ಮನಶಾಸ್ತ್ರ : Tulu Times | ಮೇಲ್ಮೈಯಲ್ಲಿ ನಾವು ಎಲ್ಲರ ಜೊತೆ ಚೆನ್ನಾಗಿಯೇ ಇರುತ್ತೇವೆ. ದಯಾಳು ಆಗಿರುವುದು. ಸಹಾಯ ಮಾಡುವುದು. ಎಲ್ಲರಿಗೂ ಸುಲಭವಾಗಿ ಹೊಂದಿಕೊಳ್ಳುವುದು ಇತ್ಯಾದಿ…. ಆದರೆ ಈ ರೀತಿಯಲ್ಲಿ ಬದುಕಿರುವವರಿಗೆ ಗೊತ್ತು, ಇದು ಎಷ್ಟು ದಣಿವನ್ನು ತರುತ್ತದೆ ಎಂಬುದು. “ಇಲ್ಲ” ಹೇಳಬೇಕಾದಾಗ “ಹೌದು” ಎನ್ನುವುದು. ಪ್ರತಿ ಪ್ರತಿಕ್ರಿಯೆಯನ್ನು ಅತಿಯಾಗಿ ಯೋಚಿಸುವುದು. ನಿಮ್ಮ ಹೊಣೆ ಅಲ್ಲದ ವಿಷಯಕ್ಕೂ ತಪ್ಪಿತಸ್ಥ ಭಾವಿಸುವುದು. ಮನಶಾಸ್ತ್ರ ಇದಕ್ಕೆ ಕಾರಣವನ್ನು ಹೇಳುತ್ತದೆ. ಮತ್ತು ಏಕೆ ಇದನ್ನು ಬಿಟ್ಟುಬಿಡುವುದು ಅಷ್ಟೊಂದು ಸುಲಭವಲ್ಲ ಎನ್ನುವುದನ್ನೂ ಕೂಡಾ ಹೇಳಲಾಗುತ್ತದೆ.
ಇದು ಬದುಕು ಉಳಿಸುವ ಅಭ್ಯಾಸವಾಗಿ ಆರಂಭವಾಗುತ್ತದೆ ;
ಇದು ಸಾಮಾನ್ಯವಾಗಿ ಒಂದು ದಿನದಲ್ಲಿ ಹುಟ್ಟುವುದಿಲ್ಲ. ಇದು ನಿಧಾನವಾಗಿ, ಬಹಳ ಬೇಗ ಮಕ್ಕಳಾಗಿದ್ದಾಗಿನಿಂದಲೇ ಶುರುವಾಗುತ್ತದೆ. ಪ್ರೀತಿ, ಸುರಕ್ಷತೆ, ಅಥವಾ ಮೆಚ್ಚುಗೆ ಶರತ್ತುಗಳ ಮೇಲೆ ಸಿಗುವ ಮನೆಯಲ್ಲಿದ್ದರೆ, ಮಗು ಒಂದು ವಿಷಯ ಕಲಿಯುತ್ತದೆ: ನಾನು ಒಳ್ಳೆಯವನಾಗಿದ್ದರೆ… ವಿರೋಧಿಸದಿದ್ದರೆ… ಎಲ್ಲರನ್ನೂ ಸಂತೋಷಪಡಿಸಿದರೆ… ಎಲ್ಲವೂ ಶಾಂತವಾಗಿರುತ್ತದೆ ಎಂಬುವುದಾಗಿ. ಹಾಗಾಗಿ, “ಇಲ್ಲ” ಎಂದರೆ ಕೋಪ, ನಿರ್ಲಕ್ಷ್ಯ, ಅಥವಾ ಮೌನ ಎದುರಾಗಬಹುದು. ಆದ್ದರಿಂದ ಮೆದುಳು ಒಂದು ನಿಯಮವನ್ನು ರೂಪಿಸುತ್ತದೆ: ಎಲ್ಲರನ್ನೂ ಸಂತೋಷಪಡಿಸು = ನೀನು ಸುರಕ್ಷಿತ.
