ಬ್ರೇಕಿಂಗ್ ನ್ಯೂಸ್
ಧಾರ್ಮಿಕ

Salt : ಅಡುಗೆಮನೆಯಲ್ಲಿ ಬಳಸುವ ‘ಉಪ್ಪಿ’ನಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ…!

Salt : ನೀವು ಅಡುಗೆಗೆ ಬಳಸುವ ಉಪ್ಪಿನ ಮಹತ್ವ ತಿಳಿದಿದ್ದೀರಾ…? ಉಪ್ಪನ್ನು ಶನಿ ಹಾಗೂ ಚಂದ್ರನಿಗೆ ಸಂಬಂಧವಿರುವ ವಸ್ತುವೆಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಹೌದು…! ಉಪ್ಪನ್ನು ಉಪಯೋಗಿಸದೇ ಇರುವ ಆಹಾರವನ್ನು ತಿನ್ನುವುದೆಂದರೆ ಅದು ಯಾರಿಗೂ ರುಚಿಸದು ಕೂಡಾ…. ಅಡುಗೆ ಮನೆಯಲ್ಲಿ ಕೆಲವರು ಉಪ್ಪನ್ನು ಗ್ಲಾಸ್ ನ ಡಬ್ಬದಲ್ಲಿ ತುಂಬಿಸಿಟ್ಟರೆ, ಇನ್ನು ಕೆಲವರು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸಿಡುತ್ತಾರೆ. ಮತ್ತೂ ಕೆಲವರು ಪ್ಲಾಸ್ಟಿಕ್ ನಲ್ಲಿ ಹಾಗೇ ತೆರೆದ ಬಾಯಿಯಲ್ಲಿ ಉಪ್ಪನ್ನು ಹಾಕಿಡುತ್ತಾರೆ. ಆದರೆ, ಇಲ್ಲೊಂದು ವರದಿಯ ಪ್ರಕಾರ ಉಪ್ಪನ್ನು ಗಾಜಿನ ಅಥವಾ ಉಕ್ಕಿನ ಪಾತ್ರೆಯಲ್ಲಿ ಬಿಗಿಯಾಗಿ ಮುಚ್ಚಳ ಹಾಕಿ ತುಂಬಿಸಿ ಉಪಯೋಗಿಸಿದರೆ ವಾಸ್ತು ತಜ್ಞರು ಮನೆಯಲ್ಲಿ ಸಂತೋಷ, ನೆಮ್ಮದಿ‌ನೆಲೆ ಕಾಣುತ್ತವೆಯೆಂದು ನಂಬಿರುತ್ತಾರೆ.

ಅದರಲ್ಲೂ ಕಬ್ಬಿಣ, ಅಲ್ಯೂಮಿನಿಯಂ ನಂತಹ ಪಾತ್ರೆಗಳಲ್ಲಿ ಉಪ್ಪನ್ನು ಸಂಗ್ರಹಿಸಿಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ, ಆದಷ್ಟು ತೆರೆದ ಪಾತ್ರೆಯಲ್ಲಿ ಉಪ್ಪನ್ನು ಸಂಗ್ರಹಿಸಿಡುವುದನ್ನು ನಿಲ್ಲಿಸಿ, ಮುಚ್ಚಿನ ಪಾತ್ರೆಯಲ್ಲಿ ಉಪ್ಪನ್ನು ಸಂಗ್ರಹಿಸುವುದು ಉತ್ತಮ ಎಂದು ಹೇಳಲಾಗಿದೆ.

ಜೊತೆಗೆ, ಮನೆಯನ್ನು ತೊಳೆಯುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಏಕೆಂದರೆ ನಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಜೊತೆಗೆ ಮನೆಯ ಒಳಗಿನ ಶುದ್ದೀಕರಣವೂ ಅಷ್ಟೇ ಮುಖ್ಯ. ಹಾಗಾಗಿ ಮನೆಯ ನೆಲವನ್ನು ಒರೆಸುವಾಗ ನಾವು ಕೆಲವೊಂದು ಕೆಮಿಕಲ್ ಫಿನಾಯಿಲ್ ಗಳನ್ನು ಸುವಾಸನೆ ಭರಿತ ಲಿಕ್ವಿಡ್ ಗಳನ್ನು ಬಳಸುತ್ತೇವೆ. ಆದರೆ, ಇಲ್ಲೊಂದು ವರದಿಯ ಪ್ರಕಾರ ನಾವು ಮನೆಯನ್ನು ಸ್ವಚ್ಛ ಗೊಳಿಸುವಾಗ ನೀರಿನಲ್ಲಿ ಒಂದು ಹಿಡಿ ಉಪ್ಪನ್ನು ಹಾಕಿ ಒರೆಸಿದರೆ ಮನೆಯಲ್ಲಿನ‌ ನಕಾರಾತ್ಮಕ ಶಕ್ತಿ ದೂರಾವಾಗಿ, ಉತ್ತಮ ಆರೋಗ್ಯದ ಜೊತೆ ಶಾಂತಿ ನೆಲೆಸುತ್ತದೆ ಹಾಗೂ ಆರ್ಥಿಕವಾಗಿಯೂ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಹೇಳಲಾಗಿದೆ.

ಮನೆಯಲ್ಲಿ ನಾವು ನೆಮ್ಮದಿ, ವಿಶ್ರಾಂತಿಯನ್ನು ಇಷ್ಟ ಪಡುತ್ತೇವೆ. ಹೊರಗಿನ ಜಂಜಾಟ, ಕೆಲಸದ ಒತ್ತಡಗಳನ್ನು ಕೆಲವೊಮ್ಮೆ ಮನೆಯ ವಾತಾವರಣ ನೋಡಿ ಮರೆತು ಬಿಡುತ್ತೇವೆ. ಕೆಲವೊಮ್ಮೆ ಸಮಸ್ಯೆಗಳು ಮನೆಯಲ್ಲಿಯೇ ಹೆಚ್ಚಾಗಿದ್ದರೆ ಆ ವ್ಯಕ್ತಿ ಹೊರಗೆ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವೇ ಇಲ್ಲ. ಆ ಕಾರಣ ಆದಷ್ಟು ಮನೆಯ ಸಕಾರಾತ್ಮಕತೆಯನ್ನು ಹೆಚ್ಚಿಸುವಲ್ಲಿ ಅಡುಗೆ ಉಪ್ಪು ಸಹಕಾರಿಯಾಗಿದೆ. ಮಾನಸಿಕ ಒತ್ತಡ ನಿವಾರಣೆ, ನಿರಂತರ ಜಗಳ, ಮಕ್ಕಳ ಹಠ ಇವೆಲ್ಲದಕ್ಕೂ ಉಪ್ಪು ಪರಿಹಾರ ನೀಡಬಲ್ಲದು.

ಇದನ್ನೂ ಓದಿ :Actor Darshan : ಆರೋಪಿ ನಟ ದರ್ಶನ್ ಗೆ ಮತ್ತೊಮ್ಮೆ ಬಿಗ್ ಶಾಕ್…!

—–
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್‌ ಚಾನೆಲ್‌ ಕ್ಲಿಕ್‌ ಮಾಡಿ : https://www.youtube.com/watch?v=IwjbstX6g3M

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 4

You cannot copy content of this page