Mangaluru: ವಿದೇಶಿ ಕರೆನ್ಸಿ ಸಿಗುತ್ತದೆ ಎಂದು ನಂಬಿ ಮಹಿಳೆಯೊಬ್ಬರು ಬರೋಬ್ಬರಿ 79 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ. ಹಣ ಕಳೆದುಕೊಂಡ ಮಹಿಳೆ ಮನೆಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರಿಂದ ಲಂಡನ್ ಮೂಲದ ಅಪರಿಚಿತ ವ್ಯಕ್ತಿ ಮ್ಯಾಕ್ಸ್ ಅಲೆಂಗ್ಸಾಂಡರ್ ಎಂಬವರೊಂದಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ದೂರುದಾರೆ ಮಹಿಳೆ ಹಾಗೂ ಅಪರಿಚಿತ ವ್ಯಕ್ತಿ ವಾಟ್ಸ್ ಆಪ್ ಮೂಲಕ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಅಪರಿಚಿತ ವ್ಯಕ್ತಿ ಮಹಿಳೆಗೆ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ತಿಳಿಸಿದ್ದಾನೆ. ಅಲ್ಲದೆ 21-08-2025 ರಂದು ಅಪರಿಚಿತ ನೀಗ್ರೋ ವ್ಯಕ್ತಿ ಮಹಿಳೆಯ ಮನೆಗೆ ಆಗಮಿಸಿ ತನ್ನ ಹೆಸರು ಸ್ವೀವ್ ಎಂದು ಪರಿಚಯಿಸಿಕೊಂಡಿದ್ದಾನೆ. ಸಣ್ಣದಾದ ಬಾಕ್ಸ್ ಅನ್ನು ತಂದಿದ್ದು ಆ ಬಾಕ್ಸ್ ನಲ್ಲಿ ವಿದೇಶಿ ಡಾಲರ್ ಗಳು ಇರುವುದನ್ನು ತೋರಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಆ ಬಾಕ್ಸ್ ಅನ್ನು ಮಹಿಳೆಗೆ ನೀಡಿ ತೆರಳಿದ್ದಾನೆ.
ಇದನೆಲ್ಲಾ ಸತ್ಯವೆಂದು ಭಾವಿಸಿ ತನ್ನ ಪರಿಚಯಸ್ಥರಾದ ನೀರುಮಾರ್ಗ ಮೂಲದ ಇನ್ನೊಬ್ಬ ಮಹಿಳೆಯರಿಗೆ ಈ ವಿಚಾರ ತಿಳಿಸಿದ್ದಾರೆ. ಅವರು ಕೂಡ ವಿದೇಶಿ ಪೌಂಡ್ಸ್ ಆಸೆಗೆ ಸುಮಾರು 25 ಲಕ್ಷ ಹಣವನ್ನು ದೂರುದಾರೆ ಮಹಿಳೆಯ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಮಹಿಳೆಯೂ ಕೂಡ 2 ಲಕ್ಷ ಹಣವನ್ನು ನೀಡಿದ್ದಾರೆ.
ಈ ಹಣವನ್ನು ಸೇರಿಸಿ ದೂರುದಾರೆ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ 02-04-2025 ರಿಂದ 14-08-2025 ರವರೆಗೆ ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಸದ್ರಿ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಮಹಿಳೆಯನ್ನು ಒತ್ತಾಯಿಸಿದಾಗ ಅನುಮಾನ ಬಂದು ತನ್ನ ಮಕ್ಕಳಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದಿದೆ.
ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 79,19,850/- ರೂ ಗಳನ್ನು ವರ್ಗಾಯಿಸಿಕೊಂಡು ವಂಚನೆಗೆ ಒಳಗಾಗಿದ್ದಾರೆ. ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕೆಂದು ದೂರು ನೀಡಿದ್ದಾರೆ.
ಇದನ್ನೂ ಓದಿ: Bajpe: ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟ – ಪ್ರಯಾಣಿಕನ ಬಂಧನ
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











