ಕಂಬಳದಲ್ಲಿ ಬರೋಬ್ಬರಿ 150ಕ್ಕೂ ಅಧಿಕ ಪದಕ ಪಡೆದು ಮಿಂಚಿನ ಓಟದ ಖ್ಯಾತಿ ಪಡೆದ “ಬೋಳಾರ ಕುಟ್ಟಿ’ ಕೋಣ ಶುಕ್ರವಾರ ರಾತ್ರಿ ನಿಧನ ಹೊಂದಿದೆ. ಕಂಬಳ ಕೋಣನ ನಿಧನಕ್ಕೆ ಕಂಬಳ ಪ್ರಿಯರು ಬೇಸರಗೊಂಡಿದ್ದಾರೆ.
ಕಂಬಳ ಕರೆಯ ಅಡ್ಡ ಹಲಗೆ ಹಾಗೂ ಕನೆಹಲಗೆ ವಿಭಾಗದಲ್ಲಿ ಕುಟ್ಟಿ ಅಭೂತಪೂರ್ವ ಸಾಧನೆ ಮೂಲಕ ಗಮನ ಸೆಳೆದಿತ್ತು. ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ಅವರಲ್ಲಿದ್ದ ಕುಟ್ಟಿ 92 ಪದಕಗಳನ್ನು ಬಾಚುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ 2019ರಲ್ಲಿ ಬೋಳಾರ ತ್ರಿಶಾಲ್ ಕೆ.ಪೂಜಾರಿ ಅವರು ಕುಟ್ಟಿಯನ್ನು ಖರೀದಿಸಿದ್ದರು. ಮಿಂಚಿನ ಓಟದೊಂದಿಗೆ ಅಡ್ಡಹಲಗೆ ವಿಭಾಗದಲ್ಲಿ ಕುಟ್ಟಿ ಸತತ ಚಾಂಪಿಯನ್ ಆಗಿತ್ತು.
ಕನೆಹಲಗೆ ವಿಭಾಗದಲ್ಲಿ ಕುಟ್ಟಿಯು ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಹಲವು ಬಾರಿ ಪದಕ ಪಡೆದಿತ್ತು. ಅಡ್ಡ ಹಲಗೆ, ಕನೆ ಹಲಗೆ ವಿಭಾಗದಲ್ಲಿ ತ್ರಿಶಾಲ್ ಕೆ. ಪೂಜಾರಿ ಅವರಿಗೆ 50ಕ್ಕೂ ಮಿಕ್ಕಿ ಪದಕಗಳನ್ನು ದೊರಕಿಸಿಕೊಟ್ಟಿದ್ದ ಕುಟ್ಟಿ ಒಟ್ಟು 150ಕ್ಕೂ ಮೀರಿ ಪದಕಗಳನ್ನು ತನ್ನದಾಗಿಸಿದೆ. ಅಡ್ಡಹಲಗೆಯ ವಿಭಾಗದಲ್ಲಿ ಕುಟ್ಟಿ ಚಾಂಪಿಯನ್ ಗೌರವವನ್ನೂ ಪಡೆದಿತ್ತು.
Kambala Champion Bolarada Kutti Kona No More – Tulu Times
ಇದನ್ನೂ ಓದಿ: ಗಂಟೆಗೆ ಸಂಬಳ ಕೊಟ್ಟರೆ ಇಲ್ಲಿ ಗಂಡ ಬಾಡಿಗೆಗೆ ಸಿಗ್ತಾನೆ..!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/@tulutimess











