ಬೆಳ್ತಂಗಡಿ: Tulu Times | ಬಸ್ಸಿನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ಮೂವರ ಮೇಲೆ ಅಪರಿಚಿತರಿಂದ ಹಲ್ಲೆಯಾಗಿದ್ದು, ಪ್ರಕರಣ ದಾಖಲಾಗಿದೆ.
ಜ.10 ರಂದು ಅಪರಾಹ್ನ 3:15 ರ ಸುಮಾರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ನಾವೂರು ಗ್ರಾಮದ ಮಹಿಳೆ ಮತ್ತು ಅವರಿಬ್ಬರು ಮಕ್ಕಳಿಗೆ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿದ್ದಾರೆ.ನಾವೂರು ಗ್ರಾಮದ ನಿರಿಂದಿ ನಿವಾಸಿ ರಝಾಕ್ ಅವರ ಪತ್ನಿ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್ (19) ಹಲ್ಲೆಗೊಳಗಾದರಾಗಿದ್ದಾರೆ. ಈ ಕುರಿತಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದರಲ್ಲಿ ಮುಝಪರ್ ಅವರ ತಲೆಗೆ ಗಾಯವಾಗಿದೆ. ಇವರ ಜೊತೆಗೆ ಪುಟ್ಟ ಮಕ್ಕಳು ಕೂಡ ಇದ್ದರು. ಮಂಗಳೂರಿನ ಉಚ್ಚಿಲದಲ್ಲಿ ನಡೆಯಬೇಕಿದ್ದ ಕುಟುಂಬ ಕಾರ್ಯಕ್ರಮಕ್ಕೆ ಹೋಗುವ ಉದ್ದೇಶದಿಂದ ಕಳೆದ ಜ.9 ರಂದು ನಾವೂರು ಮನೆಗೆ ಆಗಮಿಸಿ ಜ.10 ರಂದು 3 ಗಂಟೆಗೆ ತಾಯಿ ಸಹೋದರ ಸಹಿತ ಕೆಎಸ್‌ಆರ್‌ಟಿಸಿ KA-19-F-3139 ನಂಬರಿನ ಬಸ್ಸಿನಲ್ಲಿ ಮಂಗಳೂರಿಗ ಪ್ರಯಾಣ ಹೊರಟಿದ್ದರು.
ಬೆಳ್ತಂಗಡಿಯಲ್ಲಿ ಬಸ್ಸು ಹತ್ತಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯರೂ ಇದ್ದ ಬಸ್ಸಿನಲ್ಲಿ ಜೋರಾದ ಶಬ್ದದಲ್ಲಿ ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದು ಇತರ ಪ್ರಯಾಣಿಕರಿಗೆ ಮತ್ತು ಮಹಿಳೆಯರಿಗೆ ಮುಜುಗರ ತಂದಿದೆ. ಈ ವರ್ತನೆ ಕಂಡು ಮುಝಫರ್ ಸಾರ್ವಜನಿಕವಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಇಬ್ಬರು ಯುವಕರಿಗೆ ತಿಳಿಸಿದನ್ನೇ ನೆಪವಾಗಿಟ್ಟುಕೊಂಡು ಅಪರಿಚಿತರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ.
ಯುವಕರ ವರ್ತನೆಯಿಂದ ಮುಝಫರ್ ಅವರ ತಾಯಿ ಕಂಡೆಕ್ಟರ್ ಬಳಿ ಬಸ್ಸು ನಿಲ್ಲಿಸುವಂತೆ ಕೇಳಿಕೊಂಡರು. ಮದ್ಯಡ್ಕ ಬಸ್ ನಿಲ್ದಾಣದ ಎದುರು ಹೋಗಿ ಬಸ್ ನಿಲ್ಲಿಸಿದರು. ಈ ವೇಳೆ ಮುಝಪರ್ ಅವರ ತಾಯಿಯನ್ನು ದೂಡಿ, ತುಳಿದು ಸಹೋದರರು ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಮುಝಪರ್ ಅವರನ್ನು ಬಸ್ಸು ನಿಂದ ಹೊರಗೆಳೆದು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಜ.10 ರಂದು ಪೊಲೀಸರು 74 115(2) 118(2) 352 r/w 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಿಂದ ಗಾಯಗೊಂಡ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್(19) ಮೂವರು ಗುರುವಾಯನಕರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಗಾಯಗೊಂಡ ಮುರುಫರ್ ದೂರು ನೀಡಿದ್ದಾರೆ.
Belthangady: Case registered for using obscene words towards women on bus- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











