ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸಡೆ ನನ್‌ ಮಗನೇ.. ಎಂದು ಧ್ರುವಂತ್‌ ಗೆ ಹಿಗ್ಗಾಮುಗ್ಗ ಬೈದ ರಜತ್..!‌

ಬಿಗ್‌ ಬಾಸ್‌: Tulu Times | ಬಿಗ್​ ಬಾಸ್ ಮನೆ ಈಗ ರಣರಂಗವಾಗಿದೆ. ಈ ಹಿಂದೆ ಕಾಕ್ರೋಚ್ ಸುಧಿ ಸಡೆ ಎಂಬ ಪದ ಬಳಕೆ ಮಾಡಿರುವ ಬಗ್ಗೆ ಕಿಚ್ಚ ಸುದೀಪ್‌ ಸರಿಯಾಗಿಯೇ ಕ್ಲಾಸ್‌ ತಗೊಂಡಿದ್ದರು. ಇದೀಗ ರಜತ್‌ ಅದೇ ಪದವನ್ನು ಧ್ರುವಂತ ಮೇಲೆ ಪ್ರಯೋಗ ಮಾಡಿದ್ದಾರೆ. ಧ್ರುವಂತ್, ಅಶ್ವಿನಿ ಗೌಡ ಅವರಿಗೆ ರಜತ್ ಕೀಳುಮಟ್ಟದ ಭಾಷೆ ಬಳಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ರಜತ್‌ ಬಗ್ಗೆ ಮನೆಯಲ್ಲಿ ಅಸಮಾಧಾನ..!

ಕಳೆದ ಎಪಿಸೋಡ್‌ ನಲ್ಲಿ ರಜತ್,  ಧ್ರುವಂತ್ ಮಧ್ಯೆ ಕಿರಿಕ್ ಆಗಿದೆ.  ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಮಾತಿನ ಭರದಲ್ಲಿ ರಜತ್ ಬಾಯಿ ಬಂದಂತೆ ಮಾತನಾಡಿದ್ದಾರೆ. ಸಡೆ, ವೇಸ್ಟ್ ನನ್ ಮಗ, ಗುಗ್ಗು ಎಂಬ ಪದಗಳನ್ನು ಬಳಸಿದ್ದಾರೆ. ಈ ಮಾತುಗಳು ಮನೆಯವರಿಗೆ ಕಿರಿಕಿರಿ ಆಗಿದೆ. ಅದನ್ನು ಅಶ್ವಿನಿ ಗೌಡ, ಧ್ರುವಂತ್ ಖಡಕ್ ಆಗಿ ವಿರೋಧ ವ್ಯಕ್ತಪಡಿಸಿದ್ದಾರೆ. ರಜತ್ ಕಳೆದ ಸೀಸನ್​​ನಲ್ಲಿ ಕೂಡ ಇದೇ ರೀತಿ ನಡೆದುಕೊಂಡಿದ್ದರು. ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ರಜತ್ ಮನೆಯ ವಾತಾವರಣವನ್ನು ಬದಲಾಯಿಸಿದ್ದಾರೆ.

ಜಗಳದ ವೇಳೆ ಕೆಟ್ಟ ಪದಗಳನ್ನು ಬಳಸಿ, ಹಲವರಿಗೆ  ನೋವು ತಂದಿದ್ದಾರೆ.  ರಜತ್  ಧ್ರುವಂತ್, ಅಶ್ವಿನಿ ಗೌಡ ಜೊತೆ  ಕಿರಿಕ್ ಮಾಡಿಕೊಂಡಿದ್ದಾರೆ. ಇನ್ನು ಅಶ್ವಿನಿ ಗೌಡ ಅವರಿಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು, ರಜತ್ ಆಡಿದ ಮಾತುಗಳು ತುಂಬಾ ಕೀಳುಮಟ್ಟದಲ್ಲಿ ಇವೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ನಿಮ್ಮಷ್ಟು ಕೆಟ್ಟ ಪದಗಳನ್ನು ಈ ಮನೆಯಲ್ಲಿ ಯಾರೂ ಬಳಸಿಲ್ಲ ಎಂದು ಅಶ್ವಿನಿ ಗೌಡ  ‌  ರಜತ್‌ ಗೆ ಟೀಕೆ ಮಾಡಿದ್ದಾರೆ. ಅಶ್ವಿನಿ ಗೌಡ ರಜತ್ ಗೆ ನೀನು ಕಚಡ ಎಂದು  ಬೈಯ್ದಿದ್ದಾರೆ.  ನೀನು ಕಣೇ ಕಚಡ ಎಂದು ರಜತ್ ತಿರುಗೇಟು ಕೊಟ್ಟಿದ್ದಾರೆ. ಈ ರೀತಿಯ ಕೆಟ್ಟ ಪದಗಳನ್ನು ಬಳಸಿದ್ದಕ್ಕಾಗಿ ಸುದೀಪ್  ಕ್ಲಾಸ್ ತೆಗೆದುಕೊಳ್ಳುವುದು ಅಂತೂ ಪಕ್ಕಾ ಆಗಿದೆ.

ರಜತ್‌ ವಿರುದ್ಧ ಧ್ರುವಂತ್‌ ಆರೋಪ !

ಧ್ರುವಂತ್‌ ರಜತ್‌ ವಿರುದ್ಧ  ಇಡೀ ಸೀಸನ್ ಹಾಳು ಮಾಡುತ್ತಿದ್ದಾರೆ. ಅಸಭ್ಯವಾಗಿ ಮಾತಾಡುತ್ತಾರೆ. ಶೋ ಘನತೆಯನ್ನು ತಗ್ಗಿಸುತ್ತಿದ್ದಾರೆ. ರೌಡಿಸಂ ಮಾಡುತ್ತಿದ್ದಾರೆ. ಎಲ್ಲರನ್ನೂ ಹೆದರಿಸುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಗಳ ಮಾಡುತ್ತಿದ್ದಾರೆ.

rajath kishan uses foul language in bigg boss kannada season 12- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page