ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಕೆಡಿ’ ಚಿತ್ರದ ಹಾಡು ವಿವಾದ: ನಿರ್ದೇಶಕ ಪ್ರೇಮ್ ಕ್ಷಮೆಯಾಚನೆ

ಬೆಂಗಳೂರು: Tulu Times l  ‘ಕೆಡಿ ದ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸುತ್ತ ಮೂಡಿದ ವಿವಾದಕ್ಕೆ ಸಂಬಂಧಿಸಿ ನಿರ್ದೇಶಕ ಪ್ರೇಮ್ ಕ್ಷಮೆ ಕೇಳಿದ್ದಾರೆ. ಈ ಹಾಡಿನ ಸಾಹಿತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದ ಹಿನ್ನೆಲೆ, ಪ್ರೇಮ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದರು. ಹಾಡು ಯಾರನ್ನಾದರೂ ನೋಯಿಸಿದ್ದರೆ ಕ್ಷಮೆ ಕೇಳಲು ತಯಾರಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಹಾಡಿನ ಸಾಹಿತ್ಯವು ತಮ್ಮ ದೃಷ್ಟಿಕೋನದಿಂದ ಬರೆಯಲ್ಪಟ್ಟಿದ್ದು,  ಯಾರ ಭಾವನೆಗೂ ಧಕ್ಕೆ ತರಬೇಕೆಂಬ ಉದ್ದೇಶ ಇರಲಿಲ್ಲ ಎಂದರು. ಪ್ರೇಮ್ ತಮ್ಮ ಸಿನಿಮಾಗಳಲ್ಲಿ ಭಕ್ತಿ, ಕುಟುಂಬ, ಪ್ರೀತಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಹಾಡುಗಳನ್ನು ಬರೆಯುತ್ತಿದ್ದೇನೆ ಎಂದು ಹೇಳಿ, ಪ್ರೇಕ್ಷಕರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಹಾಡಿನ ಅರ್ಥವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಯಾರಿಗೂ ನೋವಾಗದಂತೆ ನೋಡಿಕೊಳ್ಳುತ್ತೇನೆ ಎಂದರು. ಅಗತ್ಯವಿದ್ದರೆ ಹೊಸ ಸಾಹಿತ್ಯದೊಂದಿಗೆ ಹಾಡನ್ನು ಮರುಬರೆಯಲು ಸಿದ್ಧತೆ ಮಾಡುತ್ತೇನೆ ಎಂದು ವ್ಯಕ್ತಪಡಿಸಿದರು. ಅಲ್ಲದೇ, ಈ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆಯಾಗಲು ನಿಗದಿಯಾಗಿದೆ ಎಂದು ವರದಿಯಾಗಿದೆ.

‘KD’ song controversy: Director Prem apologizes – ತುಳುಟೈಮ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 209

You cannot copy content of this page