ಬ್ರೇಕಿಂಗ್ ನ್ಯೂಸ್
ಕರ್ನಾಟಕ

Restaurant : ರೆಸ್ಟೋರೆಂಟ್ ಗಳಲ್ಲಿ ಈ ರೀತಿಯ ಜನರಿಂದ ಸರ್ವರ್ ಗಳಿಗೆ ಗೌರವ…!

Restaurant : ಎಲ್ಲರೂ ಹೋಟೆಲ್ ಹೋಗ್ತೇವೆ. ಅಲ್ಲಿ ವಿಭಿನ್ನ ಜನರೂ ಬರ್ತಾರೆ. ವಿಭಿನ್ನ ಯೋಚನೆಗಳೂ ಇರುತ್ತವೆ. ಹೀಗಿರುವಾಗ ಹಣ ಹೆಚ್ಚಿರುವ ವ್ಯಕ್ತಿಗಳು ರೆಸ್ಟೋರೆಂಟ್ ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿದ್ರೂ, ಮಧ್ಯಮ ವರ್ಗದವರೂ ಅಲ್ಲಿಗೇ ಬರ್ತಾರೆ. ಆದ್ರೆ ಇಲ್ಲಿ ಇವರಿಬ್ಬರ ವರ್ತನೆಗಳು ಮಾತ್ರ ಬೇರೆಯೇ ರೀತಿಯಾಗಿರುತ್ತವೆ. ಹೌದು…! ಇಲ್ಲಿ ಪ್ರತಿಯೊಂದೂ ಮ್ಯಾಟರ್ ಆಗುತ್ತೆ. ನಾವು ಹೊರಗಡೆ ಹೇಗೆ ವರ್ತಿಸುತ್ತೇವೆಯೋ ಜನರು ನಮ್ಮನ್ನು ಅದೇ ರೀತಿ ನೋಡ್ತಾರೆ. ಕೆಲವೊಮ್ಮೆ ಈ ಮಧ್ಯಮ ವರ್ಗದ ಜನರು ರೆಸ್ಟೋರೆಂಟ್‌ಗಳಲ್ಲಿ ಸಮಯ ಕಳೆಯಲು ಹೆಚ್ಚು ಉತ್ಸಾಹ ತೋರುತ್ತಾರೆ. ಇತರರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೋ ಎಂಬುದನ್ನು ಯೋಚಿಸದೆ ಅವರು ವ್ಯವಹರಿಸುತ್ತಾರೆ. ಅಷ್ಟೇ ಅಲ್ಲದೇ ಇನ್ನು ಕೆಲವರು ರೆಸ್ಟೋರೆಂಟ್‌ಗಳಲ್ಲಿ ಕೂಡ ಕಡಿಮೆ ಖರ್ಚಿನ ಪದ್ಧತಿಯನ್ನು ಅನುಸರಿಸುತ್ತಾರೆ. ಉದಾಹರಣೆಗೆ ; ಮಧ್ಯಮ ವರ್ಗದವರು ಹೆಚ್ಚಾಗಿ ಆಡಂಬರಕ್ಕೆ ಒತ್ತು ಕೊಡುವ ಜನರಲ್ಲ. ಬದಲಾಗಿ ಸಾಧ್ಯವಾದಷ್ಟು ಗದ್ದಲದಿಂದ ದೂರವಿದ್ದು ಪ್ರತ್ಯೇಕ ಆಸನವನ್ನು ಅವರು ಕಾಯ್ದುಕೊಳ್ಳುತ್ತಾರೆ. ಜನಜಂಗುಳಿಯಿಂದ ದೂರವಿರಲು ಆರಾಮವಾಗಿ ಆಹಾರ ಸವಿಯಲು ಬಯಸುತ್ತಾರೆ.

