Tailor Machine : ಹೆಣ್ಣುಮಕ್ಕಳಿಗಾಗಿ ಟೈಲರಿಂಗ್ ಉದ್ಯಮವು ಕಡಿಮೆ ಹೂಡಿಕೆ, ಹೆಚ್ಚು ಡಿಮಾಂಡ್, ಮನೆಯಲ್ಲಿ ನಡೆಸಬಹುದಾದ ಉತ್ತಮ ಉದ್ಯಮಗಳಲ್ಲಿ ಒಂದಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ಇದು ಸುಲಭ ಕ್ಷೇತ್ರವಾಗಿದೆ. ಇನ್ನು ಕೆಲವರು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾ ಉದ್ಯಮ ನಡೆಸಲು ಸಾಧ್ಯ. ಹಾಗೂ ಮದುವೆ ಸೀಸನ್ನಲ್ಲಿ ಹೆಚ್ಚಿನ ಆದಾಯದ ಜೊತೆ, ನಿಮ್ಮದೇ ಬ್ರಾಂಡ್ ಮಾಡಿದ ಡಿಸೈನ್ಗಳನ್ನು ಬಿಡುಗಡೆ ಮಾಡಬಹುದು.
ಮರಾಠ ಸಮುದಾಯಕ್ಕೆ ಸೇರಿರಬೇಕು ;
ಇದೀಗ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ 2025-26 ನೇ ಸಾಲಿನ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮಹಿಳೆಯರಿಗೆ ಡಿಸೆಂಬರ್ 6 ಕೊನೆಯ ದಿನವಾಗಿದೆ. ಸಂಜೆ 5:30ರ ಒಳಗಾಗಿ, ನಿಗದಿತ ಅವಧಿ ಒಳಗೆ ಅರ್ಜಿ ಸಲ್ಲಿಸಲು ಜಿಲ್ಲಾ ವ್ಯವಸ್ಥಾಪಕರು ಮನವಿ ಮಾಡಿರುತ್ತಾರೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿದಾರರು ಪ್ರವರ್ಗ 3 ಬಿ ಅಡಿಯಲ್ಲಿನ (ಎ) ರಿಂದ 2 (ಎಫ್) ವರೆಗೆ ಬರುವ ಮರಾಠ ಸಮುದಾಯಕ್ಕೆ ಸೇರಿರಬೇಕು ಎಂದು ತಿಳಿಸಲಾಗಿದೆ.
ಒಬ್ಬ ಸದಸ್ಯನಿಗೆ ಮಾತ್ರ ಅವಕಾಶ ;
ಜೊತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ನಮೂನೆ ಮೂರು ಬಿ ಯಲ್ಲಿ ಮಾನ್ಯವಾಗಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು ರಾಜ್ಯದ ಖಾಯಂ ವಿಳಾಸ ಹೊಂದಿರಬೇಕು ಹಾಗೂ ಆಧಾರ ಕಾರ್ಡ್ ಕಡ್ಡಾಯವಾಗಿ ಇರಬೇಕಾಗಿದೆ. ಇದರಲ್ಲಿ ಒಬ್ಬ ಸದಸ್ಯನಿಗೆ ಮಾತ್ರ ಅವಕಾಶ ಅಂದರೆ ವಯೋಮಿತಿ ದೃಷ್ಟಿಯಿಂದ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಗರಿಷ್ಠ 55 ವರ್ಷಗಳನ್ನು ಮೀರಿರಬಾರದು. ಒಂದು ಕುಟುಂಬದಿಂದ ಒಬ್ಬ ಸದಸ್ಯನಿಗೆ ಮಾತ್ರ ಅವಕಾಶವಿದ್ದು ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ. 98,000 ಮತ್ತು ನಗರ ಪ್ರದೇಶದಲ್ಲಿ ರೂ.1,20,000 ಮೀರಬಾರದು ಎಂಬ ಶರತ್ತುಗಳನ್ನು ವಿಧಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ : kmcdc.karnataka.gov.in
ಇದನ್ನೂ ಓದಿ :Bengaluru: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ಸಂಭ್ರಮಾಚರಣೆ!
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/0Gm4qrLCI1k?si=1W0ERQYwLtKFi-tg











