಕೂಡ ವಿಸ್ತರಣೆಯಾಗಬೇಕು ಎಂದು ಹೇಳಲಾಗಿದೆ. ನೆಲಮಂಗಲ, ದಾಬಸ್ ಪೇಟೆ ಹಾಗೂ ಕ್ಯಾತ್ಸಂದ್ರ ಮೂಲಕ ಹಾದು ಹೋಗುವ ರಸ್ತೆಯಾಗಿದೆ. ಒಟ್ಟು 49 ಕೋಟಿ ರೂಪಾಯಿ ವೆಚ್ಚದಲ್ಲಿ, ಹದಿನೈದು ಸಾವಿರ ಪ್ರಯಾಣಿಕರಿಗೆ ಇದರ ಸೌಲಭ್ಯ ಸಿಗಲಿದೆ ಎಂದು ವರದಿಯಾಗಿದೆ.
ಇದಕ್ಕೆ ಕಾರಣ ಟೆಸ್ಟ್ ನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಡಿಪಿಆರ್ ಅನ್ನು ತಯಾರು ಮಾಡುವುದಕ್ಕೆ ಟೆಂಡರ್ ಕರೆದಿರುವುದು ಹಾಗೂ ನವಂಬರ್ 20ರವರೆಗೆ ಈ ಟೆಂಡರ್ ನಲ್ಲಿ ಭಾಗಿಯಾಗಲು ಅವಕಾಶವನ್ನು ಕಲ್ಪಿಸಿರುವುದು ತಿಳಿದುಬಂದಿದೆ. ಈ ಟೆಂಡರ್ ನಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅವರಿಗೆ ಇದನ್ನು ಇದನ್ನು ಕೊಡುವ ಸಾಧ್ಯತೆಗಳು ಸಹ ಇದೆ ಎಂದು ಹೇಳಲಾಗಿದೆ. ಬೆಂಗಳೂರಿಂದ ತುಮಕೂರುವರೆಗೆ 59 ಕಿಲೋಮೀಟರ್ ವಿಸ್ತೀರ್ಣವುಳ್ಳ, 25 ಮೆಟ್ರೋ ಸ್ಟೇಷನ್ ಗಳು ಈ ಮಾರ್ಗದಲ್ಲಿ ಬರುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿಯೇ ಒಟ್ಟು 20 ಸಾವಿರ ಕೋಟಿ ರೂ. ವೆಚ್ಚ ತಗಲುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ :Dharmasthala: ಧರ್ಮಸ್ಥಳ ಮಂಜುನಾಥನ ಅಚ್ಚರಿಯ ಚಮತ್ಕಾರ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=tN1FfmnSl3fWdPST











