ಬ್ರೇಕಿಂಗ್ ನ್ಯೂಸ್
ದೇಶ

ಧರ್ಮಶಾಲಾದಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ರ‍್ಯಾಗಿಂಗ್

ಧರ್ಮಶಾಲಾ : Tulu Times | ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚಾಗುತ್ತಲೇ ಇದೆ. ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಾವು ನೋವಿನಿಂದ ಬಳಲುತ್ತಿರುವ ಕುಟುಂಬದವರ ಅಳಲನ್ನು ಕೇಳೋದಿಕ್ಕೂ ಯಾರೂ ಇರೋದಿಲ್ಲ. ಇಲ್ಲೊಂದು ಘಟನೆಯಿಂದ ವಿದ್ಯಾರ್ಥಿನಿಯು ಮೃತಪಟ್ಟಿದ್ದಾಳೆ. ರ‍್ಯಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ವಿದ್ಯಾರ್ಥಿನಿ ಮೃತ ;

ಹೌದು…! ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ, ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ ನಂತರ, ಮೂರು ವಿದ್ಯಾರ್ಥಿನಿಯರು ಮತ್ತು ಒಬ್ಬ ಪ್ರಾಧ್ಯಾಪಕರ ವಿರುದ್ಧ ರ‍್ಯಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವಿದ್ಯಾರ್ಥಿನಿಯ ತಂದೆಯ ಪ್ರಕಾರ, ಪ್ರಾಧ್ಯಾಪಕರ ಅಸಭ್ಯ ವರ್ತನೆ ಮತ್ತು ಮಾನಸಿಕ ಕಿರುಕುಳದಿಂದ ಮಗಳು ತೀವ್ರ ಒತ್ತಡಕ್ಕೆ ಒಳಗಾಗಿ, ಆಕೆಯ ಆರೋಗ್ಯ ಕ್ರಮೇಣ ಹದಗೆಟ್ಟಿತು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಕಣ್ಣೀರಿಟ್ಟಿರುತ್ತಾರೆ. ಕುಟುಂಬದವರು, ಮಗಳ ಸಾವಿನ ಆಘಾತದಿಂದ ತಕ್ಷಣ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾವಿಗೆ ಮುನ್ನ ಮಗಳು ಮೊಬೈಲ್‌ನಲ್ಲಿ ದಾಖಲಿಸಿದ ವೀಡಿಯೊ ದೊರಕಿದ ನಂತರ, ದೂರು ದಾಖಲಿಸಲು ನಿರ್ಧರಿಸಿದರು. ತಂದೆಯ ಹೇಳಿಕೆಗೆ ಅನುಸಾರ, ಡಿಸೆಂಬರ್ 20ರಂದು ಅವರು ಪೊಲೀಸರು ಮತ್ತು ಮುಖ್ಯಮಂತ್ರಿ ಸಹಾಯವಾಣಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ವಿಪರೀತವಾಗಿ ಹಿಂಸೆ ಹಾಗೂ ಮನಸ್ಸಲ್ಲೇ ನೋವುಂಡು ಬೇಸತ್ತ ಈ ವಿದ್ಯಾರ್ಥಿನಿ, ಸಾವಿಗೆ ಮುನ್ನ ತನ್ನ ಅನುಭವಗಳನ್ನು ವಿವರಿಸುವ ವೀಡಿಯೊವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ದಾಖಲಿಸಿದ್ದಳು. ಆ ವೀಡಿಯೊದಲ್ಲಿ, ಪ್ರಾಧ್ಯಾಪಕರು ಅಸಭ್ಯವಾಗಿ ಸ್ಪರ್ಶಿಸಿದ್ದು, ತರಗತಿಯಲ್ಲಿ ಮತ್ತು ಕಾಲೇಜು ಆವರಣದಲ್ಲಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆಕೆ ಹೇಳಿದ್ದಾಳೆ.

ಈ ಪ್ರಕರಣದಲ್ಲಿ ವಿದ್ಯಾರ್ಥಿನಿ ಕಲಿಯುತ್ತಿದ್ದ ಸಂಸ್ಥೆಯೂ ಆಕೆಯ ವಿರುದ್ಧವಾಗಿ ಹೇಳಿಕೆಯನ್ನು ನೀಡಿದ್ದು, ಪ್ರಾಧ್ಯಾಪಕರ ವಿರುದ್ಧದ ಕಿರುಕುಳ ಆರೋಪಗಳ ಬಗ್ಗೆ ಮಾತನಾಡುವಾಗ, ಆ ಪ್ರಾಧ್ಯಾಪಕರು ಹಲವು ವರ್ಷಗಳಿಂದ ಬೋಧಿಸುತ್ತಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನದನ್ನು ಹೇಳಲು ಇಚ್ಛಿಸುವುದಿಲ್ಲ. ಇದು ಪೊಲೀಸರ ತನಿಖೆಯ ವಿಷಯ, ಎಂದು ಅವರು ಹೇಳಿ ಮೌನ‌ಕ್ಕೆ ಶರಣಾಗುತ್ತಾರೆ. ಅಂದ್ರೆ ವಿದ್ಯಾರ್ಥಿನಿಗೆ ಆದ ಅನ್ಯಾಯದ ಬಗ್ಗೆ ಇಲ್ಲಿ ಯಾರೂ ಮಾತನಾಡುತ್ತಿಲ್ಲ. ಮನೆಯವರು ವಿದ್ಯಾರ್ಥಿನಿಯನ್ನು ಕಳೆದುಕೊಂಡ ನೋವಿಗೆ ನ್ಯಾಯ ಸಿಗುತ್ತೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ. Sexual assault and ragging on a student in Dharamshala – ತುಳು ಟೈಮ್ಸ್

ಇದನ್ನೂ ಓದಿ :ಪುತ್ತೂರು: ಪ್ರಾಂಶುಪಾಲರ ಮನೆಗೆ ನುಗ್ಗಿ ದರೋಡೆಗೆ ಯತ್ನ ! ಕಳ್ಳರು ಅರೆಸ್ಟ್‌

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page