BBK12: ಬಿಗ್ ಬಾಸ್ ಮನೆಯಲ್ಲಿ ಮಂಗಳೂರಿನ ಇಬ್ಬರು ವ್ಯಕ್ತಿಗಳು ಇದ್ದಾರೆ. ಅದರಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ತುಳುನಾಡಿನ ಪ್ರತಿಭೆಗಳಾಗಿದ್ದಾರೆ. ತಮ್ಮ ಆಟಗಳನ್ನು ಉತ್ತಮವಾಗಿ ಆಡುತ್ತಾ ಜನರ ಪ್ರೀತಿಯನ್ನು ಗಳಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೇಲಿ ಮಾತಲ್ಲೇ ಗತ್ತು ತೋರಿಸುವ ಮಾಳು ಆಟ ಹೇಗಿದೆ.? ಈತ ನಿಜಕ್ಕೂ ಮುಗ್ಧನಾ?
ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಮಂಗಳೂರಿನ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರ ಮಧ್ಯೆ ಒಂದಿಷ್ಟು ದಿನಗಳಿಂದ ಬಿರುಕು ಬಿದ್ದಿದೆ. ಅದರಲ್ಲೂ ಪ್ರತಿ ಬಾರಿ ಧ್ರುವಂತ್ ಅವರು ರಕ್ಷಿತಾ ಶೆಟ್ಟಿ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ, ಮನೆಯಲ್ಲಿ ಕನ್ನಡ ಗೊತ್ತಿದ್ದರೂ ಕೂಡ ನಾಟಕವನ್ನು ಮಾಡುತ್ತಿದ್ದಾಳೆ ಎಂದು ಧ್ರುವಂತ್ ಅವರು ಪ್ರತಿ ಬಾರಿ ಚುಚ್ಚಿ ಮಾತನಾಡುತ್ತಾರೆ. ಇದರಿಂದ ಧ್ರುವಂತ್ ಅವರು ಎಲ್ಲರ ಎದುರುಗಡೆ ಬಹಳ ತಪ್ಪಾಗಿ ಮಾತನಾಡುತ್ತಿದ್ದಾರೆ.
ರಕ್ಷಿತಾ ಫುಲ್ ಫೇಕ್..ಧ್ರುವಂತ್ !
ಈ ಹಿಂದೆ ಧ್ರುವಂತ್ ಅವರು ಅಶ್ವಿನಿ ಗೌಡ ಕಾಕ್ರೋಚ್ ಸುಧಿ ಹಾಗೂ ಇತರರ ಜೊತೆಗೆ ರಕ್ಷಿತಾ ಶೆಟ್ಟಿ ಬಗ್ಗೆ ಬಹಳ ತಪ್ಪಾಗಿ ಮಾತನಾಡಿದ್ದಾರೆ. ರಕ್ಷಿತಾ ಶೆಟ್ಟಿಗೆ ಕನ್ನಡ ತುಂಬಾ ಚೆನ್ನಾಗಿ ಬರುತ್ತದೆ. ನಾನು ಅವಳ ಬ್ಲಾಗ್ ಗಳನ್ನು ನೋಡುತ್ತಿದ್ದೆ, ಅದರಲ್ಲಿ ಅವಳು ಮಾತನಾಡುವ ಶೈಲಿ ವಿಭಿನ್ನವಾಗಿದೆ. ಆದರೆ, ರಕ್ಷಿತಾ ಶೆಟ್ಟಿಗೆ ಕನ್ನಡ ತುಂಬಾ ಚೆನ್ನಾಗಿ ಬರುತ್ತದೆ. ಆದರೆ ಅವಳು ಮನೆಯ ಒಳಗಡೆ ಬಹಳ ನಾಟಕೀಯವಾಗಿ ವರ್ತಿಸುತ್ತಿದ್ದಾಳೆ. ಇದು ರಕ್ಷಿತಾ ಶೆಟ್ಟಿ ಅಲ್ಲ. ಅವಳು ಕಂಪ್ಲೀಟ್ ಆಗಿ ಮನೆಯೊಳಗಡೆ ನಾಟಕೀಯವಾಗಿ ಇದ್ದಾಳೆ ಎಂದು ಧ್ರುವಂತ್ ಮನೆಯ ಮಂದಿಗೆ ರಕ್ಷಿತಾ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮೈಸೂರಿನ ಜೈಲಿನಲ್ಲೂ ನಡೀತಿದ್ಯಾ ಕೈದಿಗಳಿಗೆ ಆತಿಥ್ಯ….?
ಮಲ್ಲಮ್ಮ ಮನೆಯಿಂದ ಹೋದಮೇಲೆ ಧ್ರುವಂತ್ ಒಬ್ಬಂಟಿ!!
