ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇದು ಗಣೇಶೋತ್ಸವನಾ, ನೋಟಿನ ಹಬ್ಬನಾ? 2.9 ಕೋಟಿ ಬೆಲೆಬಾಳುವ ಅಲಂಕಾರ ವೈರಲ್!

ವೈರಲ್ : Tulu Times l ಗಣೇಶ ಚತುರ್ಥಿ ಸಂಭ್ರಮದ ನಡುವೆ ತೆಲಂಗಾಣದ ಪಾಲ್ವಂಚದಲ್ಲಿ ಎರಡು ಗಣೇಶ ಮೂರ್ತಿಗಳು ಬರೋಬ್ಬರಿ 2.9 ಕೋಟಿ ರೂ. ಮೌಲ್ಯದ ನೋಟುಗಳಿಂದ ಅಲಂಕರಿಸಲ್ಪಟ್ಟು ಭಕ್ತರ ಗಮನ ಸೆಳೆದಿವೆ.

ಪಾಲ್ವಂಚದಲ್ಲಿ ಕಾಪು ಸಮುದಾಯದ ಸದಸ್ಯರು ಆಯೋಜಿಸಿದ್ದ ಗಣೇಶೋತ್ಸವದಲ್ಲಿ ₹1.4 ಕೋಟಿ ರೂ. ಮೌಲ್ಯದ ನೋಟುಗಳನ್ನು ಬಳಸಿ ಗಣೇಶ ಮೂರ್ತಿಯನ್ನು ಅಲಂಕರಿಸಲಾಗಿದೆ. ಮತ್ತೊಂದೆಡೆ, ಟೀಮ್ ಏಕದಂತ ಸಂಘಟನೆಯು ಆಯೋಜಿಸಿದ್ದ ಗಣೇಶೋತ್ಸವದಲ್ಲಿ ₹1.5 ಕೋಟಿ ಮೌಲ್ಯದ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿದೆ.

ಎರಡೂ ಸ್ಥಳಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಶೇಷ ಅಲಂಕಾರವನ್ನು ವೀಕ್ಷಿಸಿದರು.
10 ರೂ., 20 ರೂ., 100 ರೂ., 200 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಅಲಂಕಾರದಲ್ಲಿ ಬಳಸಲಾಗಿದೆ. ಕೆಲವು ಕಡೆಗಳಲ್ಲಿ ನೋಟುಗಳಿಂದಲೇ ಹೂವಿನ ಮಾಲೆ, ಕಿರೀಟ ಸೇರಿದಂತೆ ವಿವಿಧ ವಿನ್ಯಾಸಗಳನ್ನು ರೂಪಿಸಲಾಗಿತ್ತು. ಗಣೇಶ ಮೂರ್ತಿಯ ಸುತ್ತಮುತ್ತಲಿನ ವೇದಿಕೆಯನ್ನೂ ನೋಟುಗಳಿಂದ ಅಲಂಕರಿಸಲಾಗಿತ್ತು.

ಆಯೋಜಕರ ಪ್ರಕಾರ, ಸ್ಥಳೀಯ ವ್ಯಾಪಾರಿಗಳ ಕೊಡುಗೆ ಹಾಗೂ ಸಹಕಾರದಿಂದ ಈ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಅಲಂಕಾರಕ್ಕಾಗಿ ಹೊಸ ನೋಟುಗಳನ್ನು ಬ್ಯಾಂಕ್‌ಗಳಿಂದಲೂ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘ಗಜಪತಿ’ ಗಣೇಶನ ಮಂಟಪದಲ್ಲಿ ಈ ವಿಶೇಷ ಅಲಂಕಾರ ಮಾಡಲಾಗಿದ್ದು, ಇದು ಹಬ್ಬದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ.

ಪಾಲ್ವಂಚದಲ್ಲಿ ನೋಟುಗಳಿಂದ ಗಣೇಶೋತ್ಸವದ ಅಲಂಕಾರ ಮಾಡುತ್ತಿರುವುದು ಇದೇ ಮೊದಲಲ್ಲ. 2024ರಲ್ಲಿ ಕಾಪು ಸಂಘಂ ಗಣೇಶ ಉತ್ಸವ ಸಮಿತಿಯು ಅಂಬೇಡ್ಕರ್ ಕೇಂದ್ರದಲ್ಲಿ ₹1.1 ಕೋಟಿ ಮೌಲ್ಯದ ಹೊಸ ನೋಟುಗಳನ್ನು ಬಳಸಿ ಗಣೇಶ ಮೂರ್ತಿ ಮತ್ತು ವೇದಿಕೆಯನ್ನು ಅಲಂಕರಿಸಿತ್ತು. ₹500, ₹200 ಮತ್ತು ₹100 ಮುಖಬೆಲೆಯ ನೋಟುಗಳನ್ನು ಹೂವಿನ ವಿನ್ಯಾಸದಲ್ಲಿ ಜೋಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉತ್ಸವದ ವೇದಿಕೆಗೆ ₹1.5 ಕೋಟಿ ಮೌಲ್ಯದ ನೋಟುಗಳನ್ನು ಬಳಸಲಾಗಿತ್ತು. ಇದಕ್ಕೂ ಮುನ್ನ 2023ರಲ್ಲಿ ಪಾಲ್ವಂಚದ ಮತ್ತೊಂದು ಗಣೇಶೋತ್ಸವ ಮಂಟಪದಲ್ಲಿ ₹1 ಕೋಟಿ ಮೌಲ್ಯದ ನೋಟುಗಳನ್ನು ಅಲಂಕಾರಕ್ಕಾಗಿ ಬಳಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಈ ರೀತಿಯ ವಿಶಿಷ್ಟ ಅಲಂಕಾರ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗುತ್ತಿದೆ.

Is this Ganeshotsava or a festival of currency notes? Decorations worth ₹2.9 crore go viral – ತುಳುಟೈಮ್ಸ್

ಇದನ್ನೂ ಓದಿ :ಬಾಲಿವುಡ್ ಸ್ಟಾರ್ ದಂಪತಿಗೆ ಸಂತಸದ ಸುದ್ದಿ; ದೀಪಿಕಾ ಹೆಣ್ಣು ಮಗುವಿಗೆ ಜನ್ಮ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ : https://youtube.com/shorts/GzXRNLIiLws?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 224

You cannot copy content of this page