ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹೃದಯಾಘಾತದಿಂದ ಕುಸಿದ ವ್ಯಕ್ತಿಗೆ ರಸ್ತೆಯಲ್ಲೇ CPR; ನರ್ಸ್‌ಗಳ ಸಾಹಸಕ್ಕೆ ಶ್ಲಾಘನೆ

ಕೇರಳ : Tulu Times | ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಟ್ರಾಫಿಕ್ ಜಾಮ್‌ನ ಮಧ್ಯೆ ಹೃದಯಾಘಾತಕ್ಕೊಳಗಾದ ವ್ಯಕ್ತಿಯೊಬ್ಬರ ಜೀವವನ್ನು ಇಬ್ಬರು ನರ್ಸ್‌ಗಳು ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸಿಬ್ಬಂದಿ ನರ್ಸ್ ಅಂಜಲಿ ಬೈಜು ಹಾಗೂ ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿರುವ ಆರ್ಧ್ರಾ ರಾಜ್, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಜನಸಂದಣಿ ಕಂಡು ತಕ್ಷಣ ಬಸ್‌ನಿಂದ ಇಳಿದರು.

43 ವರ್ಷದ ಸಿನೋಜ್, ಒಕ್ಕಲ್ ಸಮೀಪದ ತನ್ನ ಲಾಟರಿ ಅಂಗಡಿಯಿಂದ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಟ್ರಾಫಿಕ್ ಜಾಮ್‌ನಲ್ಲಿ ವಾಹನ ಸಿಲುಕಿದ್ದರಿಂದ ಅವರು ಕಾರಿನಲ್ಲೇ ಕುಸಿದು ಬಿದ್ದರು. ಇದನ್ನು ಗಮನಿಸಿದ ಇಬ್ಬರು ನರ್ಸ್‌ಗಳು ತಕ್ಷಣ ಕಾರಿನ ಬಳಿ ಧಾವಿಸಿ ಸಿಪಿಆರ್ ಆರಂಭಿಸಿದರು. ಆಸ್ಪತ್ರೆ ತಲುಪುವವರೆಗೂ ಅವರು ನಿರಂತರವಾಗಿ ಸಿಪಿಆರ್ ನೀಡಿದರು.

ಆಸ್ಪತ್ರೆಗೆ ತಲುಪುವ ವೇಳೆಗೆ ಸಿನೋಜ್ ಅವರಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದವು ಎಂದು ವೈದ್ಯರು ತಿಳಿಸಿದ್ದಾರೆ. ನಂತರದ ಪರೀಕ್ಷೆಯಲ್ಲಿ ಹೃದಯದ ಧಮನಿಯೊಂದರಲ್ಲಿ ತಡೆ ಉಂಟಾಗಿರುವುದು ಪತ್ತೆಯಾಗಿದ್ದು, ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳ ಸಹಕಾರವೂ ಮಹತ್ವದ್ದಾಗಿತ್ತು. ದಾರಿಹೋಕರೊಬ್ಬರು ಕಾರು ಚಲಾಯಿಸಿ ಆಸ್ಪತ್ರೆಗೆ ತಲುಪಿಸಲು ನೆರವಾದರೆ, ಇತರರು ಟ್ರಾಫಿಕ್ ತೆರವುಗೊಳಿಸಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.

CPR administered on the road to a man who collapsed from a heart attack; nurses praised for their heroic effort. – ತುಳು ಟೈಮ್ಸ್

ಇದನ್ನೂ ಓದಿ : ರಕ್ತದಾನದಿಂದ ಜೀವ ರಕ್ಷಣೆ, ಜೊತೆಗೆ ಉಚಿತ ದೇವರ ದರ್ಶನ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/DA3LOk_-2ik

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page