ಬ್ರೇಕಿಂಗ್ ನ್ಯೂಸ್
ದೇಶ

ಭಾರತೀಯ ಅಂಚೆ ಸೇವೆಯಲ್ಲಿ ಮಹತ್ತರ ಬದಲಾವಣೆ : 24 ಸ್ಪೀಡ್ ಪೋಸ್ಟ್

ನವದೆಹಲಿ: Tulu Times l ದೇಶದ ಅಂಚೆ ಸೇವೆಯನ್ನು ಇನ್ನಷ್ಟು ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿಸಲು ಭಾರತೀಯ ಅಂಚೆ ಹೊಸ ‘24 ಸ್ಪೀಡ್ ಪೋಸ್ಟ್’ ಸೇವೆಯನ್ನು ಆರಂಭಿಸಿದೆ. ತುರ್ತು ಪಾರ್ಸೆಲ್‌ಗಳಿಗಾಗಿ ಈ ಸೇವೆ ಮುಂದಿನ ದಿನವೇ (Next-Day Delivery) ವಿತರಣೆ ಮಾಡುವ ಭರವಸೆ ನೀಡುತ್ತದೆ.

ಕೇಂದ್ರ ಸಚಿವರಿಂದ ಉದ್ಘಾಟನೆ ;

ಈ ಸೇವೆಯನ್ನು ನವದೆಹಲಿಯ ರಂಗಭವನ್ ಆಡಿಯಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಉದ್ಘಾಟಿಸಿದರು.

ಪ್ರಾರಂಭಿಕ ಹಂತದಲ್ಲಿ ಈ ಸೇವೆಯು ದೆಹಲಿ, ಮುಂಬೈ, ಚೆನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಲಭ್ಯವಿದ್ದು, ಇದರ ಜೊತೆಗೆ, ‘48 ಸ್ಪೀಡ್ ಪೋಸ್ಟ್’ ಸೇವೆಯನ್ನು ಕೂಡ ಪರಿಚಯಿಸಲಾಗಿದ್ದು, ಇದು 2 ದಿನಗಳೊಳಗೆ ವಿತರಣೆ ಖಚಿತಪಡಿಸುತ್ತದೆ. ಈ ಹೊಸ ಸೇವೆಗಳಲ್ಲಿ ಹಲವು ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದ್ದು, ಒಟಿಪಿ ಆಧಾರಿತ ಸುರಕ್ಷಿತ ವಿತರಣೆ, ಸಂದೇಶ ಮೂಲಕ ಸಂಪೂರ್ಣ ಟ್ರ್ಯಾಕಿಂಗ್ ವ್ಯವಸ್ಥೆ    ‘Buy Now Pay Later (BNPL)’ ಆಯ್ಕೆ,‌ ದೊಡ್ಡ ಗ್ರಾಹಕರಿಗೆ ಉಚಿತ ಪಿಕ್‌ಅಪ್ ಇತ್ಯಾದಿ ಲಭ್ಯವಿರುತ್ತದೆ.

ಇ-ಕಾಮರ್ಸ್ ಕ್ಷೇತ್ರಕ್ಕೆ ನೆರವು ;

ಬಲ್ಕ್ ಗ್ರಾಹಕರಿಗಾಗಿ API ಇಂಟಿಗ್ರೇಷನ್ ಹಾಗೂ ಕೇಂದ್ರಿಕೃತ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇ-ಕಾಮರ್ಸ್ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಇದು ಬಹಳ ಸಹಾಯಕವಾಗಲಿದೆ./ಸೇವೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು, ನಿಗದಿತ ಸಮಯದಲ್ಲಿ ಪಾರ್ಸೆಲ್ ತಲುಪದಿದ್ದರೆ ಮನಿ-ಬ್ಯಾಕ್ ಗ್ಯಾರಂಟಿ ನೀಡಲಾಗಿದೆ. ಈ ಹೊಸ ಸೇವೆಯಿಂದ ದೇಶದ ತುರ್ತು ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

A major change in Indian Postal Service: ’24 Speed ​​Post’ – ತುಳುಟೈಮ್ಸ್

ಇದನ್ನೂ ಓದಿ :ಜೈಲಿನಲ್ಲಿರುವ ದರ್ಶನ್ ಸಲ್ಲಿಸಿದ್ದ ಮನವಿಗೆ ಅಸ್ತು ಹೇಳಿದ ನ್ಯಾಯಾಲಯ !

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/B1QF8L9fyqM?si=Y1hBsLaXBRWEobaL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 18

You cannot copy content of this page