ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ : ಯುವಜನ ಸಂಯುಕ್ತ ಮಂಡಳಿಯಲ್ಲಿ ₹10 ಲಕ್ಷ ವೆಚ್ಚದ ‘ಅನ್ನಪೂರ್ಣ’ ಭೋಜನ ಶಾಲೆ ಉದ್ಘಾಟನೆ

ಸುಳ್ಯ: Tulu Times l ಯುವಜನ ಸಂಯುಕ್ತ ಮಂಡಳಿ ಹಾಗೂ ಯುವಜನ ಸೇವಾ ಸಂಸ್ಥೆ ಸುಳ್ಯ ಇದರ ವತಿಯಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾದ ₹10 ಲಕ್ಷ ಮೊತ್ತದ ‘ಅನ್ನಪೂರ್ಣ’ ಭೋಜನ ಶಾಲೆಯ ವಿಸ್ತೃತ ಕಟ್ಟಡದ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ಆಗಸ್ಟ್ 22ರಂದು ನಡೆಯಲಿದೆ. ಸುಳ್ಯದಲ್ಲಿರುವ ಯುವಜನ ಸಂಯುಕ್ತ ಮಂಡಳಿ ಆವರಣದಲ್ಲಿ ಬೆಳಿಗ್ಗೆ 10.45ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಜನ ಸೇವಾ ಸಂಸ್ಥೆ (ರಿ.) ಸುಳ್ಯದ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾಜಿ ಸಚಿವ ಶ್ರೀ ಎಸ್. ಅಂಗಾರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ 2026ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಶ್ರೀಮತಿ ಎಂ. ಮೀನಾಕ್ಷಿ ಗೌಡ ಅವರನ್ನು ಅಭಿನಂದಿಸಲಾಗುವುದು. ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯದ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಮೂಲಕ ದೊರೆತ ₹10 ಲಕ್ಷ ಅನುದಾನದಲ್ಲಿ ಭೋಜನ ಶಾಲೆಯ ವಿಸ್ತೃತ ಕಟ್ಟಡ ನಿರ್ಮಾಣಗೊಂಡಿದ್ದು, ಸಂಸ್ಥೆಯ ಚಟುವಟಿಕೆಗಳಿಗೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ. ಯುವಜನ ಸಂಯುಕ್ತ ಮಂಡಳಿ ಮತ್ತು ಯುವಜನ ಸೇವಾ ಸಂಸ್ಥೆಗಳು ಹಲವು ವರ್ಷಗಳಿಂದ ಯುವಜನರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ನೂತನ ಭೋಜನ ಶಾಲೆಯ ವಿಸ್ತರಣೆ ಸಂಸ್ಥೆಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

 

Process to purchase 15,000 new buses set in motion: Transport Minister Byrathi Suresh
Credit to original source

ಕಾರ್ಯಕ್ರಮಕ್ಕೆ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಯುವಜನ ಸೇವಾ ಸಂಸ್ಥೆಯ ಗೌರವ ಕಾರ್ಯದರ್ಶಿ ದಯಾನಂದ ಕೇರ್ಪಳ, ಕೋಶಾಧಿಕಾರಿ ಅನಿಲ್ ಪೂಜಾರಿ ಮನೆ, ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ಮುರಳಿ ನಳಿಯಾರು, ಗೌರವ ಕಾರ್ಯದರ್ಶಿ ಲೋಹಿತ್ ಬಾಳಿಕಳ ಸೇರಿದಂತೆ ಎರಡೂ ಸಂಸ್ಥೆಗಳ ನಿರ್ದೇಶಕರು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.

Sullia: ‘Annapurna’ dining hall worth ₹10 lakh inaugurated at the Youth Joint Council (Yuvajana Samyukta Mandala). – ತುಳು ಟೈಮ್ಸ್

ಇದನ್ನೂ ಓದಿ : 3 ಯೋಗಾಸನ, ಹಲವು ಆರೋಗ್ಯ ಲಾಭ ; ಪ್ರತಿದಿನ ಅಭ್ಯಾಸ ಮಾಡಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page