ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bigboss season 12: ಮೌನಿಯಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಚಂದ್ರಪ್ರಭ..!

Bigboss season 12: ಬಿಗ್‌ ಬಾಸ್‌ ಮನೆಯಿಂದ ಚಂದ್ರಪ್ರಭ ಔಟ್‌ ಆಗಿದ್ದಾರೆ. ಈ ಹಿಂದೆಯೇ ಚಂದ್ರಪ್ರಭ ಬೇಸರದಿಂದ ಮನೆಯಿಂದ ಹೊರಹೋಗಲು ನಿರ್ಧರಿಸಿದ್ದರು. ಆದರೆ ಸ್ಪರ್ಧಿಗಳು ಚಂದ್ರಪ್ರಭ ಅವರನ್ನು ಮನವೊಲಿಸಿ ಮತ್ತೆ ಮನೆಗೆ ಕರೆತಂದರು ಆದರೂ ಚಂದ್ರಪ್ರಭ ಮನೆಯಿಂದ ಹೊರಬಂದರು.

ಈ ವಾರ ಮನೆಯಲ್ಲಿ 10 ಮಂದಿ ನಾಮಿನೇಟ್‌ ಆಗಿದ್ದರು. ಅವರಲ್ಲಿ ಚಂದ್ರಪ್ರಭ ಕೂಡ ಒಬ್ಬರು. ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲರೂ ಸೇವ್‌ ಆಗಿ, ಕೊನೆಯಲ್ಲಿ ಕಾಕ್ರೋಚ್‌ ಸುಧಿ ಮತ್ತು ಚಂದ್ರಪ್ರಭ ಉಳಿದುಕೊಂಡಿದ್ದರು. ಎಲಿಮಿನೇಷನ್‌ ಭಯದಲ್ಲಿದ್ದ ಕಾಕ್ರೋಚ್‌ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್‌ ಪವರ್‌ ಬಳಸಿಕೊಂಡು ಸೇವ್‌ ಆದರು. ಚಂದ್ರಪ್ರಭ ಮನೆಯಿಂದ ಹೊರಬರಬೇಕಾಯಿತು.

ಕಿಚ್ಚನ ಪಂಚಾಯ್ತಿಯಲ್ಲಿ ಚಂದ್ರಪ್ರಭನ ನಡೆಗೆ ಸ್ಪರ್ಧಿಗಳು ಶಾಕ್‌ ಆದರು. ಕೊನೆಗೆ ಮನವೊಲಿಸಿ ಮನೆಯೊಳಗಡೆ ಕರೆತಂದರು. ಗಿಲ್ಲಿ ಮೇಲೆ ಕೈಮಾಡಿ ವಿವಾದಕ್ಕೆ ಸಿಲುಕಿದ್ದ ರಿಷಾ ಮನೆಯಿಂದ ಹೊರಗೆ ಹೋಗಬೇಕಾ..? ಬೇಡವಾ ಎಂಬ ಬಗ್ಗೆ ಸ್ಪರ್ಧಿಗಳಿಂದ ಬಿಗ್‌ ಬಾಸ್‌ ಅಭಿಪ್ರಾಯ ಕೇಳುತ್ತಿದ್ದರು. ಈ ವೇಳೆ ಸುದೀಪ್ ‘ಯಾಕೆ ಹೊರಹೋಗಿದ್ದು’ ಎಂದು ಚಂದ್ರಪ್ರಭಗೆ ಪ್ರಶ್ನೆ ಮಾಡಿದರು. ‘ನನಗೆ ಮನೆಯಲ್ಲಿ ಇರೋದಕ್ಕೆ ಇಷ್ಟ ಇಲ್ಲ’ ಎಂದು ಚಂದ್ರಪ್ರಭ ಮಾತನಾಡಿದರು. ಕೊನೆಗೆ ಚಂದ್ರಪ್ರಭ ಎಲಿಮಿನೇಟ್‌ ಆಗಿದ್ದಾರೆ.

ಕಾವ್ಯ ಗಿಲ್ಲಿ ಬಗ್ಗೆ ಚಂದ್ರಪ್ರಭ ರಾಂಗ್‌ ಹೇಳಿಕೆ !

ಇನ್ನು ಚಂದ್ರಪ್ರಭ ಕಾವ್ಯಾ ಶೈವ ಹಾಗೂ ಗಿಲ್ಲಿ ನಟನ ಗೆಳೆತನದ ಬಗ್ಗೆ ಚಂದ್ರಪ್ರಭ ಕೆಟ್ಟದಾಗಿ ಮಾತನಾಡಿದ್ದರು. ಗಿಲ್ಲಿ ಹಾಗೂ ಕಾವ್ಯಾ ಲವ್‌ ಮಾಡ್ತಿದ್ದಾರೆ ಅನ್ನೋ ತರ ಚಂದ್ರಪ್ರಭ ಮಾತನಾಡಿದ್ದರು. ಈ ಪದಗಳು ಕಾವ್ಯಾಗೆ ಬೇಸರ ತಂದಿದ್ದವು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದ್ದರೂ ಅದನ್ನೂ ಕೇಳಲಿಲ್ಲ. ಶನಿವಾರ ಈ ವಿಚಾರ ಚರ್ಚೆಗೆ ಬಂದಿದೆ. ಸರಿಯಾಗಿ ಇರಬೇಕು ಎಂದು ನುಡಿಯುವ ನೀವು, ರಿಷಾ ಜೊತೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ ಎಂದು ಸುದೀಪ್ ಪ್ರಶ್ನೆ ಮಾಡಿದರು. ರಿಷಾ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ವಿಡಿಯೋನ ಹಾಕಿದರು. ಆ ಬಳಿಕ ಅವರು ತುಂಬಾನೇ ಸೈಲೆಂಟ್ ಆಗಿ ಬಿಟ್ಟರು. ಕೊನೆಗೆ ಸುಧಿ ಅವರು ತಮ್ಮ ವಿಶೇಷ ಅಧಿಕಾರ ಸೇವ್ ಆಗಿ, ಚಂದ್ರಪ್ರಭ ಔಟ್ ಆಗುತ್ತಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page