ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಪುತ್ತೂರು

Puttur ಮೂಲದ ಯುವಕ ಸಾವು! ಪ್ರೇಮಪಾಶವೋ? ಆಹಾರದಲ್ಲಿ ವಿಷವೋ?

Puttur ಮೂಲದ ಯುವಕ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಲಾಡ್ಜ್‌ ಒಂದರಲ್ಲಿ ತಕ್ಷಿತ್‌ (20 ವರ್ಷ) ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ತಕ್ಷಿತ್‌ ಶವ ಅ. 17 ಶುಕ್ರವಾರ ರಾತ್ರಿ ಪತ್ತೆಯಾಗಿದೆ.

8 ದಿನದ ಹಿಂದೆ ತಕ್ಷಿತ್‌ ತನ್ನ ಪ್ರೇಯಸಿಯ ಜೊತೆ ಬೆಂಗಳೂರಿಗೆ ಬಂದಿದ್ದ ಎಂದು ವರದಿಯಾಗಿದೆ. 8 ದಿನಗಳ ಕಾಲ ಲಾಡ್ಜ್‌ನಲ್ಲಿ ಈ ಜೋಡಿ ವಾಸವಿತ್ತು. 9ನೇ ದಿನ ನಿಗೂಢವಾಗಿ ಹುಡುಗ ಸಾವು ಕಂಡಿದ್ದು ಸಾವಿನ ಸುತ್ತು ಹಲವು ಅನುಮಾನ ವ್ಯಕ್ತವಾಗಿದೆ. ತಕ್ಷಿತ್‌ ಸಾವು ಕಾಣುವ ಮುಂಚೆಯೇ ಯುವತಿ ಬೆಂಗಳೂರನ್ನು ತೊರೆದಿದ್ದಳು ಎನ್ನಲಾಗಿದೆ.

ತಕ್ಷಿತ್ ಅಕ್ಟೋಬರ್ 9 ರಂದು ಮಡಿವಾಳದ ಗ್ರ್ಯಾಂಡ್‌ ಚಾಯ್ಸ್‌ನಲ್ಲಿ ರೂಮ್‌ ಮಾಡಿದ್ದ. ಕೊಡಗಿನ ವಿರಾಜಪೇಟೆಯ ತನ್ನ ಪ್ರೇಯಸಿ ಪ್ರಿಯಾಂಕಾ ಜೊತೆ ತಕ್ಷಿತ್‌ ರೂಮ್‌ ಮಾಡಿಕೊಂಡಿದ್ದ. ತಕ್ಷಿತ್ – ಪ್ರಿಯಾಂಕ ಪಣಂಬೂರಿನಲ್ಲಿ ಈ ಹಿಂದೆ ಬಿಬಿಎ ಓದುತ್ತಿದ್ದರು. ಬ್ಯಾಕ್ ಲಾಗ್ಸ್ ಇದ್ದ ಕಾರಣಕ್ಕೆ ಇಬ್ಬರೂ ಕಾಲೇಜಿಂದ ಡ್ರಾಪೌಟ್ ಆಗಿದ್ದರು. ಈ ವೇಳೆ ತಕ್ಷಿತ್‌, ತನ್ನ ಮನೆಯವರಿಗೆ ಮೈಸೂರಿಗೆ ಓದುವುದಕ್ಕೆ ಹೋಗುತ್ತೇನೆ ಅಂತಾ ಸುಳ್ಳು ಹೇಳಿ ಪ್ರೇಯಸಿ ಜೊತೆ ಬೆಂಗಳೂರಿಗೆ ಬಂದಿದ್ದ.

ಕಳೆದ ಎಂಟು ದಿನವೂ ತಿಂಡಿ, ಊಟ ಪಾರ್ಸೆಲ್‌ ತರಿಸಿಕೊಂಡು ರೂಮ್‌ನಲ್ಲಿ ಕಾಲ ಕಳೆಯುತ್ತಿದ್ದರು. ಶುಕ್ರವಾರದಂದು ಸ್ವಿಗ್ಗಿಯಲ್ಲಿ ತಕ್ಷಿತ್ ಹಾಗೂ ಆಕೆ ಊಟ ತರಿಸಿಕೊಂಡು ಊಟ ಮಾಡಿದ್ದಾರೆ. ಬಳಿಕ ಫುಟ್‌ ಪಾಯ್ಸನ್‌ ಕಾರಣಕ್ಕೆ ಇಬ್ಬರೂ ಮೆಡಿಕಲ್‌ಗೆ ಹೋಗಿ ಮಾತ್ರೆ ತಂದು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಪ್ರಿಯಾಂಕಾ ರೂಮ್‌ ಚೆಕ್‌ಔಟ್‌ ಮಾಡಿ ಊರಿಗೆ ವಾಪಸಾಗಿದ್ದಳು. ಆದರೆ, ರೂಮ್‌ನಲ್ಲಿಯೇ ಇದ್ದ ತಕ್ಷಿತ್‌ ಸಾವನ್ನಪ್ಪಿದ್ದಾನೆ.

ಶುಕ್ರವಾರ ರಾತ್ರಿ ಲಾಡ್ಜ್‌ನ ಸಿಬ್ಬಂದಿ ರೂಮ್‌ನ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾಸ್ಟರ್ ಕೀ ಬಳಸಿ ರೂಮ್ ತೆಗೆದಾಗ ತಕ್ಷಿತ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ತಕ್ಷಿತ್ ಗೆ ಹೃದಯಾಘಾತ ಆಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದಲ್ಲಿ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿದೆ. ಸ್ವಿಗ್ಗಿಯಲ್ಲಿ ತಂದ ಆಹಾರದಿಂದ ಫುಡ್‌ ಪಾಯ್ಸನ್‌ ಆಗಿರಬಹುದೇ? ಯುವತಿ ರೂಮ್‌ನಿಂದ ಹೋಗೋವರೆಗೂ ಜೀವಂತವಾಗಿದ್ದ ತಕ್ಷಿತ್‌ ಆನಂತರ ಸಾವು ಕಂಡಿದ್ದು ಹೇಗೆ? ತಕ್ಷಿತ್ – ಪ್ರಿಯಾಂಕ ಜೊತೆಯಾಗಿ 8 ದಿನ ರೂಮ್‌ನಲ್ಲಿ ಇದ್ದಿದ್ದು ಏಕೆ? ಇಬ್ಬರ ನಡುವೆ ಬ್ರೇಕ್‌ ಆಗಿ ಯುವತಿ ಕೊಲೆ ಮಾಡುವ ಮಟ್ಟಕ್ಕೆ ಇಳಿದಳೇ ಅಥವಾ ಹೃದಯಾಘಾತ ಆಯ್ತಾ? ಈ ಎಲ್ಲಾ ಅನುಮಾನ ಪೊಲೀಸರನ್ನು ಕಾಡಿದೆ.

ಇದನ್ನೂ ಓದಿ:  ಪಬ್ಲಿಕ್‌ನಲ್ಲಿ ನಮಾಜ್ ಮಾಡೋದನ್ನು ನಿಷೇಧಿಸಿ; ಸಿಎಂಗೆ ಯತ್ನಾಳ್ ಪತ್ರ

======================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page