ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

BBK12: ಧ್ರುವಂತ್‌ ತಲೆಯಲ್ಲಿ ಸೆಗಣಿ ತುಂಬಿದೆ..ಮಾಳು ಟಾಂಗ್!!

BBK12:‌ ಬಿಗ್ ಬಾಸ್‌ ಮನೆಯಲ್ಲಿ ಮಾಳು ನಿಪನಾಳ ಈ ವಾರದ ಕ್ಯಾಪ್ಟನ್‌ ಆಗಿ ಆಟ ಆಡಿಸುತ್ತಿದ್ದಾರೆ. ಇದರಿಂದ ಮನೆಯವರೆಲ್ಲರೂ ಕೂಡ ಮಾಳು ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಾ ಇದ್ದಾರೆ.  ಮಾಳುಗೆ ಆಟವೇ ಅರ್ಥ ಆಗಿಲ್ಲ ಅಂತ ಧ್ರುವಂತ್‌ ಹೇಳಿದ್ದಾರೆ.

ಅಶ್ವಿನಿಗೌಡ, ಜಾಹ್ನವಿ, ಸುಧಿ, ರಾಶಿಕಾ, ರಕ್ಷಿತಾ, ರಿಷಾ, ಧ್ರುವಂತ್  ಈ ವಾರ ನಾಮಿನೇಟ್ ಆಗಿದ್ದಾರೆ. ಮಾಳುಗೆ ಈ ವಾರ ಕ್ಯಾಪ್ಟನ್ ಆಗಿರುವುದರಿಂದ  ಒಂದು ವಿಶೇಷ ಅಧಿಕಾರ ನೀಡಲಾಗಿದೆ. ಈ ವಾರ ಯಾರನ್ನು ನಾಮಿನೇಟ್ ಮಾಡಬೇಕು ಎಂಬ  ಅಧಿಕಾರ ಮಾಳುಗೆ ಇತ್ತು. ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರನ್ನು ಮಾಳು ನಿಪನಾಳ  ನಾಮಿನೇಟ್ ಮಾಡಿದ್ದಾರೆ. ಇನ್ನು ಈ ಹಿಂದೆ ಬಿಗ್ ಬಾಸ್ ಮನೆಯ  ನಿಯಮ ಉಲ್ಲಂಘನೆ ಮಾಡಿದ್ದರಿಂದ ರಿಷಾ ಅವರನ್ನು ಕಿಚ್ಚ ಸುದೀಪ್  ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಒಟ್ಟು 7 ಜನರ ಮೇಲೆ ನಾಮಿನೇಟ್‌ ಆಗಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಧ್ರುವಂತ್‌ ಮಾತನಾಡಿದ್ದು ತಪ್ಪು ಅಂದ ಮಾಳು!!

ಕಾರಣ ನೀಡಿ ಮಾಳು ನಿಪನಾಳ ಅವರು 6 ಜನರನ್ನು ನಾಮಿನೇಟ್ ಮಾಡಬೇಕಿತ್ತು. ಧ್ರುವಂತ್ ಅವರನ್ನು ಸಗಣಿಗೆ ಹೋಲಿಸಿ, ನಿಮ್ಮ ತಲೆಯಲ್ಲಿ ಸೆಗಣಿ ತುಂಬಿದೆ ಎಂದು ಹೇಳಿದ್ದಾರೆ. ನಂತರ ಧ್ರುವಂತ್‌ ಮೇಲೆ ಸಗಣಿ ನೀರು ಸುರಿಯಲಾಯಿತು. ಹೆಣ್ಮಕ್ಕಳ ಬಗ್ಗೆ ಧ್ರುವಂತ್ ಮಾತನಾಡಿದ್ದ ಸರಿಯಲ್ಲ ಎಂದು ಮಾಳು ನಾಮಿನೇಟ್ ಮಾಡಿದರು. ಕಾಕ್ರೋಜ್ ಸುಧಿ ಅವರನ್ನು ಕೆಸರಿಗೆ ಹೋಲಿಸಿ ಅವರ ಮೇಲೆ ಕೆಸರು ಸುರಿಯಲಾಯಿತು. ‘ಮಾಡಿದ ತಪ್ಪನ್ನು ಒಪ್ಪಿಕೊಳ್ಳಲ್ಲ.  ಬೇರೆಯವರ ಮೇಲೆ ಕೆಸರು ಎರಚುತ್ತಾರೆ ಎಂದು ಕಾರಣ ನೀಡಿ ಸುಧಿಯನ್ನು ನಾಮಿನೇಟ್ ಮಾಡಿದ್ದಾರೆ.

