ಸಿನಿಮಾ: Tulu Times | ಊರ್ವಶಿ ರೌಟೇಲಾ ಅವರು ಪ್ರಸಿದ್ಧ ಭಾರತೀಯ ಚಲನಚಿತ್ರ ನಟಿ ಮತ್ತು ಮಾಡೆಲ್ ಆಗಿ ಮಿಂಚುತ್ತಿರುವ ನಟಿ. ಇದೀಗ ಈ ನಟಿ ತನ್ನ ತಾಯಿಯ ಹುಟ್ಟು ಹಬ್ಬದಂದು ಚಿನ್ನಲೇಪಿತ ಕೇಕ್ ಒಂದನ್ನು ತಯಾರಿಸಿ ತನ್ನ ತಾಯಿಯನ್ನು ಖುಷಿಗೊಳಿಸಿದ್ದಾರೆ.
ವಿಶ್ವದ ಅತಿ ಎತ್ತರದ ಹೋಟೆಲ್‌ಆದ ಸಿಲ್ ದುಬೈ ಮರಿನಾದಲ್ಲಿ ಬರ್ತ್ ಡೇ!
ಬಾಲಿವುಡ್ ಖ್ಯಾತ ನಟಿಯರಲ್ಲಿ ಊರ್ವಶಿ ರೌಟೇಲಾ ಕೂಡ ಒಬ್ಬರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತನ್ನದೇ ಆದಂತಹ ಅಭಿಮಾನಿ ಬಳಗ ಹೊಂದಿರುವ ಈಕೆ ಅದ್ಭುತ ನಟಿ. ತನ್ನ ತಾಯಿ ಮೀರಾ ರೌಟೇಲಾ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಷನ್ ಮಾಡಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಶ್ವದ ಅತಿ ಎತ್ತರದ ಹೋಟೆಲ್‌ಆದ ಸಿಲ್ ದುಬೈ ಮರಿನಾದಲ್ಲಿ ಸ್ವರ್ಣಲೇಪಿತ ಕೇಕು ಕತ್ತರಿಸುವ ಮೂಲಕ ತಾಯಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ತಾಯಿ ಮಗಳ ನಡುವಿನ ಆತ್ಮೀಯ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ವಿಡಿಯೋನಲ್ಲಿ ನಟಿ ಊರ್ವಶಿ ತನ್ನ ತಾಯಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಲು ಸಿದ್ದರಾಗುತ್ತಿರುವುದು ಕಂಡುಬಂದಿದೆ.
ತಲೆಯ ಮೇಲೆ 24 ಕ್ಯಾರೆಟ್ ಚಿನ್ನದ ಕಿರೀಟ!
ವಿಡಿಯೋದಲ್ಲಿ, ಮೀರಾ ರೌಟೇಲಾ ಮತ್ತು ಊರ್ವಶಿ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದು, ಹುಟ್ಟುಹಬ್ಬದ ಆಚರಣೆಗಾಗಿ ಮೂರು ಅಂತಸ್ತಿನ ಅದ್ಧೂರಿ ಚಿನ್ನದ ಕೇಕ್ ಇಟ್ಟುಕೊಂಡು ನಟಿ ಊರ್ವಶಿ ತನ್ನ ತಾಯಿಯ ತಲೆಯ ಮೇಲೆ 24 ಕ್ಯಾರೆಟ್ ಚಿನ್ನದ ಕಿರೀಟ ಇಡುವುದನ್ನು ಗಮನಿಸಿದರೆ ಈಕೆಗೆ ತಾಯಿಯ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ತಿಳಿಯುತ್ತದೆ.
ನಟಿ ಊರ್ವಶಿ ನಟಿಸಿದ ಸಿನಿಮಾಗಳು ಯಾವುದು..?
2013 ರಲ್ಲಿ ಸನ್ನಿ ಡಿಯೋಲ್ ಅಭಿನಯದ ‘ಸಿಂಗ್ ಸಾಬ್ ದಿ ಗ್ರೇಟ್’ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2015 ರಲ್ಲಿ ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪ್ರವೇಶಿಸಿದರು. ಊರ್ವಶಿ ಅವರು ‘ಮಿಸ್ ದಿವಾ ಯೂನಿವರ್ಸ್ 2015′ ಕಿರೀಟ ಮುಡಿಗೇರಿಸಿಕೊಂಡಿದ್ದರು ಮತ್ತು 2015 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.’ಸನಮ್ ರೇ’, ‘ಗ್ರೇಟ್ ಗ್ರ್ಯಾಂಡ್ ಮಸ್ತಿ’, ‘ಹೇಟ್ ಸ್ಟೋರಿ 4’ ಮತ್ತು ‘ಪಾಗಲ್ಪಂತಿ’ ಇವರ ಗಮನಾರ್ಹ ಚಿತ್ರಗಳಾಗಿವೆ. ಇದೀಗ 2026 ರ ಹೊಸ ವರ್ಷದ ಆಚರಣೆಯನ್ನು ಗಾಯಕ ಬಿಸ್ಮಿಲ್ ಅವರೊಂದಿಗೆ ಆಚರಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ‘ಕಸೂರ್ 2’ ಮತ್ತು ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, 2026 ರಲ್ಲಿ ಬಿಡುಗಡೆಯಾಗಲಿರುವ ‘ಲವ್ ಅಂಡ್ ವಾರ್’ ಚಿತ್ರದ ತಾರಾಗಣದಲ್ಲೂ ಇವರು ಗುರುತಿಸಿಕೊಂಡಿದ್ದಾರೆ.
Look at how actress Urvashi Rautela prepared a gold-plated cake for her mother’s birthday!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











