ಧರ್ಮಸ್ಥಳ: Tulu Times | ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, 2026ರ ಏಪ್ರಿಲ್ 29ರಂದು ಸಂಜೆ 6:40ಕ್ಕೆ ಗೋಧೂಳಿ ಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.
ಈ ಸಾಮೂಹಿಕ ವಿವಾಹದಲ್ಲಿ ಎರಡನೇ ಮದುವೆಯಾಗಲು ಯಾವುದೇ ಅವಕಾಶವಿಲ್ಲ. ಮೊದಲ ಮದುವೆಯಾಗಲು ಆಸಕ್ತಿ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆಯಾಗಲು ಬಯಸುವ ಮಂದಿ, ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ಹೂವಿನ ಹಾರ, ವರನಿಗೆ ಧೋತಿ, ಶಾಲು ನೀಡಲಾಗುವುದು. ಇನ್ನು ಮದುವೆಯ ಸಂಪೂರ್ಣವಾದ ಜವಾಬ್ದಾರಿ ಖರ್ಚುಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅಧ್ಯಕ್ಷತೆಯ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಭರಿಸಲಿದೆ ಎನ್ನಲಾಗಿದೆ. ಇನ್ನು ಯಾರೆಲ್ಲ ಮದುವೆಯಾಗಲು ಬಯಸುತ್ತಾರೋ ಅವರು 2026ರ ಏಪ್ರಿಲ್ 25ರೊಳಗೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾಮೂಹಿಕ ಮದುವೆಯ ಉದ್ದೇಶವೇನು..?
ಈಗಾಗಲೇ, 2025ರ 53ನೇ ವರ್ಷದ ಸಾಮೂಹಿಕ ವಿವಾಹವು ಮೇ 3, 2025ರಂದು ಈಗಾಗಲೇ ಯಶಸ್ವಿಯಾಗಿ ನೆರವೇರಿದೆ. ಅದರಲ್ಲಿ 75ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ ಎನ್ನುವ ಮಾಹಿತಿಯಿದೆ. ವೀರೇಂದ್ರ ಹೆಗಡೆಯವರು 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದಾರೆ. ಇದುವರೆಗೆ 13 ಸಾವಿರ ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದಾರೆ. ಮದುವೆಯ ದುಂದುವೆಚ್ಚ , ವರದಕ್ಷಿಣೆ ತಡೆಯಲು ಸಾಮೂಹಿಕ ಮದುವೆಯನ್ನು ಆಯೋಜಿಸಿಲಾಗುತ್ತಿದೆ. ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ, 08256 266644, ವಾಟ್ಸಾಪ್ 96634 64648 ಸಂಪರ್ಕಿಸಬಹುದು.
ಅಗತ್ಯವಿರುವ ದಾಖಲೆಗಳು ಏನು..?
ವಧು ಮತ್ತು ವರನ ಆಧಾರ್ ಕಾರ್ಡ್ ಪ್ರತಿ. ಜನ್ಮ ದಿನಾಂಕ ದೃಢೀಕರಣಕ್ಕಾಗಿ ಶಾಲಾ ಪ್ರಮಾಣಪತ್ರ (ಎಸ್.ಎಸ್.ಎಲ್.ಸಿ ಅಂಕಪಟ್ಟಿ). ಪೋಷಕರ ಆಧಾರ್ ಕಾರ್ಡ್ ಪ್ರತಿಗಳು.ಮದುವೆಯ ಸಮಯದಲ್ಲಿ ಉಭಯ ಕಡೆಯ ತಾಯಂದಿರ ಉಪಸ್ಥಿತಿ ಕಡ್ಡಾಯವಾಗಿದೆ. ಇವೆಲ್ಲವನ್ನು ನೀವು ಕಡ್ಡಾಯವಾಗಿ ತರಬೇಕು.
Applications invited for mass marriage in Dharmasthala.. No second marriage allowed!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











