Hair Health : ಕರಿಬೇವನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಅಂದ್ರೆ ನಾವು ಆಹಾರಕ್ಕೆ ಒಗ್ಗರಣೆ ನೀಡಲು ಕರಿಬೇವನ್ನು ಉಪಯೋಗಿಸುತ್ತೇವೆ. ಆದರೆ, ಹಲವಾರು ವರದಿಗಳ ಪ್ರಕಾರ ಕೂದಲು ಉದುರುವುದನ್ನು ತಡೆಯುವುದಕ್ಕೆ ಕರಿಬೇವಿನ ಎಣ್ಣೆ ಬಹಳ ಅತ್ಯುತ್ತಮ ದಾರಿಯಾಗಿದೆ ಎಂದು ತಿಳಿಸಲಾಗಿದೆ.
ಕೂದಲನ್ನು ಬೇರಿನಿಂದ ತುದಿಯವರೆಗೆ ಪೋಷಿಸುತ್ತದೆ ;
ಮೊದಲಿಗೆ ತಲೆಯ ಮೇಲೆ ಕೂದಲು ಕಡಿಮೆಯಾಗಲು ಪ್ರಾರಂಭವಾಗುತ್ತೆ. ನಂತರ ಬಹುತೇಕ ಕೂದಲುಗಳು ಕಾಣಿಸುವುದೇ ಇಲ್ಲ. ಎಲ್ಲಾ ಕೂದಲು ಉದುರಿ ಹೋಗಿ ಹೊರಗಡೆ ಹೋಗಲು ನಮಗೆ ನಾಚಿಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಕರಿಬೇವಿನ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದಾಗಿದೆ.
ಕರಿಬೇವಿನ ಎಲೆಗಳಲ್ಲಿ ಖನಿಜಗಳು, ವಿಟಮಿನ್ ಗಳು ಹೆಚ್ಚಾಗಿ ಇರೋದ್ರಿಂದ ಇದು ಕೂದಲನ್ನು ಬೇರಿನಿಂದ ತುದಿಯವರೆಗೆ ಪೋಷಿಸುತ್ತದೆ. ಹೌದು…! ಹಾಗಂತ ಕರಿಬೇವಿನ ಎಲೆಗಳನ್ನು ಹಾಗೆಯೇ ಬಿಸಿ ಮಾಡಿ ತಲೆಗೆ ಹಾಕಿಕೊಳ್ಳುವುದು ಅಲ್ಲ. ಬದಲಾಗಿ, ತೆಂಗಿನ ಎಣ್ಣೆಯೊಂದಿಗೆ ಕರಿ ಬೇವಿನ ಎಲೆಗಳನ್ನು ಚೆನ್ನಾಗಿ ಹುರಿದು ಅದು ತಣ್ಣಗಾದ ನಂತರ ಅದನ್ನು ಸೋಸಿ, ಸಂಗ್ರಹಿಸಿಟ್ಟು ಆನಂತರ, ತಲೆಗೆ ಹಚ್ಚಿಕೊಳ್ಳುವುದು ಉತ್ತಮ.
ತಲೆ ಕೂದಲನ್ನು ಇದರಿಂದ ರಕ್ಷಿಸಬಹುದು ಮತ್ತು ಕೂದಲು ಉದ್ದವಾಗಿ ದಪ್ಪವಾಗಿ ಬರಲು, ಕೂದಲುಗಳು ಒಡೆಯುವುದನ್ನು ತಡೆಯಲು, ತಲೆಹೊಟ್ಟುಗಳು ಕಡಿಮೆಯಾಗಲು ಹಾಗೂ ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗುವುದನ್ನು ಕಡಿಮೆ ಮಾಡಲು ಈ ಕರಿಬೇವಿನ ಎಣ್ಣೆಗಳು ಸಹಕಾರಿಯಾಗಿದೆ. ಕರಿಬೇವಿನ ಎಲೆಯ ಎಣ್ಣೆಯನ್ನು ನಿಮ್ಮ ಕೂದಲನ್ನು ತೊಳೆಯುವ ಒಂದೂವರೆ ಗಂಟೆಗಳ ಮೊದಲು ಹಚ್ಚಬೇಕಾಗುತ್ತದೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ನಂತರ ನಿಮ್ಮ ನೆತ್ತಿಗೆ ಹಚ್ಚಿದರೆ ಅದು ಉತ್ತಮ. ಆನಂತರ ನಿಮ್ಮ ಕೂದಲಿಗೆ ಹೊಂದುವ ಶಾಂಪೂವಿನ ಜೊತೆ ಕೂದಲನ್ನು ತೊಳೆದುಕೊಳ್ಳಬೇಕು. ಅಲ್ಲದೇ, ಈ ಎಣ್ಣೆಯನ್ನು ತಲೆಯ ಮೇಲೆ ರಾತ್ರಿ ಇಡೀ ಹಾಗೆಯೇ ಬಿಡಬಹುದು. ಆದರೆ ಎಣ್ಣೆಯುಕ್ತ ಕೂದಲು ಇರುವವರು ಈ ರೀತಿ ಮಾಡಿದರೆ ತಲೆಯಲ್ಲಿ ಮೊಡವೆಯಂತಹ ಚರ್ಮದ ಅಲರ್ಜಿಗಳು ಉಂಟಾಗಬಹುದು. ಆದರೆ, ತುಂಬಾ ಒಣ ಕೂದಲುಗಳು ಇರುವವರು ಈ ಎಣ್ಣೆಯನ್ನು ರಾತ್ರಿಯಿಡೀ ಹಾಗೆಯೇ ಬಿಟ್ಟರೆ ಪ್ರಯೋಜನಕಾರಿಯನ್ನು ಕಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ :National Livestock Mission : ಕೋಳಿ ಸಾಕಣೆ ಜೊತೆ ಕುರಿ, ಹಂದಿಸಾಕಣೆಗೂ 25 ಲಕ್ಷ ರೂ. ಸಹಾಯಧನ
………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/AYP_nK8o1Rw?si=6gOb6xoMtg9GLTeu











