ಬ್ರೇಕಿಂಗ್ ನ್ಯೂಸ್
ಕರ್ನಾಟಕ

ರಿಷಭ್‌ ಶೆಟ್ಟಿ ಫ್ಯಾಮಿಲಿ ಜೊತೆ ಗೋವಾ ಟ್ರಿಪ್..! ನ್ಯೂ ಈಯರ್‌ ಗೆ ಹೆಂಡ್ತಿಗೆ ಕೊಟ್ಟ ಗಿಫ್ಟ್‌ ಏನು ಗೊತ್ತಾ..?

‌ಸಿನಿಮಾ: Tulu Times | ಕಾಂತಾರಾ ಸಿನಿಮಾ ಸಕ್ಸಸ್‌ ಬಳಿಕ ರಿಷಭ್‌ ಶೆಟ್ಟಿ ಫ್ಯಾಮಿಲಿ ಹಲವಾರು ಕಡೆ ಟ್ರಪ್‌ ಹೋಗಿರುತ್ತಾರೆ. ಇದೀಗ ಹೊಸ ವರ್ಷದ ಪ್ರಯುಕ್ತ ಫ್ಯಾಮಿಲಿ ಜೊತೆ ಗೋವಾ ಟ್ರಿಪ್‌ ಹೋಗಿದ್ದಾರೆ, ಕೆಲವು ವೀಡಿಯೋಗಳನ್ನು ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇತ್ತೀಚೆಗೆ  ರಿಷಭ್‌ ಶೆಟ್ಟಿ, ಭೂತ ಕೋಲ ಸೇವೆಯ ಬಳಿಕ  ಪತ್ನಿ ಹಾಗೂ ಮಕ್ಕಳ ಜೊತೆ ಗೋವಾದಲ್ಲಿ ಟೂರ್ ಎಂಜಾಯ್ ಮಾಡಿ ಬಂದಿದ್ದಾರೆ.

ಮುದ್ದಾದ ಫ್ಯಾಮಿಲಿ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ !

ರಿಷಭ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಇದೀಗ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಗೋವಾ ವೆಕೇಶನ್ ಫೋಟೋಗಳನ್ನು ಶೇರ್ ಮಾಡಿದ್ದು, Throwback to the Goa trip ಎಂದು ಬರೆದುಕೊಂಡು, ಮುದ್ದಾದ ಫ್ಯಾಮಿಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನ, ಭೂತ ಕೋಲ, ಪೂಜೆ, ಪುರಸ್ಕಾರ ಎನ್ನುತ್ತಾ ದೇವಸ್ಥಾನಗಳಿಗೆ ಭೇಟಿ ನೀಡುವುದರಲ್ಲಿ ಬ್ಯುಸಿಯಾಗಿದ್ದ ರಿಷಭ್ ಈಗ ಗೋವಾ ಕಡೆಗೆ ತೆರಳಿದ್ದಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.  ಬಹು ನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ.

ರಿಷಭ್‌ ಶೆಟ್ಟಿ ಮುಂದಿನ ಸಿನಿಮಾ ಯಾವುದು..?

ರಿಷಭ್‌ ಶೆಟ್ಟಿ  ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾ 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು, ಕಾಂತಾರಾ ಚಾಪ್ಟರ್ 2 ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂತಾರಾ ಸಿನಿಮಾಕ್ಕಾಗಿಯೇ ರಿಷಭ್‌ ಶೆಟ್ಟಿ ನಾಲ್ಕು ವರ್ಷಗಳೇ ಬಿಝಿಯಾಗಿದ್ದರು. ಎಡಿಟಿಂಗ್, ಪ್ರೊಮೋಶನ್, ಸಕ್ಸಸ್, ಸಕ್ಸಸ್ ಮೀಟ್ ಅಂತ ಕಂಪ್ಲೀಟ್‌ ಆಗಿ ತೊಡಗಿಸಿಕೊಂಡಿದ್ದರು. ಇದೀಗ ಫ್ಯಾಮಿಲಿ ಜೊತೆಗೆ ಟೈಮ್‌ ಕೊಟ್ಟು ಸುತ್ತಾಟ ನಡೆಸುತ್ತಿದ್ದಾರೆ. ಈ ಜೋಡಿಯ  ಮಕ್ಕಳ ತರಲೆ ತುಂಟಾಟ, ನಗು, ಫ್ಯಾಮಿಲಿ ಟೈಮಿಂಗ್ ಎಲ್ಲವನ್ನೂ ನೋಡಿ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದಾರೆ. ಇನ್ನು ರಿಷಭ್‌ ಕುಟುಂಬವನ್ನು ನೋಡಿದ ಅಭಿಮಾನಿಗಳು ಬೆಸ್ಟ್ ಫ್ಯಾಮಿಲಿ, ಸುಂದರವಾದ ಕುಟುಂಬ, ಝೀರೋ ಟು ಹೀರೋ ಎಂದು ಕಾಮೆಂಟ್ ಮಾಡಿ, ತಮ್ಮ ನೆಚ್ಚಿನ ನಟನನ್ನು ಹೊಗಳುತ್ತಿದ್ದಾರೆ.

Rishabh Shetty’s trip to Goa with his family..! Do you know what gift he gave his wife for New Year..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page