ರಕ್ಷಿತಾ ಶೆಟ್ಟಿ ಮೇಲೆ ತಣ್ಣೀರು ಸುರಿದು,  ರಕ್ಷಿತಾ  ಯಾವಾಗಲೂ ಮಲಗಿಕೊಂಡು ಇರುತ್ತಾಳೆ. ಹಾಗಾಗಿ, ತಣ್ಣೀರು ಹಾಕುತ್ತೇನೆ’ ಎಂದು ಮಾಳು ನಿಪನಾಳ ಹೇಳಿದರು. ಅಶ್ವಿನಿ ಗೌಡ ಮೇಲೆ ಕಪ್ಪು ನೀರು ಎರೆಚಿ ‘ಕಲ್ಮಶ ಎಂಬುದು ಅವರಲ್ಲಿ ಬಹಳ ಇದೆ. ಒಬ್ಬರನ್ನೂ ಸರಿಯಾದ ರೀತಿ ನೋಡಲ್ಲ. ಒಂದಿನ ಚೆನ್ನಾಗಿ ಇದ್ದರೆ ಮರುದಿನ ಅವರ ಜೊತೆ ಚೆನ್ನಾಗಿ ಇರಲ್ಲ ಎಂಬ ಕಾರಣ ನೀಡಿ ಅಶ್ವಿನಿ ಗೌಡ ಅವರನ್ನು ಕೂಡ ನಾಮಿನೇಟ್ ಮಾಡಿದ್ದಾರೆ.

ರಾಶಿಕಾ ಮಾಳು ಫುಲ್‌ ಫೈಟ್..!

ಮಾಳು ರಾಶಿಕಾ ಶೆಟ್ಟಿ ಅವರನ್ನು ಕಸಕ್ಕೆ ಹೋಲಿಸಿ, ‘ಯಾರ ಜೊತೆಗೂ ಅವರು ಬೆರೆಯಲ್ಲ. ನನ್ನ ಜೊತೆ ಮಾತನಾಡಿಲ್ಲ. 4 ಜನರ ಜೊತೆ ಕುಳಿತು 2 ಗಂಟೆ ಮಾತನಾಡಿದ್ದನ್ನು ನಾನು ನೋಡಿಲ್ಲ. ಬೇಕಾದವರ ಜೊತೆ ಮಾತ್ರ ಮಾತನಾಡುತ್ತಾರೆ’ ಎಂಬ ಕಾರಣವನ್ನು ನೀಡಿದ್ದಾರೆ, ಇದಕ್ಕೆ  ಮಾಳು ವಿರುದ್ಧ ರಾಶಿಕಾ ಕೂಗಿ ರಂಪಾಟ ನಡೆಸಿದ್ದಾರೆ. ಜಾಹ್ನವಿಗೆ ಚಿಣಿಮಿಣಿ ಅಂತ ಹೇಳಿ, ತಮ್ಮ ಬಗ್ಗೆಯೇ ಎಲ್ಲರೂ ಗಮನ ನೀಡಬೇಕು ಎಂಬ ಉದ್ದೇಶದಿಂದ ಜಾಹ್ನವಿ ಮಾತನಾಡುತ್ತಾರೆ. ಹೈಲೈಟ್ ಆಗಲಿ ಅಂತ ಅವರು ಈ ರೀತಿ ಮಾಡುತ್ತಾರೆ’ ಎಂದು ಮಾಳು ಕಾರಣ ನೀಡಿದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page