ಬ್ರೇಕಿಂಗ್ ನ್ಯೂಸ್
ಕರ್ನಾಟಕ

IPPB : ಕೇವಲ 299 ರೂ. ಪಾವತಿಗೆ 10 ಲಕ್ಷ ರೂ. ವಿಮೆ

IPPB : ಸಂವಹನ ಸೇವೆಗಳ ಜೊತೆಗೆ ಹಲವು ಹಣಕಾಸು ಸೇವೆಗಳನ್ನು ಕೂಡ ನೀಡುವ ಭಾರತದ ಅಂಚೆ ಇಲಾಖೆಯು ಗ್ರಾಮೀಣ ಭಾಗಗಳಲ್ಲಿ ಹೆಸರುವಾಸಿಯಾಗಿದೆ. ಸ್ಪೀಡ್‌ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಕೊರಿಯರ್‌ಗಳಂತಹ ಪಾರ್ಸೆಲ್ ರವಾನೆಗಳು, ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಖಾತೆಗಳು, ವಿಮಾ ಯೋಜನೆಗಳು, ಮನಿ ಆರ್ಡರ್, ಹಣ ವರ್ಗಾವಣೆ, ಐಪಿಪಿಬಿ (ಡಿಜಿಟಲ್ ಬ್ಯಾಂಕಿಗ್) ಇತ್ಯಾದಿ ಹತ್ತು ಹಲವಾರು ಸೇವೆಗಳನ್ನು ನೀಡುತ್ತಾ ಬಂದಿದೆ.

ಕೇವಲ 299 ರೂ. ಪಾವತಿಸಿದರೆ 10 ಲಕ್ಷ ರೂ. ವಿಮೆ‌;
ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಅನೇಕ ರೀತಿಯ ಅಪಘಾತ ವಿಮಾ ಪಾಲಿಸಿಗಳನ್ನು ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ, ಈಗ ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್) ಯು ಕಡಿಮೆ ವೆಚ್ಚದಲ್ಲಿ ‘ಗ್ರೂಪ್ ಪರ್ಸನಲ್ ಆಕ್ಸಿಡೆಂಟಲ್ ಇನ್ಶೂರೆನ್ಸ್’ ಯೋಜನೆಯನ್ನು ನೀಡುತ್ತಿದೆ. ಪಾಲಿಸಿದಾರರು ಈ ಯೋಜನೆಯಡಿ ಕೇವಲ 299 ರೂ. ಪಾವತಿಸಿದರೆ ಸಾಕಾಗುತ್ತದೆ. ಇದರಲ್ಲಿ ಈ ಪಾಲಿಸಿಯವನ್ನು ಮಾಡಿದವರು ಅಪಘಾತದಲ್ಲಿ ಮೃತರಾದರೆ, ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯರಾದರೆ ಪಾಲಿಸಿ ಹಣವಾಗಿ 10 ಲಕ್ಷ ರೂ. ನೀಡಲಾಗುವುದು.

18 ರಿಂದ 65 ವರ್ಷದೊಳಗಿನ ಜನರಿಗೆ ಮಾತ್ರ ಅವಕಾಶ ;
ಯೋಜನೆಯನ್ನು ಬಳಸುವ ಮೊದಲು ನಿಮ್ಮ ಸ್ಥಳೀಯ ಪೋಸ್ಟ್‌ಆಫೀಸ್ ಅಥವಾ IPPB ಶಾಖೆಯಲ್ಲಿ ಹೋಗಿ ನಿಮ್ಮ ವಲಯದ ಖಚಿತ ಮಾಹಿತಿ ಹೊಂದಿರುವುದರ ಬಗ್ಗೆ ತನಿಖೆ ಮಾಡುವುದು ಉತ್ತಮ. ವರದಿಯಲ್ಲಿ ತಿಳಿಸಿದಂತೆ ಅಪಘಾತದಲ್ಲಿ ಕೈ ಅಥವಾ ಕಾಲು ಕೆಲಸ ಮಾಡದಿದ್ದರೂ ಸಹ ಸಂತ್ರಸ್ತೆಯ ಕುಟುಂಬವನ್ನು ಉತ್ತೇಜಿಸುವ ಸಲುವಾಗಿ 10 ಲಕ್ಷ ರೂ. ವಿಮಾ ರಕ್ಷಣೆಯನ್ನು ಒದಗಿಸಲಾಗುವುದು. ಈ ಅರ್ಜಿ ಸಲ್ಲಿಸಲು ಬಯಸುವವರಿಗೆ 18 ರಿಂದ 65 ವರ್ಷ ಆಗಿರಬೇಕು. ಇದಕ್ಕೆ ಹೊರತಾಗಿ ಇತರೆ ಆತ್ಮಹತ್ಯೆ, ಮಿಲಿಟರಿ ಸೇವೆ, ಏಡ್ಸ್, ಬ್ಯಾಕ್ಟೀರಿಯಾ ಸೋಂಕುಗಳಿಂದ ಸಾವು ಸಂಭವಿಸಿದರೆ ಈ ಸೇವೆ ಲಭ್ಯವಿರುವುದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಅಂಚೆ ಕಛೇರಿಗೆ ಭೇಟಿ ನೀಡಿ.

ಇದನ್ನೂ ಓದಿ : Protest : ಅಂತಿಮ ನಿರ್ಧಾರಕ್ಕೆ ಸರ್ಕಾರಕ್ಕೆ ಕರೆ : ಸಂಜೆಯೊಳಗೆ ದರ ನಿಗದಿ

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=ouBPhn5iTQwNIPSm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page