ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮೊನಾಲಿಸಾ ಕುಟುಂಬದಲ್ಲಿ ಹೆಚ್ಚಿದ ಆತಂಕ : ಮಗಳನ್ನು ಸಂಪರ್ಕಿಸಲಾಗದೆ ಕಂಗಾಲಾದ ತಾಯಿ

ವೈರಲ್ : Tulu Times l 2025ರ ಮಹಾ ಕುಂಬಮೇಳ ಸಂದರ್ಭದಲ್ಲಿ ಗಮನಸೆಳೆದಿದ್ದ ಮೊನಾಲಿಸಾ ಭೋನ್ಸಲೆ ಎಂಬ ಹುಡುಗಿಗೆ ಸಂಬಂಧಿಸಿದ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಆಕೆ ಕೇರಳದಲ್ಲಿ ಫರ್ಮಾನ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಎನ್ನುವ ಮಾಹಿತಿ ಕುಟುಂಬದವರಲ್ಲಿ ಆತಂಕ ಹುಟ್ಟಿಸಿದೆ.

ಮೊನಾಲಿಸಾ ನಟನೆಯತ್ತ ತನ್ನ ಮುಂದಿನ ಜೀವನವನ್ನು ಮುಂದೂಡಲು ಕೇರಳಕ್ಕೆ ಹೋಗಿದ್ದಾಳೆ ಎಂದು ತಿಳಿದುಬಂದಿತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳ ಮೂಲಕ ಆಕೆಯ ಮದುವೆ ವಿಷಯ ಕುಟುಂಬಕ್ಕೆ ತಿಳಿದು ಬಂದಿದೆ.

ಮಧ್ಯಪ್ರದೇಶದ ಮಹೇಶ್ವರ್ ಜೈಲು ಸಮೀಪದ ತಾತ್ಕಾಲಿಕ ನಿವಾಸದಲ್ಲಿ ವಾಸಿಸುತ್ತಿರುವ ಕುಟುಂಬದವರು ಈ ವಿಷಯದಿಂದ ಬೆಚ್ಚಿಬಿದ್ದಿದ್ದಾರೆ. ತಾಯಿ ಲತಾ ಭೋನ್ಸಲೆ ತನ್ನ ಮಗಳನ್ನು ಮರಳಿ ಕಳುಹಿಸಿಕೊಡಬೇಕು ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ. ‘ನನಗೆ ಬೇರೆ ಏನೂ ಬೇಡ… ನನ್ನ ಮಗಳನ್ನು ಮಾತ್ರ ತಂದುಕೊಡಿ’ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಕುಟುಂಬದವರ ಪ್ರಕಾರ, ಮೊನಾಲಿಸಾ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಮಗಳನ್ನು ತಪ್ಪು ದಾರಿಗೆಳೆದುಕೊಂಡಿರಬಹುದು ಎಂಬ ಶಂಕೆಯನ್ನು ತಾಯಿ ಕಣ್ಣೀರಿಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಈ ಘಟನೆ ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

Anxiety grows in Monalisa’s family: Mother distraught over not being able to contact her daughter – ತುಳುಟೈಮ್ಸ್

ಇದನ್ನೂ ಓದಿ :ಭಾರತೀಯ ಅಂಚೆ ಸೇವೆಯಲ್ಲಿ ಮಹತ್ತರ ಬದಲಾವಣೆ : 24 ಸ್ಪೀಡ್ ಪೋಸ್ಟ್

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=CoG6QIRt5mj6cqV7

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page