ಇನ್ನು ಮಲ್ಲಮ್ಮ ಇರುವಾಗ ಧ್ರುವಂತ್ ಪ್ರತಿ ಬಾರಿ ಮಲ್ಲಮ್ಮನ ಜೊತೆ ಇರುತಿದ್ದರು. ರಕ್ಷಿತಾ ಕೂಡ ಮಲ್ಲಮ್ಮನ ಜೊತೆಗೆ ಜಾಸ್ತಿಯಾಗಿ ಬಾಂಡಿಂಗ್ ಇಟ್ಟುಕೊಂಡಿದ್ದಳು. ಮಲ್ಲಮ್ಮ ಮನೆಯಿಂದ ಹೊರಗಡೆ ಹೋದಮೇಲೆ ಧ್ರುವಂತ್ ಒಬ್ಬಂಟಿಯಾಗಿ ಇದ್ದಾರೆ. ಇನ್ನು ರಕ್ಷಿತಾ ಶೆಟ್ಟಿ ಧ್ರುವಂತ್ ಅವರನ್ನು ಪ್ರತಿ ಬಾರಿ ಅಣ್ಣ ಅಣ್ಣ ಅಂತ ಕರೆದುಕೊಂಡು ಮಾತನಾಡುತ್ತಾರೆ. ಆಕೆ ತನ್ನ ಊರಿನವರ ಅಂತ ಬಹಳ ಆತ್ಮೀಯತೆಯಿಂದ ಮಾತನಾಡಲು ಮುಂದೆ ಹೋಗುತ್ತಾಳೆ. ಆದರೆ ಧ್ರುವಂತ್ ಎಲ್ಲೋ ಒಂದು ಕಡೆ ಬಹಳ ಆಟಿಟ್ಯೂಡ್ ಇರುವ ತರಹ ವರ್ತಿಸುತ್ತಿದ್ದಾರೆ. ಒಬ್ಬಂಟಿಯಾಗಿ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಇನ್ನು ಕೆಲವೊಮ್ಮೆ ಗಿಲ್ಲಿಯ ವಿರುದ್ಧವಾಗಿ ಮಾತನಾಡುತ್ತಾರೆ. ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿ ಬಹಳ ಹೊಂದಾಣಿಕೆಯಿಂದ ಮನೆಯಲ್ಲಿದ್ದಾರೆ. ಗಿಲ್ಲಿ ಪ್ರತಿ ಬಾರಿ ರಕ್ಷಿತಾ ಶೆಟ್ಟಿಗೆ ಸಪೋರ್ಟ್ ಮಾಡುತ್ತಾರೆ.
ಪದೇ ಪದೇ ರಕ್ಷಿತಾ ಬಗ್ಗೆ ನೆಗೆಟಿವ್ ಮಾತನಾಡುವ ಧ್ರುವಂತ್..!
ರಕ್ಷಿತಾ ಶೆಟ್ಟಿ, ಒಬ್ಬಳೇ ಬಳಿ ಕ್ಯಾಮೆರಾದ ಎದುರು ಬಂದು ನಿಂತು ಮಾತನಾಡುತ್ತಾಳೆ. ಇದರಿಂದ ತಿಳಿಯುತ್ತದೆ ಆಕೆ ಮನೆಯಲ್ಲಿ ಮುಖವಾಡ ಧರಿಸಿಲ್ಲ, ತಾನು ಮುಂಚೆ ಹೇಗಿದ್ದೇನೋ ಹಾಗೆ ಮನೆಯ ಒಳಗಡೆ ಇದ್ದಾಳೆ ಅಂತ ತಿಳಿಯುತ್ತದೆ. ಇದರಿಂದ ಜನರ ಪ್ರೀತಿಯನ್ನು ಈಕೆ ಗಳಿಸುತ್ತಿದ್ದಾಳೆ. ಆದರೆ ಬಿಗ್ ಬಾಸ್ ಮನೆಯ ಒಳಗಡೆ ಎಲ್ಲರೂ ಕೂಡ ರಕ್ಷಿತಾ ಶೆಟ್ಟಿಯನ್ನ ಬಹಳ ನಾಟಕ ಹೇಳುತ್ತಾರೆ. ಕಳೆದ ಎಪಿಸೋಡ್ ನಲ್ಲಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡಿ ಎಂಥ ಗೊತ್ತುಂಟಾ ಗೈಸ್ ಇದೆಲ್ಲಾ ರಕ್ಷಿತಾ ಮಾಡೋದು ನಾಟಕ. ಶನಿವಾರ ಮಾತ್ರ ಕನ್ನಡ ಬರಲ್ಲ. ಅದೇ ಜಗಳಕ್ಕೆ ಬಿಡಿ ಯಾವುದೇ ಭಾಷೆಯ ಪ್ರಾಬ್ಲಮ್ ಇರಲ್ಲ ಇದೇ ಅವರ ನಾಟಕೀಯ ಫೇಕ್ ಮುಖವಾಡ ಅಂತ ಧ್ರುವಂತ್ ಈ ಹಿಂದೆ ನಾಲಗೆ ಹರಿ ಬಿಟ್ಟಿದ್ದರು. ಇನ್ನು ರಕ್ಷಿತಾ ಶೆಟ್ಟಿ ಮೂಲತಃ ಸ್ವಭಾವವೇ ಅದೇ ರೀತಿಯಾಗಿದೆ ಇದರ ಬಗ್ಗೆ ಮನೆಯವರೆಲ್ಲರೂ ಕೂಡ ಈಗ ತಪ್ಪಾಗಿ ಅಂದುಕೊಂಡಿದ್ದಾರೆ. ಇದಕ್ಕೆಲ್ಲ ಪುಷ್ಟಿ ನೀಡುವಂತೆ ಧ್ರುವಂತ್ ಆಗಾಗ ರಕ್ಷಿತ ಶೆಟ್ಟಿ ಬಗ್ಗೆ ಬಹಳ ನೆಗೆಟಿವ್ ಆಗಿ ಮಾತುಗಳನ್ನು ಆಡುತ್ತಾರೆ ಇದರ ಬಗ್ಗೆ ನಿಮಗೆ ಏನನಿಸುತ್ತದೆ ತಿಳಿಸಿ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











