ಜೀವನಶೈಲಿ: Tulu Times | ಮನುಷ್ಯರಾದ ನಮಗೆ ಜೀವನದಲ್ಲಿ ಒಂದಲ್ಲಾ ಒಂದು ಚಿಂತೆ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ಜೀವನದ ಉದ್ದಕ್ಕೂ ನಾವು ಚಿಂತಿಸುತ್ತಾ ದಿನ ಕಳೆಯುತ್ತೇವೆ. ಹಾಗಾದ್ರೆ ನಿಮ್ಮ ಚಿಂತೆಗಳಿಗೆ ಪರಿಹಾರ ಇಲ್ವಾ ಅಥವಾ ನೀವು ಚಿಂತೆ ಮಾಡುತ್ತಾ ಕೂತಲ್ಲೇ ಕೂತರೆ ಏನಾಗುತ್ತೆ? ನೋಡೋಣ ಈ ಸ್ಟೋರಿಯಲ್ಲಿ..
ಅನಾವಶ್ಯಕವಾಗಿ ಯಾಕೆ ಚಿಂತೆ ಮಾಡ್ತೀರೀ..?
ಪ್ರತಿಯೊಬ್ಬ ಮನುಷ್ಯನು ಚಿತೆಗೆ ಏರುವ ತನಕ ಚಿಂತೆಯಲ್ಲಿ ಮುಳುಗುತ್ತಾನೆ. ಇದು ಜೀವನದ ಸತ್ಯ. ಒಂದಲ್ಲ ಒಂದು ಕಾರಣಗಳಿಂದಾಗಿ ನಾವು ಮನಸ್ಸಿಗೆ ನೊಂದಿಕೊಳ್ಳುತ್ತೇವೆ. ಇದರಿಂದ ನಮ್ಮ ಮಾನಸಿಕ ಸ್ಥಿರತೆಯನ್ನು ನಾವು ಕಳೆದುಕೊಳ್ಳುತ್ತೇವೆ. ಪ್ರತಿದಿನದ ಜಂಜಾಟದಲ್ಲಿ ಸಾಕಷ್ಟು ಜನರನ್ನು ನಾವು ಭೇಟಿ ಮಾಡಿ ಮಾತನಾಡುತ್ತೇವೆ. ಆದರೂ ಕೂಡ ಮನೆಗೆ ಬಂದ ನಂತರ ನಮ್ಮ ಮನಸ್ಸಲ್ಲಿ ಅನಾವಶ್ಯಕವಾಗಿ ಚಿಂತೆ ಕಾಡುತ್ತಾ ಇರುತ್ತದೆ. ಒಂದಲ್ಲಾ ಒಂದು ಕಾರಣದಿಂದ ನಾವು ಚಿಂತಿತರಾಗುತ್ತೇವೆ ಈ ಚಿಂತೆಗೆ ಫುಲ್ ಸ್ಟಾಪ್ ಅನ್ನೋದೇ ಇಲ್ಲ.
ಸಾಧಿಸಿದವನಿಗೂ ಚಿಂತೆ ಕಾಡುತ್ತೆ.. ಅದಕ್ಕೆ ಅಷ್ಟೊಂದು ಪವರ್ ಇದೆ!
ದೊಡ್ಡ ಉದ್ಯಮಿಯಾಗಿರಲಿ ಅಥವಾ ಜೀವನದಲ್ಲಿ ಸಣ್ಣ ಸಾಧನೆಯನ್ನು ಮಾಡಿರುವವರಾಗಿರಲಿ ಚಿಂತೆ ಇಲ್ಲದೆ ಇರುವುದಿಲ್ಲ. ನಮ್ಮ ಮನಸ್ಸನ್ನು ನಾವು ಶಾಂತಗೊಳಿಸಬೇಕಾದರೆ ಈ ಚಿಂತೆಯಿಂದ ಹೊರ ಬರಲೇಬೇಕು. ಹಾಗಾದ್ರೆ ನಮ್ಮ ಚಿಂತೆ ನಮ್ಮನ್ನು ಯಾವ ರೀತಿಯಾಗಿ ಕಾಡುತ್ತೆ. ನಮ್ಮ ಜೀವನಕ್ಕೆ ಯಾವುದೆಲ್ಲ ರೀತಿಯಾದಂತಹ ಎಡವಟ್ಟುಗಳನ್ನು ತಂದುಕೊಡುತ್ತದೆ? ನಾವು ಗಮನಿಸಲೇಬೇಕು.. ಚಿಂತೆ ಇದ್ದವನು ಎಂದಿಗೂ ಕೂಡ ಜೀವನದಲ್ಲಿ ನೆಮ್ಮದಿಯನ್ನು ಅಂತು ಹುಡುಕಲಾರ.
