ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯದಲ್ಲಿ ‘ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್’ ಶುಭಾರಂಭ; ಉದ್ಘಾಟನಾ ಪ್ರಯುಕ್ತ ಭರ್ಜರಿ ಆಫರ್

ಸುಳ್ಯ : Tulu Times l ಸುಳ್ಯದ ಪ್ರತಿಷ್ಠಿತ ‘ಶ್ರೀ ಇನ್ಫೋ’ ಕಂಪ್ಯೂಟರ್ಸ್ ಸಹ ಸಂಸ್ಥೆಯಾಗಿ ನೂತನ ಎಕ್ಸ್‌ಕ್ಲೂಸಿವ್ ಲ್ಯಾಪ್‌ಟಾಪ್ ಶೋರೂಮ್ ‘ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್’ ಜುಲೈ 16, ಗುರುವಾರ ಶುಭಾರಂಭಗೊಂಡಿದೆ. ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಸೌಪರ್ಣಿಕಾ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಕಾರ್ಯಾರಂಭಗೊಂಡ ಈ ಶೋರೂಮ್, ಲ್ಯಾಪ್‌ಟಾಪ್‌ಗಳ ಮಾರಾಟ ಹಾಗೂ ಸೇವೆಗಾಗಿ ಸುಳ್ಯದ ಮೊದಲ ಎಕ್ಸ್‌ಕ್ಲೂಸಿವ್ ಶೋರೂಮ್ ಆಗಿರಲಿದೆ. ಬೆಳಗ್ಗೆ 9.30 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ನೂತನ ಶೋರೂಮ್ ಉದ್ಘಾಟಿಸಿದರು. ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ ಹಾಗೂ ಸೌಪರ್ಣಿಕಾ ಆರ್ಕೇಡ್‌ನ ಮಾಲಕ ನಾರಾಯಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

'Shree Info Laptop Center' launched in Sullia; grand inaugural offer announced.

ಕಳೆದ 16 ವರ್ಷಗಳಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ವಾಣಿಜ್ಯ ಸಂಕೀರ್ಣದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಇನ್ಫೋ ಕಂಪ್ಯೂಟರ್ಸ್, ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಸ್ಥೆಯಾಗಿದೆ. ಇದೀಗ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳ ಮಾರಾಟ ಮತ್ತು ಸರ್ವೀಸ್‌ಗೆ ಪ್ರತ್ಯೇಕವಾಗಿ ಶ್ರೀ ಇನ್ಫೋ ಲ್ಯಾಪ್‌ಟಾಪ್ ಸೆಂಟರ್ ಆರಂಭಿಸುತ್ತಿದೆ. ಶೋರೂಮ್‌ನಲ್ಲಿ ವಿವಿಧ ಕಂಪೆನಿಗಳ ಅತ್ಯಾಧುನಿಕ ಮಾದರಿಯ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳು, ಲ್ಯಾಪ್‌ಟಾಪ್ ಆಕ್ಸೆಸರಿಗಳು ಹಾಗೂ ವೃತ್ತಿಪರ ಸರ್ವೀಸ್ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಿರಲಿವೆ.

ಉದ್ಘಾಟನಾ ವಿಶೇಷ ಆಫರ್ ;
ಉದ್ಘಾಟನಾ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಹಕರಿಗಾಗಿ ಹಲವು ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ. ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು, ಆಯ್ದ ಮಾದರಿಗಳನ್ನು ಹಳೆಯ ದರದಲ್ಲೇ ಖರೀದಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ಆಫರ್ ಸೀಮಿತ ಅವಧಿಗೆ ಹಾಗೂ ಸೀಮಿತ ಸ್ಟಾಕ್‌ಗೆ ಮಾತ್ರ ಅನ್ವಯವಾಗಲಿದೆ. ಪ್ರತಿ ಲ್ಯಾಪ್‌ಟಾಪ್ ಖರೀದಿಗೆ ಉಚಿತ ಉಡುಗೊರೆಗಳು, ಪ್ರತಿ ವಾರ ಅದೃಷ್ಟ ಗ್ರಾಹಕರಿಗೆ ವಿಶೇಷ ಬಹುಮಾನಗಳು, ಆಕರ್ಷಕ ಕ್ಯಾಶ್‌ಬ್ಯಾಕ್ ಯೋಜನೆಗಳು ಹಾಗೂ ಸುಲಭ ಕಂತುಗಳಲ್ಲಿ ಇಎಂಐ ಸೌಲಭ್ಯವೂ ಲಭ್ಯವಿದೆ. ಹೊಸ ಲ್ಯಾಪ್‌ಟಾಪ್ ಖರೀದಿಸಲು ಯೋಜಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಈ ವಿಶೇಷ ಆಫರ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

‘Shree Info Laptop Center’ launched in Sullia; grand inaugural offer announced. – ತುಳು ಟೈಮ್ಸ್

ಇದನ್ನೂ ಓದಿ : 30 ದಿನ ಕೂದಲಿಗೆ ಎಣ್ಣೆ ಹಚ್ಚದೇ ಇದ್ದರೆ ಕೂದಲಿನ ಮೇಲಾಗುವ ಪರಿಣಾಮವೇನು?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/TP-rtIPAbk0?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page