ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಸುಳ್ಯ: ಕಫ ಮತ್ತು ಉಸಿರಾಟದ ಸಮಸ್ಯೆಯಿಂದ ಮಗು ಸಾವು

ಸುಳ್ಯ: Tulu Times | ಬೆಳ್ಳಾರೆಯಲ್ಲಿ ಉಸಿರಾಟದ ಸಮಸ್ಯೆ   ಹಾಗೂ ಕಫ ತೀವ್ರವಾಗಿ  2 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಫೆ.13ರಂದು ಪುರುಷೋತ್ತಮ ಅವರು ನಿಡ್ಮಾರಿನ ಸುಮಿತ್ರಾ ಅವರ ಮಗು 2 ತಿಂಗಳ ಹೆಣ್ಣು ಮಗಳು ಧೃತಿಗೆ ಕಫ ಮತ್ತು ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.  ಮಗುವನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಮಗುವನ್ನು ಪರೀಕ್ಷಿಸಿದ ನಂತರ ಮಗು ಉಸಿರಾಟವನ್ನೇ ನಿಲ್ಲಿಸಿರುವುದಾಗಿ ವೈದ್ಯರು ಹೇಳಿದ್ದಾರೆ. ಮಗು ಹುಟ್ಟಿದ ನಂತರ  ಕಫ, ಉಸಿರಾಟದ ತೊಂದರೆ ಮತ್ತಿತರ ದೈಹಿಕ ತೊಂದರೆಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ  ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಕಡಬ: ಕುಮಾರಧಾರ ನದಿಗೆ ಆಯತಪ್ಪಿ ಬಿದ್ದು ಮಹಿಳೆ ಮೃತ್ಯು

ಅಲಂಕಾರು: ಪ್ರತ್ಯೇಕ ಪ್ರಕರಣದಲ್ಲಿ, ಮಹಿಳೆಯೊಬ್ಬರು ಕುಮಾರಧಾರ ನದಿಗೆ ಕಾಲು ಜಾರಿಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಬದ ಆಲಂಕಾರು ಗ್ರಾಮದ ನಗ್ರಿ ನಿವಾಸಿ ಬೆಳ್ತರವರ ಪತ್ನಿ ಕೊರಪ್ಪೋಳು(65ವ) ಶಾಂತಿಮೊಗರು ಕುಮಾರಧಾರ ನದಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಮಹಿಳೆ ಆತೂರಿಗೆ ಔಷದಿ ತರಲೆಂದು,ಆತೂರಿನಿಂದ ಆಲಂಕಾರಿನವರೆಗೆ ಬಸ್ಸಲ್ಲಿ ಬಂದು ಆಲಂಕಾರಿನಿಂದ ಶಾಂತಿಮೊಗರುವಿನ ಮೂಲಕ ಕುಮಾರಧಾರ ನದಿ ತಟದ ಮೂಲಕ ನಡೆದುಕೊಂಡು ಹೋಗಿದ್ದರು. ಈ ವೇಳೆ ಕುಮಾರಧಾರ ಅಣೆಕಟ್ಟಿನ ಚಿಕ್ಕದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನದಿಯ ಪಕ್ಕದಲ್ಲಿ ಕಾಲುಜಾರಿ ನದಿಗೆ ಬಿದ್ದಿರ ಬಹುದು ಎನ್ನಲಾಗಿದೆ. ಮೃತರು ಪತಿ ಒರ್ವ ಪುತ್ರ ಸೇರಿದಂತೆ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.

Sullia: Child dies due to phlegm and respiratory problems- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page