ಬೆಂಗಳೂರು: Tulu Times l ರಾಜ್ಯದ 320 ಕಿಲೋಮೀಟರ್ ಉದ್ದದ ಕರಾವಳಿಯನ್ನು ಪ್ರವಾಸಿಗರ ಆಕರ್ಷಕ ಕೇಂದ್ರವಾಗಿ ರೂಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಕರಾವಳಿ ಪ್ರವಾಸೋದ್ಯಮ ವಿಸ್ತರಣೆಗೆ ಮೊದಲ ದೊಡ್ಡ ಹೆಜ್ಜೆ ಇಟ್ಟಿದ್ದು, ಮೂಲಸೌಕರ್ಯ ಅಭಿವೃದ್ಧಿಗಾಗಿ 40 ಸ್ಥಳಗಳನ್ನು ಗುರುತಿಸಿದೆ.
ಗೋವಾ ಮಾದರಿಯಲ್ಲಿ ಕರಾವಳಿ ಕರ್ನಾಟಕವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಸಮುದ್ರ ಹತ್ತಿರದ ರಿಸಾರ್ಟ್ಗಳು ಮತ್ತು ವಸತಿ ವ್ಯವಸ್ಥೆಗಳು, ರೆಸ್ಟೋರೆಂಟ್ಗಳು, ಅಮ್ಯೂಸ್ಮೆಂಟ್ ಪಾರ್ಕ್ಗಳು, ಸಮುದ್ರ ಮತ್ತು ಹಿನ್ನೀರಿನ ಕ್ರೂಸ್ ಸೇವೆಗಳನ್ನು ಅಭಿವೃದ್ಧಿಪಡಿಸಲು ಇಲಾಖೆ ಪ್ರಸ್ತಾಪಿಸಿದೆ. ಅಲ್ಲದೇ, ನಾವು ಸ್ಥಳಗಳನ್ನು ಗುರುತಿಸಿದ್ದೇವೆ. ಶೀಘ್ರದಲ್ಲೇ ಅಗತ್ಯ ಮೂಲಸೌಕರ್ಯ ನಿರ್ಮಾಣ ಮಾಡಲಾಗುವುದು, ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಸಂಸತ್ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲರು ಡಿಎಚ್ಗೆ ತಿಳಿಸಿದ್ದಾರೆ.
ಅಭಿವೃದ್ಧಿಯಲ್ಲಿ ಪರಿಸರ ಪ್ರವಾಸೋದ್ಯಮ ;
ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಾಗಿದೆ ಎಂದು ಅವರು ಹೇಳಿದರು. ಈ ಅಭಿವೃದ್ಧಿಯಲ್ಲಿ ಪರಿಸರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಆಹಾರ ಪ್ರವಾಸೋದ್ಯಮ, ಒಳನಾಡು ಜಲ ಪ್ರವಾಸೋದ್ಯಮ, ಸಮುದ್ರ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ ಹಾಗೂ ವೆಲ್ನೆಸ್ ಪ್ರವಾಸೋದ್ಯಮ ಸೇರಿದಂತೆ ಹಲವು ವಿಷಯಗಳನ್ನು ಒಗ್ಗೂಡಿಸಲಾಗುವುದು. ಕರಾವಳಿ ಪ್ರಚಾರಕ್ಕಾಗಿ ಪ್ರತಿವರ್ಷ ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಪ್ರವಾಸಿ ತಾಣಗಳನ್ನು ಪ್ರದರ್ಶಿಸುವ ಉತ್ಸವಗಳನ್ನು ಆಯೋಜಿಸಲಾಗುವುದು. ಕಡಲತೀರದ ಕಾರ್ಯಕ್ರಮಗಳು, ನೇರ ಪ್ರದರ್ಶನಗಳು ಹಾಗೂ ಮಾರುಕಟ್ಟೆಗಳು ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಈ ಉತ್ಸವಗಳನ್ನು ಪ್ರಚಾರ ಮಾಡುವ ಯೋಜನೆಯೂ ಇದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪಣಂಬೂರು ಬೀಚ್ ಟೂರಿಸಂ ಸಂಸ್ಥೆಯ ಸಿಇಒ ಯತೀಶ್ ಬೈಕಂಪಾಡಿ ಅವರು, ಸ್ಥಳೀಯರಿಗೆ ಶಕ್ತಿ ನೀಡುವ ಮತ್ತು ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುವ ಅಭಿವೃದ್ಧಿಯಾದರೆ ಅದು ಸ್ವಾಗತಾರ್ಹ. ಕರಾವಳಿ ಕರ್ನಾಟಕದಲ್ಲಿ ಉತ್ತಮ ಆಹಾರ, ದೇವಾಲಯಗಳು, ಸಂಸ್ಕೃತಿ ಮತ್ತು ಸುಂದರ ಕಡಲತೀರಗಳಿವೆ. ಕಾಂತಾರ ಚಿತ್ರದಂತಹ ಸಿನಿಮಾಗಳಿಂದಲೂ ಪ್ರವಾಸೋದ್ಯಮ ಹೆಚ್ಚಾಗಿದೆ. ಸರ್ಫಿಂಗ್ ಶಾಲೆಗಳ ಕಾರಣದಿಂದ ಪ್ರವಾಸೋದ್ಯಮ ಸಹಜವಾಗಿ ಬೆಳೆದಿದೆ, ಎಂದರು.
Karnataka aims for Goa-style beach tourism – ತುಳು ಟೈಮ್ಸ್
ಇದನ್ನೂ ಓದಿ : ಡಿಜಿಪಿ ಹುದ್ದೆಯ ಐಪಿಎಸ್ ಅಧಿಕಾರಿ ವಿರುದ್ಧ ಅಶ್ಲೀಲ ವೀಡಿಯೋ ಆರೋಪ
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/XyP1Yl5GcG0?si=_SJWmeFra8tQb4en