ಇನ್ನು ಕೆಲವೊಮ್ಮೆ ಮಧ್ಯಮ ವರ್ಗದ ಜನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿ ಆಹಾರಕ್ಕೆ ಎಷ್ಟು ಬೆಲೆಯಾಗುತ್ತದೆ ಎಂಬುದನ್ನು ಮೆನು ನೋಡಿ ಲೆಕ್ಕ ಹಾಕುತ್ತಾರೆ. ತಮ್ಮ ಇತಿಮಿತಿಯೊಳಗೆ ಖರ್ಚುಮಾಡಲು ಬಯಸುತ್ತಾರೆ. ಇತರರು ತಮ್ಮನ್ನು ನೋಡುತ್ತಾರೆ ಎಂಬುದನ್ನು ಆಲೋಚಿಸದೆಯೇ ಅವರು ಲೆಕ್ಕಾಚಾರ ಮಾಡುತ್ತಾರೆ. ಮೆನುವಿನಲ್ಲಿ ಬರೆದಿರುವ ಆಹಾರಗಳು ಮತ್ತು ಅದರ ಮೌಲ್ಯವನ್ನು ಕೂಡಿಸಿ, ಕಳೆದು ನಂತರ ಆರ್ಡರ್ ಕೊಡುತ್ತಾರೆ. ಒಬ್ಬರಿಗೆ ಎಷ್ಟಾಗುತ್ತೆ, ಮೂರು ಜನರಿದ್ದರೆ ಎಷ್ಟಾಗುತ್ತೆ ಅನ್ನೋದೇ ಅವರ ಲೆಕ್ಕಾಚಾರವಾಗಿ ಹೋಗುತ್ತದೆ.
ಹಾಗೆಯೇ, ಸರ್ವರ್‌ಗಳಿಗೆ ಗೌರವ ನೀಡಿ ಸಂಬೋಧಿಸುವುದು ಮಧ್ಯಮ ವರ್ಗದ ಜನರಿಂದ ಕಲಿಯಬೇಕಾಗುತ್ತದೆ. ಅವರು ಉತ್ತಮವಾಗಿ ನಡೆದುಕೊಳ್ಳುತ್ತಾರೆ. ಸರ್ವರ್‌ಗಳು, ವೇಟರ್‌ಗಳನ್ನು ರಾಜಮನೆತನದವರಂತೆ ನಡೆಸಿಕೊಳ್ಳುತ್ತಾರೆ. ಅವರನ್ನು ಗೌರವಯುತವಾಗಿ ಮಾತನಾಡಿಸಿ ಕೆಲವೊಮ್ಮೆ ಪರಿಚಯವನ್ನೂ ಮಾಡಿಕೊಳ್ಳುವ ಪ್ರಯತ್ನ ಮಾಡ್ತಾರೆ. ಬಜೆಟ್‌ನಲ್ಲಿ ಉಳಿಯುವುದಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಾರೆ. ತಿಂಗಳಿಗೊಮ್ಮೆಯಾದರೂ ಅವರು ರೆಸ್ಟೋರೆಂಟ್‌ಗೆ ಹೋಗುವುದಾದರೂ ಮಿತವ್ಯಯಕ್ಕೆ ಆದ್ಯತೆ ನೀಡುತ್ತಾರೆ. ಬಿಲ್ ಬಂದ ಬಳಿಕ ಕೂಡ ಪ್ರತಿಯೊಂದನ್ನೂ ಪರಿಶೀಲಿಸುತ್ತಾರೆ.

ಮಧ್ಯಮ ವರ್ಗದವರು ತಮಗೆ ಬಂದ ಖಾದ್ಯಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ದುಬಾರಿ ರೆಸ್ಟೋರೆಂಟ್‌ಗಳಿಗೆ ಅವರು ಬಂದಿದ್ದರೂ ಪ್ರತಿಯೊಂದನ್ನು ಚೆಕ್ ಮಾಡುತ್ತಾರೆ. ಯಾವುದು ಹೆಚ್ಚಾಯಿತು, ಕಡಿಮೆಯಾಯಿತು ಎಂಬುದನ್ನು ವಿಶ್ಲೇಷಿಸುತ್ತಾರೆ. ಬಜೆಟ್‌ಗೆ ಆದ್ಯತೆ ನೀಡುವ ವರ್ಗವು ದುಬಾರಿ ಖರ್ಚು ಮಾಡಲು ಬಯಸುವುದಿಲ್ಲ. ಇನ್ನು, ಊಟ, ತಿಂಡಿಯ ಬಳಿಕವೂ ಕೆಲವರು ಸುಮ್ಮನೆ ಹರಟೆ ಹೊಡೆಯಲು ಟೇಬಲ್ ಅನ್ನು ಬಳಸುತ್ತಾರೆ. ಇದರಿಂದ ನಿಮ್ಮ ಬಗ್ಗೆ ಇತರರಿಗೆ ಋಣಾತ್ಮಕ ಅಭಿಪ್ರಾಯ ಉಂಟಾಗಬಹುದು. ನಿಮ್ಮ ಹರಟೆ ಇತರರಿಗೆ ತೊಂದರೆಯನ್ನುಂಟು ಮಾಡಬಹುದು. ಹಾಗಾಗಿ, ಈ‌ತರಹದ ರೆಸ್ಟೋರೆಂಟ್ ಗಳಲ್ಲಿ‌ ನೀವು ಹೋಗುವುದಿದ್ದರೆ ನಿಮ್ಮ ಸುತ್ತಮುತ್ತಲಿನ ಜನರು‌ ನಿಮ್ಮನ್ನು ಹೇಗೆ ನೋಡ್ತಾರೆ ಅನ್ನೋದನ್ನು ಯೋಚಿಸಬೇಕಾಗುತ್ತದೆ.

ಇದನ್ನೂ ಓದಿ :Election : ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿಂದ ಒಂದು ಲಕ್ಷಕ್ಕೂ ಅಧಿಕ ಜಾಮೂನ್ ತಯಾರಿ

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page