ಬೆಳ್ತಂಗಡಿ

ಪ್ರಾಪ್ತಿಗೆ ಗೌರವ ಸನ್ಮಾನ : ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ

ಬೆಳ್ತಂಗಡಿ : Tulu Times l ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ್ವಸ್ತಿ ನಿಲಯದ ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ದಂಪತಿಗಳಾದ ಮೀನಾಕ್ಷಿ ಮತ್ತು ಮಹಾಬಲ ಗೌಡ ಇವರ ಪುತ್ರಿ ಪ್ರಾಪ್ತಿ ಎಂ.ಗೌಡ  ಇವರು ನೃತ್ಯ ಕಲೆ ಹಾಗೂ ಭಾಷಣ ಕಲೆಯಲ್ಲಿ ಸಾಧನೆಯನ್ನು ಮಾಡಿ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ಸ್ಥಾನ ಗಳಿಸಿದ್ದು ಇವರ ಈ ಸಾಧನೆಯನ್ನು ಗುರುತಿಸಿ ಟ್ರಸ್ಟ್ ನ ವತಿಯಿಂದ ಗೌರವ ಪೂರ್ವಕ ಪ್ರತಿಭಾ ಸನ್ಮಾನ (2026) ಹಾಗೂ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ರಂಜನ್. ಜಿ ಗೌಡ, ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಬೆಳಾಲು, ಉಪಾಧ್ಯಕ್ಷರಾದ ವಸಂತ ಗೌಡ ಮರಕಡ, ಕಾರ್ಯದರ್ಶಿಯಾದ ಭರತ್ ಕುಮಾರ್, ಸ್ಥಾಪಕ ಟ್ರಸ್ಟಿ ನವೀನ್ ಬಿ. ಕೆ,  ಟ್ರಸ್ಟಿ  ದಿನೇಶ್ ಕುಲೆಂಜಿರೋಡಿ ಮತ್ತು ಮನೆಯವರು ಉಪಸ್ಥಿತರಿದ್ದರು.

Honored for achievement: Vokkaliga Gowda Service Trust (R) Belthangady – ತುಳುಟೈಮ್ಸ್

ಇದನ್ನೂ ಓದಿ :ಬೇಸಿಗೆಯಲ್ಲಿ ಅನಾನಸ್ ಹಣ್ಣು ಉಪಯುಕ್ತವೇ? ಇದರ ಆರೋಗ್ಯಕರ ಲಾಭಗಳೇನು?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/EYKaZkoL8Qk?si=QRbxA7zfDhbHkwvD

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page