ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕ ಪಿಜಿಸಿಇಟಿ 2026: ನೋಂದಣಿ ಮಾರ್ಚ್ 23ರಿಂದ ಆರಂಭ

ಕರ್ನಾಟಕ : Tulu Timesl ಕರ್ನಾಟಕದ ಉನ್ನತ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಪಿಜಿಸಿಇಟಿ (PGCET) 2026 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 23ರಿಂದ ಆರಂಭಿಸಲು ತೀರ್ಮಾನಿಸಿದೆ.‌ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಪ್ರಾರಂಭವಾದ ಬಳಿಕ ಮಾಹಿತಿ ಪುಸ್ತಕ ಪಿಡಿಎಫ್ ಅನ್ನು ಕೂಡ ಡೌನ್‌ಲೋಡ್ ಮಾಡಬಹುದಾಗಿದೆ.

ಪ್ರಮುಖ ದಿನಾಂಕಗಳು ಹೀಗಿವೆ ;

ನೋಂದಣಿ ಪ್ರಾರಂಭ: ಮಾರ್ಚ್ 23, 2026

 ಕೊನೆಯ ದಿನಾಂಕ: ಏಪ್ರಿಲ್ 8, 2026

 ಎಂ.ಟೆಕ್ ಪರೀಕ್ಷೆ: ಮೇ 23, 2026

ಎಂಬಿಎ ಪರೀಕ್ಷೆ: ಮೇ 24, 2026 (ಪರಿಷ್ಕೃತ ದಿನಾಂಕ)

ಪರೀಕ್ಷೆಯ ಬಗ್ಗೆ ಮಾಹಿತಿ 

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಈ ಪರೀಕ್ಷೆ ಮೂಲಕ ಎಂಬಿಎ, ಎಂಸಿಎ, ಎಂ.ಟೆಕ್ ಇತ್ಯಾದಿ ಕೋರ್ಸ್‌ಗಳಿಗೆ ಪ್ರವೇಶ ಸಿಗುತ್ತದೆ ಎನ್ನಲಾಗಿದೆ. ಇದಕ್ಕೆ ಅರ್ಹತೆಯಿರುವವರು ಸಂಬಂಧಿತ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ (Bachelor’s Degree) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.

ಪರೀಕ್ಷಾ ಮಾದರಿಯಲ್ಲಿ, ಒಟ್ಟು ಪ್ರಶ್ನೆಗಳು: 100 (MCQs), ಅವಧಿ: 150 ನಿಮಿಷ, ವಿಧಾನ: ಆಫ್‌ಲೈನ್ (ಪರೀಕ್ಷಾ ಕೇಂದ್ರಗಳಲ್ಲಿ). ಎಂಬಿಎ ವಿಭಾಗದಲ್ಲಿ, ಇಂಗ್ಲಿಷ್ ಭಾಷಾ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಅರಿವು, ತಾರ್ಕಿಕ ಚಿಂತನೆ ಮತ್ತು ಬುದ್ಧಿಮತ್ತೆ, ಗಣಿತ ವಿಶ್ಲೇಷಣೆಗಳು ಒಳಗೊಂಡಿರುತ್ತವೆ.

ಪಿಜಿಸಿಇಟಿ 2026 ಪರೀಕ್ಷೆ ಮೂಲಕ ರಾಜ್ಯದ ವಿವಿಧ ಉನ್ನತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇದು ಪ್ರಮುಖ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಸಿದ್ಧರಾಗುವುದು ಅಗತ್ಯ.

Karnataka PGCET 2026: Registration begins from March 23 – ತುಳುಟೈಮ್ಸ್

ಇದನ್ನೂ ಓದಿ :ರಾಜಮನೆತನದಿಂದ ಉಗಮವಾದ ಆಹಾರ ; ವಿಶ್ವದಾದ್ಯಂತ ಜನಪ್ರಿಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=N4wazW3cbXAaV3kD

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page