Ugram Manju: ಬಿಗ್‍ಬಾಸ್ ಸೀಸನ್ ಮಾಜಿ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಂಜು ಮದುವೆಯಾಗುವ ಹುಡುಗಿ ಯಾರು..?
ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಟ ಉಗ್ರಂ ಮಂಜು ಶೇರ್ ಮಾಡಿಕೊಂಡಿದ್ದಾರೆ. ಉಗ್ರಂ ಮಂಜು 2026ರ ಜನವರಿ ತಿಂಗಳಿನಲ್ಲಿ ಹಸೆ ಮಣೆ ಏರಲಿದ್ದಾರೆ ಎನ್ನಲಾಗುತ್ತಿದ್ದು, ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. ಬಿಗ್ ಬಾಸ್ ಉಗ್ರಂ ಮಂಜು ಸಂಧ್ಯಾ ಎನ್ನುವವರ ಕೈ ಹಿಡಿಯಲಿದ್ದು, ಇಂದು ಸರಳವಾಗಿ ಹೂ ಮುಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಜು ಮದ್ವೆಯಾಗ್ತಿರುವ ಹುಡುಗಿ ಹೆಸರು ಸಂಧ್ಯಾ. ಇವರು ಖಾಸಗಿ ಆಸ್ಪತ್ರೆಯ ಅಡ್ಮಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಧ್ಯಾ ಮೂಲತಃ ತುಮಕೂರಿನವರಾಗಿದ್ದು, ಪೀಣ್ಯದಲ್ಲಿ ವಾಸವಾಗಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡ ಮಂಜು ಜನವರಿಯಲ್ಲಿ ಮದುವೆಗೆ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಮತಗಳ್ಳತನ ಆರಂಭ: ಎಸ್.ಸುರೇಶ್ ಕುಮಾರ್!
ಈ ಹಿಂದೆ ಗೌತಮಿ ಹಿಂಟ್ ಕೊಟ್ಟಿದ್ದರು..!
ಇತ್ತೀಚೆಗೆ ಗೌತಮಿ ಜಾಧವ್ ಹೊಸ ಹುಡುಗಿ ಶೀಘ್ರದಲ್ಲಿ ಬರಲಿದ್ದಾರೆ ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಉಗ್ರಂ ಮಂಜು ಮದುವೆಯಾಗಲಿದ್ದಾರಾ? ಹಾಗಾದರೆ ಹುಡುಗಿ ಯಾರು? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆಲ್ಲ ಉತ್ತರ ಈಗ ಸಿಕ್ಕಿದೆ. ಉಗ್ರಂ ಮಂಜು ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದರು. ಅವರು ದೊಡ್ಮನೆಯಲ್ಲಿರುವಾಗಲೇ ಸಿನಿಮಾ ತೆರೆ ಕಂಡಿತು. ಸದ್ಯ ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ನಟನೆಯ ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಮ್ಯಾಕ್ಸ್ ಮಂಜು ನಟಿಸುತ್ತಿದ್ದಾರೆ.
ಮದುವೆ ಬಗ್ಗೆ ಮಂಜು ಪೋಸ್ಟ್..!
ಎಂಗೇಜ್‌ಮೆಂಟ್ ಫೋಟೋಗಳನ್ನು ಶೇರ್ ಮಾಡಿರುವ ‘ಉಗ್ರಂ’ ಮಂಜು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ.. ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ..ಎಂದು ಹೇಳಿಕೊಂಡಿದ್ದಾರೆ. ಮಂಜು ಹಂಚಿಕೊಂಡಿರುವ ಫೋಟೋಗಳಿಗೆ ಸಾವಿರಾರು ಲೈಕ್ಸ್ ಬಂದಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











