ಬ್ರೇಕಿಂಗ್ ನ್ಯೂಸ್
ದೇಶ

ಸ್ಲಮ್‌ಗಳನ್ನು ಓಪನ್ ಕ್ಲಾಸ್‌ರೂಮ್‌ಗಳಾಗಿ ರೂಪಿಸಿದ ಶಿಕ್ಷಕಿ ರೂಬಲ್ ನಾಗಿ ಅವರಿಗೆ $1 ಮಿಲಿಯನ್ ಪ್ರಶಸ್ತಿ

ಮುಂಬೈ: Tulu Times l ಕಲಾವಿದೆ-ಶಿಕ್ಷಕಿ ನಾಗಿ ಎಂಬಾಕೆ 2026ರ ಗ್ಲೋಬಲ್ ಟೀಚರ್ ಪ್ರೈಸ್‌ಗೆ ಭಾಜನರಾಗಿದ್ದು, $1 ಮಿಲಿಯನ್ (ಸುಮಾರು ₹8 ಕೋಟಿ) ಬಹುಮಾನ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ವಾರ್ಕಿ ಫೌಂಡೇಶನ್ ಮತ್ತು ಯುನೆಸ್ಕೋ ಸಂಯುಕ್ತವಾಗಿ ನೀಡುತ್ತಿವೆ.

139 ದೇಶಗಳಿಂದ ಬಂದ 5,000 ನಾಮನಿರ್ದೇಶನಗಳ ಮಧ್ಯೆ ಆಯ್ಕೆಯಾಗಿರುವ 45 ವರ್ಷದ ರೂಬಲ್ ನಾಗಿ, ಭಾರತದಲ್ಲಿ 100 ಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳಲ್ಲಿ 800 ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ತಲುಪಿಸಿದ ಸಾಧನೆಗಾಗಿ ಈ ಗೌರವ ಪಡೆದಿದ್ದಾರೆ. ಪ್ರಶಸ್ತಿ ಘೋಷಣೆ ದುಬೈನಲ್ಲಿ ನಡೆದ World Governments Summit ನಲ್ಲಿ ನಡೆಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಅವರು ಆರಂಭದಲ್ಲಿ ಕಲಾವಿದೆಯಾಗಿದ್ದು, ನಂತರ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದರು. ಲಂಡನ್‌ನ Slade School of Fine Art ನಲ್ಲಿ ಫೈನ್ ಆರ್ಟ್ ಅಧ್ಯಯನ ಮಾಡಿದ್ದರು. ಅವರು ಸ್ಥಾಪಿಸಿದ Rouble Nagi Art Foundation ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕಲಿಕಾ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರಗಳು ಶಾಲೆಗೆ ಹೋಗದ ಮಕ್ಕಳಿಗೆ ಸುರಕ್ಷಿತ ಮತ್ತು ಪ್ರೇರಣಾದಾಯಕ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಕಲೆಯ ಮೂಲಕ ಶಿಕ್ಷಣ ನೀಡುವ ವಿಶೇಷ ವಿಧಾನವನ್ನು ಅನುಸರಿಸುತ್ತವೆ. ಅವರ ಪ್ರಯತ್ನದಿಂದ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಅಧಿಕೃತ ಶಿಕ್ಷಣ ವ್ಯವಸ್ಥೆಗೆ ಸೇರಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಬಡತನ, ಬಾಲಕಾರ್ಮಿಕತೆ, ಬಾಲ್ಯ ವಿವಾಹ ಮತ್ತು ಮೂಲಸೌಕರ್ಯದ ಕೊರತೆ ಇರುವ ಪ್ರದೇಶಗಳಲ್ಲಿ ಕೂಡ ಮಕ್ಕಳಿಗೆ ಅನುಗುಣವಾದ ಸಮಯ ಹಾಗೂ ಕೈಚಳಕದ ಪಾಠಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಶಾಲೆ ಬಿಟ್ಟವರ ಪ್ರಮಾಣ 50% ಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ಹೆಮ್ಮೆಯ ವಿಚಾರ.

Teacher Rubel Nagy wins $1 million award for transforming slums into open classrooms – ತುಳುಟೈಮ್ಸ್

ಇದನ್ನೂ ಓದಿ : ಗಡಿಯಾರ ತಯಾರಿಕೆಗೆ ಹೊಸ ರೂಪ : ರೋಟೋರಿಸ್

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SMsGYz8mdYQ?si=HRTlAeNA_venfjvv

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 18

You cannot copy content of this page