ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಇಂದಿರಾ ಫುಡ್ ಕಿಟ್’ ಯೋಜನೆ ಘೋಷಣೆಯಾಗಿ ತಿಂಗಳುಗಳು ಕಳೆದರೂ ಇನ್ನೂ ಜಾರಿಗೆ ಬಂದಿಲ್ಲ

ಕರ್ನಾಟಕ : Tulu Times l ಕರ್ನಾಟಕ ಸರ್ಕಾರ ಘೋಷಿಸಿದ್ದ ಮಹತ್ವಾಕಾಂಕ್ಷಿ ‘ಇಂದಿರಾ ಫುಡ್ ಕಿಟ್’ ಯೋಜನೆ ಘೋಷಣೆಯಾಗಿ ಐದು ತಿಂಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ರಾಜ್ಯದ ಕೋಟ್ಯಾಂತರ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಈ ಯೋಜನೆ ಅನುಷ್ಠಾನ ವಿಳಂಬದಿಂದ ಇದೀಗ ಚರ್ಚೆಗೆ ಕಾರಣವಾಗಿದೆ.

ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ, ಪೂರೈಕೆ ವ್ಯವಸ್ಥೆ ಹಾಗೂ ವಿತರಣಾ ಮಾದರಿಗಳ ಕುರಿತು ಸರ್ಕಾರ ಇನ್ನೂ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅರ್ಹ ಕಂಪನಿಗಳು, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಭ್ರಷ್ಟಾಚಾರ ತಡೆಯಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವುದು ಸರ್ಕಾರದ ಮುಂದೆ ಪ್ರಮುಖ ಸವಾಲಾಗಿದೆ.

ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ಪ್ರತಿಯೊಂದು ಕಿಟ್ ಮೇಲೂ ಕ್ಯುಆರ್ ಕೋಡ್ ಅಳವಡಿಸುವ ಯೋಜನೆಯೂ ಸರ್ಕಾರದ ಪರಿಗಣನೆಯಲ್ಲಿದೆ. ಇದರಿಂದ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಸರಿಯಾದ ವಿತರಣೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ.

ರಾಜ್ಯದ ವಿವಿಧ ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಕಿಟ್‌ಗಳನ್ನು ಸಾಗಿಸುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡುವ ಸಾಧ್ಯತೆಯೂ ಇದೆ. ಯೋಜನೆ ಜಾರಿಗೆ ಬಂದ ನಂತರ ಕನಿಷ್ಠ ಮೊದಲ ಆರು ತಿಂಗಳು ಯಾವುದೇ ವಿತರಣಾ ಸಮಸ್ಯೆ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪ್ರತಿ ತಿಂಗಳು ಸುಮಾರು 57,521 ಮೆಟ್ರಿಕ್ ಟನ್ ಆಹಾರ ಸಾಮಗ್ರಿಗಳನ್ನು ರಾಜ್ಯದ ಸುಮಾರು 1.25 ಕೋಟಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪೂರೈಸಬೇಕಿರುವುದರಿಂದ, ಇದು ಕರ್ನಾಟಕದ ಅತಿದೊಡ್ಡ ಆಹಾರ ವಿತರಣಾ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಆದರೆ ಯೋಜನೆ ಜಾರಿಯಲ್ಲಿ ಆಗುತ್ತಿರುವ ವಿಳಂಬ ಜನರಲ್ಲಿ ಪ್ರಶ್ನೆ ಹುಟ್ಟಿಸಿದ್ದು, ಸರ್ಕಾರ ಶೀಘ್ರದಲ್ಲೇ ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Months have passed since the announcement of the ‘Indira Food Kit’ scheme, but it has not yet been implemented – ತುಳುಟೈಮ್ಸ್

ಇದನ್ನೂ ಓದಿ :ಇನ್ಮುಂದೆ ಕ್ಯಾನ್/ಬಾಟಲಿಗಳಲ್ಲಿ ಪೆಟ್ರೋಲ್, ಡೀಸೆಲ್ ಶೇಖರಿಸುವಂತಿಲ್ಲ : ಕರ್ನಾಟಕದಲ್ಲಿ ಇಂಧನ ಪೂರೈಕೆ ನಿಯಮ ಕಠಿಣ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=YQNL3fNnUAlip1Xk

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page