ಸಿನಿಮಾ: Tulu Times | ಕಿಚ್ಚ ಸುದೀಪ್ ಮುದ್ದಿನ ಮಗಳು ಸಾನ್ವಿ ಸುದೀಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಯಾಕೆಂದರೆ ತನ್ನ ಮುಖಕ್ಕೆ ಅರಶಿಣ ಹಚ್ಚಿಕೊಂಡಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇದನ್ನೂ ಓದಿ: ವೇಣುಗೋಪಾಲ್ ಎದುರೇ ಡಿ.ಕೆ..ಡಿ.ಕೆ ಎಂದು ಘೋಷಣೆ ಕೂಗಿದ ಬೆಂಬಲಿಗರು!
ಮಗಳ ಕೆನ್ನೆಗೆ ಅರಶಿಣ ಹಚ್ಚಿದ ಸುದೀಪ್..!
ಅಷ್ಟಕ್ಕೂ ಸುದೀಪ್ ಮಗಳು ಮದ್ವೆಯಾಗ್ತಿದ್ದಾರಾ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಪ್ಪ ಸುದೀಪ್, ಅಮ್ಮ ಪ್ರಿಯಾರಿಂದ ಅರಿಶಿಣ ಹಚ್ಚಿಸಿಕೊಳ್ಳುವ ಫೋಟೋಗಳನ್ನ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು,ಥಟ್ ಅಂತ ನೋಡಿದ್ರೆ ಸಾನ್ವಿಯದ್ದೇ ಮದುವೆಯಾ ಅಂತ ಮೇಲ್ನೋಟಕ್ಕೆ ಕಾಣುತ್ತಿದೆ. ಅಷ್ಟಕ್ಕೂ ಈ ಫೋಟೋಗಳು, ಈ ಶಾಸ್ತ್ರ ಸುದೀಪ್ ಅಕ್ಕನ ಮಗನ ಮದುವೆಯಲ್ಲಿ ತೆಗೆದ ಫೋಟೋಗಳಾಗಿವೆ. ಅರಶಿಣ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪುತ್ತೂರು: ಗೋಸಾಗಾಟದ ವೇಳೆ ಕೆಟ್ಟು ಹೋದ ಕಾರು – ಇಬ್ಬರ ಬಂಧನ
ಕೆಲವು ಅರಶಿಣ ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೂ ಅರಿಶಿಣ ಹಚ್ಚುವ ಪದ್ಧತಿ ಬಹುಶಃ ಇರುತ್ತೆ. ಕಿಚ್ಚ ಸುದೀಪ್ ಅಕ್ಕನ ಮಗನ ವಿವಾಹದ ಹಿನ್ನೆಲೆ ಕುಟುಂಬದಲ್ಲಿ ಈ ಶಾಸ್ತ್ರ ನಡೆದಿದೆ. ಸುದೀಪ್ ಅಕ್ಕನ ಮಗನ ಮದುವೆ ಶಾಸ್ತ್ರದಲ್ಲಿ ಸುದೀಪ್ ಪುತ್ರಿ ಸಾನ್ವಿಗೂ ಅರಿಶಿಣ ಹಚ್ಚಲಾಗಿದ್ದು, ಸಾಂಪ್ರದಾಯಿಕ ಲುಕ್ನಲ್ಲಿ ಸುದೀಪ್ ಪುತ್ರಿ ಸಾನ್ವಿ ಮುದ್ದಾಗಿ ಮಿಂಚಿದ್ದಾರೆ.
ಇದನ್ನೂ ಓದಿ: ಪ್ರತೀ ದಿನ ಟೆಂನ್ಶನ್ ನಿಂದ ದಿನ ದೂಡುತ್ತಿದ್ದೀರಾ..? ಹಾಗಾದ್ರೆ ಡೋಂಟ್ ವರಿ!
ಲವ್-ರಿಲೇಷನ್ಶಿಪ್ ಬಗ್ಗೆ ಸಾನ್ವಿ ಏನಂತಾರೆ..?
ಲವ್ ಮತ್ತು ರಿಲೇಷನ್ಶಿಪ್ ಬಗ್ಗೆ ನನಗೆ ಯಾವುದೇ ನಂಬಿಕೆಗಳೂ ಇಲ್ಲ. ನನಗೆ ಸೆಲ್ಫ್ ರೆಸ್ಪೆಕ್ಟ್ ಮುಖ್ಯ. ಸೀರಿಯಸ್ ರಿಲೇಷನ್ಶಿಪ್ ಬಗ್ಗೆ ನಂಬಿಕೆ ಇದೆ. ನಾನು ಒಬ್ಬರನ್ನೆ ನಂಬೋಕೆ ಇಷ್ಟಪಡ್ತೀನಿ. ನಾನು ಒಬ್ಬರನ್ನ ಪ್ರೀತಿಸಿದೆ ಅಂದ್ರೆ ಮುಗಿತು. ಇಡೀ ಜೀವನ ಅವರೊಟ್ಟಿಗೇನೆ ಇರೋಕೆ ಇಷ್ಟಪಡ್ತೀನಿ. ಸೀರಿಯಸ್ ರಿಲೇಷನ್ಶಿಪ್ ಬಗ್ಗೆ ನನಗೆ ನಂಬಿಕೆ ಜಾಸ್ತಿ ಅನ್ನೋ ಅರ್ಥದಲ್ಲಿಯೇ ಸಾನ್ವಿ ಈ ಹಿಂದೆ ಹೇಳಿಕೊಂಡಿದ್ದರು.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ನಿವೇಶನಗಳು ಸಕ್ರಮವಾಗಲಿದೆ : ಇ – ಸ್ವತ್ತು
sudeeps-daughter-sanvi-photo-in-haldi-ceremony-goes-viral- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











