ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: ಅಪ್ರಾಪ್ತ ಮಗನ ದ್ವಿಚಕ್ರ ಚಾಲನೆ – ತಾಯಿಗೆ ಭಾರೀ ದಂಡ

Mangaluru: ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 26 ಸಾವಿರ ದಂಡವನ್ನು ಕೋರ್ಟ್‌ ವಿಧಿಸಿದೆ. ಅಪ್ರಾಪ್ತ ಮಗ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ತಾಯಿಯೊಬ್ಬಳಿಗೆ ದಂಡ ವಿಧಿಸಲಾಗಿದೆ.

ಇತ್ತೀಚಿಗಿನ ದಿನಗಳಲ್ಲಿ ಅಪ್ರಾಪ್ತರಿಗೆ ವಾಹನ ನೀಡುವ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಅಜಾಗರೂಕತೆಯ ಚಾಲನೆ ಮಾಡಿ ಅಪಘಾತ ನಡೆಯುತ್ತಿದೆ. ಹೀಗಾಗಿ ಪೋಷಕರಿಗೆ, ವಾಹನ ನೀಡುವವರಿಗೆ ನ್ಯಾಯಾಲಯ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ.

ಮಂಗಳೂರಿನಲ್ಲಿ ತಮ್ಮ ಅಪ್ರಾಪ್ತ ಮಗನಿಗೆ ಮೋಟರ್‌ ಸೈಕಲ್ ಚಲಾಯಿಸಲು ನೀಡಿದ್ದಕ್ಕಾಗಿ ಆತನ ತಾಯಿಗೆ ನಗರದ 4 ನೇ ಜೆಎಂಎಫ್‌ಸಿ ನ್ಯಾಯಾಲಯ 26,000 ರೂ. ದಂಡ ವಿಧಿಸಿ ಆದೇಶಿದೆ.

ಅಕ್ಟೋಬರ್ 10ರಂದು ಬೈಕಂಪಾಡಿಯಲ್ಲಿ ಹತಿಜಮ್ಮ ಅವರು ತಮ್ಮ ಅಪ್ರಾಪ್ತ ಮಗನಿಗೆ ಚಲಾಯಿಸಲು ದ್ವಿಚಕ್ರ ನೀಡಿದ್ದಾರೆ. ಈ ಬಗ್ಗೆ ಉತ್ತರ ಪೊಲೀಸ್ ಠಾಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿತ್ತು.

ನವೆಂಬರ್ 5ರಂದು ಈ ಪ್ರಕರಣದ ವಿಚಾರಣೆ ನಡೆಸಿದ 4 ನೇ ಜೆ.ಎಂ.ಎಪ್.ಸಿ ನ್ಯಾಯಾಲಯ, ವಾಹನದ ಮಾಲೀಕರಿಗೆ 26,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: Night Sleep : ಆರಾಮದಾಯಕ ನಿದ್ರೆ‌ ನಿಮ್ಮದಾಗಬೇಕಾದರೆ ಹೀಗೆ ಮಾಡಿ…!

===================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=oE6YV4WTyyckN1vM

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page