ಬ್ರೇಕಿಂಗ್ ನ್ಯೂಸ್
ದೇಶ

Russia : ಸಮುದ್ರದಲ್ಲಿ ಅನಾಥವಾದ ಸಾವಿರಾರು ಕೋಟಿ‌ ಮೌಲ್ಯದ ಕಚ್ಛಾತೈಲ

Russia : ಅಮೇರಿಕಾ ಹಾಗೂ ಕೆಲವು ಒಕ್ಕೂಟ ರಾಷ್ಟ್ರಗಳು ರಷ್ಯಾ ವಿರುದ್ಧದ ಕಠಿಣ ನಡವಳಿಕೆಯನ್ನು ಸ್ವೀಕರಿಸಿದ್ದರಿಂದ, ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಲ್ಲಿ ಪ್ರಮುಖ ಹಣಕಾಸು ಸಂಸ್ಥೆಗಳ ಮೇಲಿನ ಬ್ಯಾಂಕಿಂಗ್ ಹಾಗೂ ಹಣ ಸಂಚಾರವನ್ನು ನಿರ್ಬಂಧಿಸುವ ಕ್ರಮಗಳು ಜಾರಿ ಮಾಡಲಾಗಿದೆ. ರಷ್ಯಾದ ಇಂಧನ ( ಎಣ್ಣೆ, ಗ್ಯಾಸು) ಮತ್ತು ಸೇವೆಗಳ ಮೇಲೆ ನಿರ್ಬಂಧಗಳು ಬಿದ್ದಿವೆ ಹಾಗೂ ರಷ್ಯಾದ ಉತ್ಸಾಹವನ್ನು ಕಡಿಮೆ ಮಾಡಲು ಇತರ ವಹಿವಾಟುಗಳ (ವಿಶೇಷವಾಗಿ ತಂತ್ರಜ್ಞಾನ) ಮೇಲೆಯೂ ನಿಯಂತ್ರಣಗಳು ವಿಧಿಸಲಾಗಿದೆ.

ಈಗ ಬಂದಿರುವ ವರದಿಯ ಪ್ರಕಾರ ಅಮೇರಿಕಾವು ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧ ತೈಲ ಸಾಮ್ರಾಜ್ಯವನ್ನೇ ತಿರುಗಿ ನೋಡುವಂತೆ ಮಾಡಿದೆ. ಒಂದು ಕಾಲದಲ್ಲಿ ರಷ್ಯಾದ ತೈಲಕ್ಕಾಗಿ‌ ಮುಗಿ ಬೀಳುತ್ತಿದ್ದ ಭಾರತ, ಚೀನಾ ಮತ್ತು ಟರ್ಕಿಯಂತಾ ದೇಶಗಳು ತೈಲ ಆಮದು ಮಾಡಿಕೊಳ್ಳಲು ಹಿಂದೇಟು ಹಾಕಿವೆ. ಇದರ ಪರಿಣಾಮ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಚ್ಚಾತೈಲ ಹಡಗುಗಳಲ್ಲಿ ಫಿಲ್ ಆಗಿ ಸಿದ್ಧವಾಗಿ, ಸಮುದ್ರದ ಮಧ್ಯದಲ್ಲಿ ನಿಂತರೂ ಅದನ್ನು ಕೊಳ್ಳುವವರಿಲ್ಲ.

ರಷ್ಯಾದ ಆದಾಯಕ್ಕೆ ಇದು ದೊಡ್ಡ ಹೊಡೆತ. ಇದು ರಷ್ಯಾವನ್ನು ಕಟ್ಟಿ ಹಾಕಲು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಪ್ಲಾನ್ ಆಗಿದೆ. ರಷ್ಯಾದ ಮೇಲೆ ಮತ್ತಷ್ಟು ಸುಂಕ ಹೇರಲು ಅಮೇರಿಕಾ ತಯಾರಾಗಿದೆ. ಭಾರತದ ರಾಜತಾಂತ್ರಿಕದ ಮೇಲೆ ಇದು ದೊಡ್ಡ ಆತಂಕಕಾರಿ ವಿಷಯವಾಗಿದೆ. ರಷ್ಯಾದಲ್ಲಿ ಅಮೇರಿಕಾದ ಈ ನಿರ್ಧಾರದ ಪರಿಣಾಮವಾಗಿ ರಷ್ಯಾದ ಆರ್ಥಿಕ ವ್ಯವಸ್ಥೆ, ವಿಶೇಷವಾಗಿ ಬಾಹ್ಯ ಹಣಕಾಸು ಸಂವಹನ ಮತ್ತು ರಫ್ತು ಆದಾಯಗಳು ಅನುಮಾನಕ್ಕೆ ಎದುರಾಗಿವೆ. ಇಂಧನ ಮಾರುಕಟ್ಟೆ, ರಫ್ತು-ಆದಾಯ ಮಾರ್ಗಗಳು ಬಿಗಿಯಾಗಿವೆ. ನಿರ್ಬಂಧಗಳನ್ನು ಹಿನ್ನಲೆಯಲ್ಲಿ ರಷ್ಯಾ ಪರ್ಯ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ, ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟಾಗಿದೆ. ಅಲ್ಲದೇ, ಇದೀಗ ಬರೋಬ್ಬರಿ 38 ಕೋಟಿ ಬ್ಯಾರೆಲ್ ತೈಲವನ್ನು ಖರೀದಿಸದೇ ಹಾಗೇ ಉಳಿದಿರುವ ಕಾರಣ ರಷ್ಯಾಕ್ಕೆ ಇದು ಬಹುದೊಡ್ಡ ಆಘಾತವನ್ನು ನೀಡುವ ವಿಚಾರವಾಗಿದೆ.

ಇದನ್ನೂ ಓದಿ : Harish Roy: ಅಪ್ಪ ದೇಶಕ್ಕೋಸ್ಕರ ಕ್ರಿಕೆಟ್‌ ಆಡು ಅಂದ್ರು..ದೈವ ನಮ್ಮ ಕೈ ಬಿಡ್ತು..ಹರೀಶ್‌ ಮಗ ಕಣ್ಣೀರು!

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/2NUxdpIvL2A?si=6xLWN6mRMe2GnCgT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page