ಮಂಗಳೂರು: Tulu Times | ಕರಾವಳಿಯ ಜಾನಪದ ಕ್ರೀಡೆ ಕಂಬಳ. ಈ ಬಾರಿಯ ಕಂಬಳದ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿ ವರದಿ ರೆಡಿ ಮಾಡುತ್ತಿದ್ದು, ವಿವಿಧ ಇಲಾಖೆಗಳಿಂದ ನಿಗಾ ವಹಿಸಲಾಗಿದೆ. ಕಂಬಳ ಓಟಕ್ಕೆ ಜಿಲ್ಲಾಡಳಿತದ ಹದ್ದಿನ ಕಣ್ಣಿಟ್ಟಿದ್ದು, ಕಂಬಳ ಆಯೋಜಕರು ಕಟ್ಟೆಚ್ಚರ ವಹಿಸುತ್ತಿದ್ದಾರೆ.
ಇದನ್ನೂ ಓದಿ: ಭಾರತ ಹಾಗೂ ರಷ್ಯಾದ ಜಂಟಿ ಒಪ್ಪಂದಗಳು : ದ್ವಿಪಕ್ಷೀಯ ಬಾಂಧವ್ಯ ವೃದ್ಧಿ
ಪ್ರತಿ ಶನಿವಾರ/ರವಿವಾರ ನಡೆಯುತ್ತಿರುವ ಕಂಬಳದಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. ಈ ಹಿಂದೆ ಪೆಟಾ ಸಂಸ್ಥೆ ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪದಲ್ಲಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೀಗಾಗಿ ನ್ಯಾಯಾಲಯ ಸೂಚಿಸಿದ ಆಧಾರದಲ್ಲಿ, ಕಂಬಳಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಋತುವಿನಲ್ಲಿ 3 ಕಂಬಳಗಳು ನಡೆದಿದೆ.
ಇದನ್ನೂ ಓದಿ: ರಿಷಭ್ ಶೆಟ್ಟಿ ಅವರನ್ನು ಅಪ್ಪಿ ಆಲಂಗಿಸಿ ಮಡಿಲಲ್ಲಿ ಮಲಗಿದ ಪಂಜುರ್ಲಿ ದೈವ
ಕಂಬಳದಲ್ಲಿ ಮೈಕ್ ಬಳಸುವ ಹಾಗಿಲ್ಲ!
ಈ ಬಗ್ಗೆ ಕಂಬಳ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ್ ಕುಮಾರ್‌ಕಂಗಿನಮನೆ ಮಾಧ್ಯಮಗಳೊಂದಿಗೆ ಮಾತನಾಡಿ, ಕಂಬಳಕ್ಕೆ ಯಾವುದೇ ಕಾರಣಕ್ಕೂ ಮುಂದೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇವೆ. ನಿಗದಿತ ಸಮಯಕ್ಕೆ ಕಂಬಳ ಆಯೋಜಿಸಿ ಹಿಂಸೆ ಇಲ್ಲದೆ ಕೋಣಗಳ ಓಟದ ಗತ್ತು ನೋಡುವ ಭಾಗ್ಯ ಎಲ್ಲರಿಗೂ ದೊರೆಯುವಂತಾಗಬೇಕು ಎಂದರು. 3 ವರ್ಷದ ಒಳಗಿನ ಕೋಣಗಳ ಓಟ ನಡೆಸದಂತೆ ಹಾಗೂ ಯಾವುದೇ ಕೋಣಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಲು ಪಶುಪಾಲನ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದು, ಪ್ರಸಕ್ತ ನಡೆಯುತ್ತಿರುವ ಎಲ್ಲ ಕಂಬಳಗಳಿಗೆ ಪೊಲೀಸ್, ಪಶುಪಾಲನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ರಾತ್ರಿ ಹಗಲು ಕಂಬಳ ಆಯೋಜನೆ ಹಿನ್ನೆಲೆಯಲ್ಲಿ ಕಂಬಳ ಆಯೋಜನೆ ಆಗುವ ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತ ರಾತ್ರಿ 10.30ರ ಬಳಿಕ ಕೇವಲ ಕಂಬಳ ಕರೆಯಲ್ಲಿ ಸಣ್ಣ ಧ್ವನಿಯೊಂದಿಗೆ ಮೈಕ್ ಬಳಕೆ ಸದ್ಯ ನಡೆಯುತ್ತಿದೆ ಎಂದು ಕಂಬಳ ಸಂಘಟಕರು ತಿಳಿಸಿದ್ದಾರೆ.
District administration issues strict warning for Kambala race.. No microphones allowed- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











