ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರು: ತ್ರಿಬಲ್ ರೈಡಿಂಗ್ ಬೈಕ್ ಗೆ ಕಾರು  ಡಿಕ್ಕಿಯಾಗಿ ಗಂಭೀರ ಗಾಯ

ಮಂಗಳೂರು: Tulu Times | ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನುಗ್ಗಿದ ತ್ರಿಬಲ್ ರೈಡಿಂಗ್ ಬೈಕ್ ಗೆ ಕಾರು  ಡಿಕ್ಕಿ ಹೊಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುರತ್ಕಲ್ ಬಳಿ ಈ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಹೆಲ್ಮಟ್ ಧರಿಸದೇ  ಬೈಕ್ ನಲ್ಲಿ ತ್ರಿಬಲ್ ರೈಡ್ ಪ್ರಯಾಣ ಮಾಡುತ್ತಿದ್ದ ಬೈಕ್ ಸವಾರರು ರಾಂಗ್ ಸೈಡ್ ನಲ್ಲಿ ಹೆದ್ದಾರಿಗೆ ಬೈಕ್ ನುಗ್ಗಿಸಿರುವ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಾರು ಸ್ವೀಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಮೂವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಗಳೂರು: ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

ಮಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ, ಪ್ರತ್ಯೇಕ ಪ್ರಕರಣದಲ್ಲಿ, ಭಾರತೀಯರನ್ನು ಗುರಿಯಾಗಿಸಿ ವಂಚನೆ ನಡೆಸಿ, ನೇಪಾಳದಲ್ಲಿದ್ದುಕೊಂಡು ಆನ್‌ಲೈನ್ ಹೂಡಿಕೆ ನೆಪದಲ್ಲಿ ಜನರನ್ನು ವಂಚಿಸಿರುವ ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.

ವಂಚನೆ ನಡೆಸಿರುವ ತಂಡವನ್ನು ಭೇದಿಸಿರುವ ಇಲ್ಲಿನ ಸೆನ್ ಕ್ರೈಂ ಠಾಣೆಯ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದು, ಇವರಿಂದ ಒಂದು ಲ್ಯಾಪ್ ಟಾಪ್, ವಿವಿಧ ಕಂಪನಿಗಳ 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಗಳ 20 ಸಿಮ್ ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್ ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 16 ಭಾರತೀಯರು ಹಾಗೂ ಒಬ್ಬ ಚೀನಾ ಪ್ರಜೆ ಸೇರಿ 17 ಮಂದಿ ಸೇರಿಕೊಂಡು ಆನ್‌ಲೈನ್ ಹೂಡಿಕೆ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದರು. 11 ಆರೋಪಿಗಳನ್ನು ಸೆನ್ ಕೈರಾಣೆಯ ಪೊಲೀಸರು ಬಂಧಿಸಿದ್ದಾರೆ. ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಚೀನಾದ ಆರೋಪಿಯನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಈ ಕುರಿತು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳು ಯಾರು..?

ಗುಜರಾತಿನ ಭಾವನಗರ ಜಿಲ್ಲೆಯ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಕೋಲ್ಕತ್ತದ ಸೌಮ್ಯಾಧಿತ್ಯಚಟ್ಟೋಪಾಧ್ಯಾಯ (21), ಜಾರ್ಖಾಂಡ್‌ನ ಸಿಂಗಬುಮ್ ಜಿಲ್ಲೆ ಪುಪ್ಲ ಶಿವ ಕುಮಾರ್ ರಾವ್ (32), ಮಿಥುನ್ ಕುಮಾರ್ ಮಂಗರಾಜ್ (38), ಡಿಯೋಗರ್ ಜಿಲ್ಲೆಯ ರಾಜೇಶ್ ಮಂಡನ್ (30), ಉತ್ತರ ಪ್ರದೇಶದ ಮಾವೋ ಜಿಲ್ಲೆಯ ಗೌರವ್ ಪಾಂಡೆ (24), ಸುಲ್ತಾನ್ ಪುರ್ ಜಿಲ್ಲೆಯ ಹರ್ಷ್ ಮಿಸ್ತಾ (221, ಲಖನೌ ಜಿಲ್ಲೆಯ ಮೊಹಮ್ಮದ್ ಆಕೀಬ್ ಅಲಿ (27), ಝಾನ್ಸಿಜಿಲ್ಲೆಯ ನೌಶಾದ್ ಅಲಿ (34), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ರಾಜಾಸ್ಥಾನದ ಜೈಪುರದ ಓಂ ಪ್ರಕಾಶ್ ಯಾದವ್ (37) ಬಂಧಿತರಾಗಿದ್ದಾರೆ.

Mangaluru: Triple riding bike collides with car, seriously injured- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page