ನಿಮ್ಮ ಚಿಂತೆಯಿಂದ ಇನ್ನೊಬ್ಬರಿಗೆ ನೋವು ಕೊಡದಿರಿ!
ಮನುಷ್ಯ ಚಿಂತೆ ಮಾಡಲೇಬಾರದು ಅಂತ ಖಂಡಿತ ಯಾರು ಕೂಡ ಹೇಳಲ್ಲ. ಆದರೆ ಚಿಕ್ಕ ಪುಟ್ಟ ವಿಚಾರಗಳಿಗೆ ನಾವು ಚಿಂತಿತರಾಗಿ ಕೂತರೆ ನಮ್ಮ ದಿನವೇ ಹಾಳಾಗುತ್ತದೆ. ನಮ್ಮ ಸುತ್ತಮುತ್ತ ಇರುವಂತಹ ಜನರ ಮನಸ್ಸಿಗೂ ನೋವಾಗುತ್ತದೆ. ಹೀಗಾಗಿ, ಚಿಂತೆ ಇದ್ದರೆ ಅದನ್ನು ನೀವು ನೀವಾಗಿಯೇ ಪರಿಹರಿಸಿಕೊಳ್ಳಿ. ನಿಮ್ಮ ಚಿಂತೆಯನ್ನು ಇನ್ನೊಬ್ಬರಿಗೆ ನೋವು ತರುವ ರೀತಿ ನೀವು ವರ್ತನೆ ಮಾಡುತ್ತೀರಿ. ಅದೇನಿದ್ದರೂ ಕೂಡ ಎಲ್ಲವನ್ನು ನೀವೇ ಪರಿಹಾರ ಮಾಡಿಕೊಳ್ಳಿ. ಹೀಗಾಗಿ ನೀವು ಚಿಂತೆಯಿಂದ ಇದ್ದರೆ ನಿಮ್ಮ ಜೀವನವೂ ಅದೇ ರೀತಿಯಾಗಿ ಹಾಳಾಗುತ್ತದೆ.
ಚಿಂತೆ ಮಾಡ್ತೀರಿ ಅಂದ್ರೆ ಆರೋಗ್ಯದ ಕಥೆ ಮುಗೀತು ಅನ್ಕೊಳ್ಳಿ!
ನಿಮಗೆ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಇದರಿಂದ ನೀವು ಹೊರಬರಲು ನಿಜಕ್ಕೂ ಕಷ್ಟವಾಗುತ್ತದೆ. ಇನ್ನು ಸಿಟಿಗಳಲ್ಲಿ ವಾಸಿಸುತ್ತಿರುವ ಜನ ತಮ್ಮ ಚಿಂತೆಯನ್ನು ದೂರ ಮಾಡಲು ವ್ಯಾಯಾಮ, ಧ್ಯಾನ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದರಿಂದ ಮನಸ್ಸು ಒಳ್ಳೆಯ ವಿಚಾರದ ಕಡೆಗೆ ವಾಲುತ್ತದೆ. ಮನಸ್ಸಿನಲ್ಲಿರುವ ನೋವುಗಳು ಮಾಯವಾಗುತ್ತವೆ. ಹೀಗಾಗಿ ನೀವು ಚಿಂತೆ ಮಾಡುತ್ತೀರಿ ಅಂದರೆ ಖಂಡಿತವಾಗಲೂ ಈ ಚಿಂತೆಯಿಂದ ಆದಷ್ಟು ದೂರವಿರುವುದು ಒಳ್ಳೆಯದು. ಇನ್ನು ಅನಾವಶ್ಯಕ ಚಿಂತೆಯಿಂದ ನಿಮಗೆ ಬೇಗ ವಯಸ್ಸಾಗುತ್ತದೆ.
Are you worrying too much? If so, you’ll age too quickly!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











