ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Karwar: ಕಾರವಾರ ಸಮುದ್ರ ತೀರಕ್ಕೆ ಬಂತು ಲಕ್ಷಾಂತರ ಮೀನುಗಳು..! ಜನ ಶಾಕ್‌!!

Karwar: ಇಂದು ಕಾರವಾರದ ಸಮುದ್ರ ತೀರಕ್ಕೆ ಲಕ್ಷಾಂತರ ಮೀನುಗಳ ದಂಡೇ ಹರಿದು ಬಂದಿದ್ದು, ಮೀನುಗಾರರಿಗೆ ನೋಡಿ ಶಾಕ್‌ ಆಗಿದೆ. ಸುತ್ತ ಮುತ್ತಲಿನ ಜನ ಮೀನುಗಳನ್ನು ನೋಡಲು ಗಾಡಿಗಳಲ್ಲಿ ಆಗಮಿಸಿರುವ ಸಂಗತಿ ನಡೆದಿದೆ.

ಇದನ್ನೂ ಓದಿ: ಭೀಕರ ಹಿಮಪಾತ – ಏಳು ಪರ್ವತಾರೋಹಿಗಳು ಸಜೀವ ಸಮಾಧಿ

ರಾಶಿ ರಾಶಿ ಮೀನುಗಳನ್ನು ನೋಡಿದ ಮೀನುಗಾರರಿಗೆ ಫುಲ್‌ ಖುಷ್!

ಕಳೆದ ಹಲವು ತಿಂಗಳಿನಿಂದ ಹವಾಮಾನ ಬದಲಾವಣೆಯಿಂದ ಸಂಪೂರ್ಣ ನೆಲ ಕಚ್ಚಿದ್ದ ಮೀನುಗಾರಿಕೆ ಇನ್ನೇನು ಮತ್ತೆ ಪ್ರಾರಂಭವಾಗುತ್ತದೆ ಎಂದು ಅಂದುಕೊಂಡಿದ್ದ ಬೆನ್ನಲ್ಲೇ ಅರಬ್ಬಿ ಸಮುದ್ರದಲ್ಲಿ ಮೀನುಗಾರರು ಭರ್ಜರಿ ಮತ್ಸ್ಯ ಬೇಟೆಯಲ್ಲಿ ತೊಡಗಿದ್ದಾರೆ. ಸಮುದ್ರದ ತೀರ ಭಾಗಕ್ಕೆ ಬಂದ ಲಕ್ಷಾಂತರ ಮೀನುಗಳನ್ನು ಕಂಡ ಮೀನುಗಾರರಿಗೆ ಭರ್ಜರಿ ಬೇಟೆಯಾಗಿದೆ.

ಇದನ್ನೂ ಓದಿ: ಬ್ರೇಕಪ್‌ ನಂತ್ರ ex ಪ್ರಿಯಕರನೊಂದಿಗೆ ಸ್ನೇಹ ಒಳ್ಳೆಯದಾ..?

ಸಮುದ್ರ ತೀರಕ್ಕೆ ಮೀನುಗಳ ದಂಡೇ ಹರಿದು ಬಂದಿದೆ. ಹೀಗಾಗಿ ಮೀನಿಗಾಗಿ ಕಾಯುತ್ತಿದ್ದ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಕಾರವಾರ, ಬೇಲಿಕೇರಿ, ಮುದಗ ಬಂದರಿನಿಂದ ಹೊರಟ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ದೊಡ್ಡ ತಾರ್ಲೆ ಮೀನುಗಳ ಭರ್ಜರಿ ಬೇಟೆ ಮಾಡಿದ್ದಾರೆ. ಇದೀಗ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಅರಬ್ಬಿ ಸಮುದ್ರ ಭಾಗದಲ್ಲಿ ಲಕ್ಷಾಂತರ ತಾರ್ಲೆ ಮೀನುಗಳು ಸಿಕ್ಕಿವೆ. ಆಳ ಸಮುದ್ರಕ್ಕೆ ತೆರಳದೇ ತೀರ ಸಮೀಪದಲ್ಲೇ ರಾಶಿ ಮೀನುಗಳು ಕಂಡುಬಂದಿವೆ. ಹಲವು ವರ್ಷದ ನಂತರ ಈ ಮಟ್ಟದ ತಾರ್ಲೆ ಮೀನುಗಳು ಮೀನುಗಾರರಿಗೆ ದೊರೆತಿವೆ.

ಇದನ್ನೂ ಓದಿ: ಇಂದು ರಾಜ್ಯ ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿ..!

ಕಾರವಾರ ಸಮುದ್ರ ತೀರ ಬಹಳ ಪ್ರಶಾಂತವಾಗಿದ್ದು, ಇಲ್ಲಿಗೆ ಪ್ರವಾಸಿಗರು ಬಹಳ ಸಂಖ್ಯೆಯಲ್ಲಿ ಎಂಟ್ರಿ ಕೊಡುತ್ತಾರೆ. ವಿವಿಧ ಭಾಗಗಳಿಂದ ಕಾರವಾರ ಕಡೆಗೆ ಬರುವ ಮಂದಿ ಸಮುದ್ರ ತೀರದ ಕಡೆಗೆ ಬಂದು ಫ್ಯಾಮಿಲಿ ಜೊತೆ ನೆಮ್ಮದಿಯ ಸಮಯ ಕಳೆಯುತ್ತಾರೆ.  ಹತ್ತಿರದಲ್ಲಿರುವ ಮುರುಡೇಶ್ವರ ದೇವಸ್ಥಾನ, ಗೋಕರ್ಣ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಸಮುದ್ರ ಬದಿ ಸಿಕ್ಕಿರುವ ಮೀನುಗಳನ್ನು ನೋಡಿದ ಜನ  ಅಚ್ಚರಿ ಪಟ್ಟಿದ್ದಾರೆ.

ಇದನ್ನೂ ಓದಿ : ಕಸ‌ ಎಸೆಯುವ ವೀಡಿಯೋ ಮಾಡಿ, ವಾಟ್ಸಾಪ್ ಮಾಡಿದ್ರೆ ರೂ.250 ನಗದು ಬಹುಮಾನ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 195

You cannot copy content of this page