ದೇಹವೇ ಅಪಾಯ ಎಂದು ಭಾವಿಸುತ್ತದೆ ;
ವಯಸ್ಸಾದ ಮೇಲೆ ಕೂಡ, ಎಲ್ಲರನ್ನೂ ಸಂತೋಷಪಡಿಸುವುದರಿಂದ ಸಣ್ಣ ವಿಷಯಗಳಿಗೂ ಗಟ್ಟಿಯಾಗಿ ಪ್ರತಿಕ್ರಿಯಿಸುತ್ತಾರೆ. ಧ್ವನಿಯಲ್ಲಿನ ಬದಲಾವಣೆ. ತಡವಾದ ಮೆಸೇಜ್. ಮುಖದಲ್ಲಿನ ಸ್ವಲ್ಪ ನಿರಾಶೆ. ಇವೆಲ್ಲವೂ ಒಳಗೆ ಆತಂಕ ಹುಟ್ಟಿಸುತ್ತವೆ. ಮನಶಾಸ್ತ್ರ ಹೇಳುವಂತೆ, ಇದು nervous system ಗೆ ಸಂಬಂಧಿಸಿದೆ. ಮಕ್ಕಳಾಗಿದ್ದಾಗ ಇತರರ ಭಾವನೆಗಳನ್ನು ನೋಡಿಕೊಳ್ಳಬೇಕಾದವರು, ದೊಡ್ಡವರಾದರೂ ದೇಹದಲ್ಲಿ ಎಚ್ಚರಿಕೆಯ ಸ್ಥಿತಿಯಲ್ಲೇ ಇರುತ್ತಾರೆ. “ಇಲ್ಲ” ಹೇಳುವುದು ಕೇವಲ ಅಸೌಕರ್ಯವಾಗುವುದಿಲ್ಲ. ಎದೆ ಬಿಗಿಯಾಗುವುದು. ಮನಸ್ಸು ಅಶಾಂತವಾಗುವುದು. ಏನೋ ಕೆಟ್ಟದ್ದು ಆಗಲಿದೆ ಅನ್ನುವ ಭಾವನೆ. ದೇಹವೇ ಅಪಾಯ ಎಂದು ಭಾವಿಸುತ್ತದೆ.
ಇದನ್ನು ಬಿಟ್ಟುಬಿಡುವುದು ಕಷ್ಟವಾಗುವುದಕ್ಕೆ ಇನ್ನೊಂದು ಕಾರಣ – ಇದು ಕೆಲಸ ಮಾಡುತ್ತದೆ. ನೀವು ಮೆಚ್ಚುಗೆ ಪಡೆಯುತ್ತೀರಿ. ಜಗಳ ತಪ್ಪಿಸುತ್ತೀರಿ. ಒಳ್ಳೆಯ ವ್ಯಕ್ತಿ ಎಂಬ ಹೆಸರು ಬರುತ್ತದೆ. ಮೆದುಳಿಗೆ ಇದು ಆರಾಮ ಕೊಡುತ್ತದೆ. ಮನಃಶಾಸ್ತ್ರದಲ್ಲಿ ಇದನ್ನು reinforcement ಎನ್ನುತ್ತಾರೆ. ಪ್ರತಿ ಬಾರಿ ನೀವು ಯಾರನ್ನಾದರೂ ಸಂತೋಷಪಡಿಸಿ ಒತ್ತಡ ತಪ್ಪಿಸಿಕೊಂಡಾಗ, ಆ ಅಭ್ಯಾಸ ಇನ್ನಷ್ಟು ಬಲವಾಗುತ್ತದೆ. ಇನ್ನೊಂದೆಡೆ, “ಅವಳು ತುಂಬಾ ಒಳ್ಳೆಯವಳು.“ಅವನು ಯಾವತ್ತೂ ಸಹಾಯ ಮಾಡ್ತಾನೆ.” “ಅವರು ಏನೂ ಕೇಳಲ್ಲ.” ಇದರಿಂದ ಒಂದು ಪ್ರಶ್ನೆ ಹುಟ್ಟುತ್ತದೆ:
ನಾನು ಇನ್ನು ಎಲ್ಲರಿಗೂ ಒಪ್ಪಿಕೊಳ್ಳದೇ ಇದ್ದರೆ, ಜನ ನನಗೆ ಇನ್ನೂ ಮೌಲ್ಯ ಕೊಡ್ತಾರಾ? ಈ ಭಯವೇ ಹಲವರನ್ನು ಅದೇ ಚಕ್ರದಲ್ಲಿ ಕಟ್ಟಿಹಾಕುತ್ತದೆ.
Do you find it difficult to give the word ‘no’ the same value you give to the word ‘yes’? What does psychology say? – ತುಳು ಟೈಮ್ಸ್
ಇದನ್ನೂ ಓದಿ :ತೆಲಂಗಾಣದಲ್ಲಿ 300 ಬೀದಿ ನಾಯಿಗಳ ಸಾಮೂಹಿಕ ಹತ್ಯೆ : ಮಾನವೀಯತೆ ಮರೆತರೇ ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=YzNNNOhaMB2P0rSo











