ಮನೋವಿಜ್ಞಾನ : Tulu Times l ಇತ್ತೀಚಿನ ಮನೋವಿಜ್ಞಾನ ಅಧ್ಯಯನವೊಂದು ಬೆಕ್ಕುಗಳೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವವರ ಭಾವನಾತ್ಮಕ ಸ್ವಭಾವದ ಬಗ್ಗೆ ಆಸಕ್ತಿದಾಯಕ ಮಾಹಿತಿಯನ್ನು ಹೊರಹಾಕಿದೆ. ವಿಶೇಷವಾಗಿ ಯಾವಾಗಲೂ ಬೆಕ್ಕುಗಳನ್ನು ಮುದ್ದಾಡುವವರು ಅಥವಾ ಅವುಗಳ ಜೊತೆ ಸಮಯ ಕಳೆಯಲು ಆಸಕ್ತಿ ತೋರುವವರು ಹೆಚ್ಚು ಭಾವನಾತ್ಮಕ ಪ್ರತಿಕ್ರಿಯೆ ಹೊಂದಿರುವವರಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾವನೆಗಳನ್ನು ತೀವ್ರವಾಗಿ ಅನುಭವಿಸುವ ಮತ್ತು ಅವುಗಳಿಗೆ ಬೇಗ ಪ್ರತಿಕ್ರಿಯಿಸುವ ವ್ಯಕ್ತಿಗಳು ಬೆಕ್ಕುಗಳೊಂದಿಗೆ ಹೆಚ್ಚು ಒಡನಾಟ ಬೆಳೆಸಲು ಇಷ್ಟಪಡುತ್ತಾರೆ. ಈ ಅಧ್ಯಯನಕ್ಕಾಗಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ 1,400ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸಮೀಕ್ಷೆ ನಡೆಸಲಾಗಿತ್ತು. ಸಂಶೋಧಕರು ವ್ಯಕ್ತಿತ್ವದ ಎಮೋಶನಲ್ ಎಂಬ ಗುಣಲಕ್ಷಣ ಮತ್ತು ಬೆಕ್ಕುಗಳ ಜೊತೆಗಿನ ಆಕರ್ಷಣೆಯ ನಡುವೆ ಸಂಬಂಧವಿರುವುದನ್ನು ಕಂಡುಹಿಡಿದಿದ್ದಾರೆ.

ಮನೋವಿಜ್ಞಾನದಲ್ಲಿ ಎಮೋಶ್ನಲ್ ಎಂದರೆ ವ್ಯಕ್ತಿಯು ಭಾವನೆಗಳನ್ನು ಎಷ್ಟು ಆಳವಾಗಿ ಅನುಭವಿಸುತ್ತಾನೆ ಮತ್ತು ಅವುಗಳಿಗೆ ಎಷ್ಟು ವೇಗವಾಗಿ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ಸಂವೇದನಾಶೀಲರು, ಸಹಾನುಭೂತಿ ಹೊಂದಿರುವವರು ಹಾಗೂ ಭಾವನಾತ್ಮಕ ನೆಮ್ಮದಿಗಾಗಿ ಪ್ರಾಣಿಗಳ ಒಡನಾಟವನ್ನು ಹುಡುಕುವವರಾಗಿರುತ್ತಾರೆ.
ಅಧ್ಯಯನದ ಪ್ರಕಾರ, ಬೆಕ್ಕುಗಳನ್ನು ಮುದ್ದಾಡುವುದು ಒತ್ತಡ ಕಡಿಮೆ ಮಾಡಲು ಸಹ ಸಹಾಯಕವಾಗಬಹುದು. ಬೆಕ್ಕಿನ ಜೊತೆ ಕೆಲ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ದೊರಕುವುದು, ಆತಂಕ ಕಡಿಮೆಯಾಗುವುದು ಮತ್ತು ಏಕಾಂಗಿ ಭಾವನೆ ತಗ್ಗುವುದು ಕಂಡುಬಂದಿದೆ. ಪ್ರಾಣಿಗಳೊಂದಿಗೆ ಇರುವ ಆತ್ಮೀಯತೆ ಕೇವಲ ಹವ್ಯಾಸವಲ್ಲ; ಅದು ಕೆಲವರಿಗೆ ಭಾವನಾತ್ಮಕ ಸಮತೋಲನ ಕಾಪಾಡುವ ಮಾರ್ಗವೂ ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಯಾವಾಗಲೂ ಬೆಕ್ಕುಗಳನ್ನು ಮುದ್ದಾಡುವವರು ಕೇವಲ ಬೆಕ್ಕು ಪ್ರೇಮಿಗಳು ಮಾತ್ರವಲ್ಲ, ಹೆಚ್ಚು ಭಾವನಾತ್ಮಕ ಮತ್ತು ಸಂವೇದನಾಶೀಲ ವ್ಯಕ್ತಿತ್ವ ಹೊಂದಿರುವವರಾಗಿರಬಹುದು ಎಂಬುದನ್ನು ಈ ಅಧ್ಯಯನ ಸೂಚಿಸುತ್ತದೆ.
What is the state of mind of those who always pet cats? Interesting facts about psychology – ತುಳುಟೈಮ್ಸ್
ಇದನ್ನೂ ಓದಿ :ಹಸಿ ಮಾವಿನಕಾಯಿ ಕೆಲವರಿಗೆ ಚರ್ಮ ಅಲರ್ಜಿ ಉಂಟುಮಾಡಬಹುದು: ವೈದ್ಯರ ಎಚ್ಚರಿಕೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=yWlCZha5tRv7XDzL











