ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಜಾನ್ವಿ..! ಹೊರಬರಲು ಅಸಲಿ ಕಾರಣ ಏನು..?

ಬಿಗ್‌ ಬಾಸ್‌: Tulu Times | ಬಿಗ್‌ಬಾಸ್‌ ಮನೆಯಿಂದ ಜಾನ್ವಿಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ. ಕೊನೆಯಲ್ಲಿ ಧ್ರುವಂತ್‌, ಮಾಳು, ಜಾನ್ವಿ ಎಲಿಮಿನೇಷನ್‌ ಲಿಸ್ಟ್‌ನಲ್ಲಿ ಇದ್ದರು. ಪ್ರಾರಂಭದಲ್ಲಿ ಧ್ರುವಂತ್‌ ನಂತರ ಮಾಳು ಸೇವ್‌ ಆಗಿದ್ದರಿಂದ ಜಾನ್ವಿ ಮನೆಯಿಂದ ಔಟ್‌ ಆಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ  ಅಶ್ವಿನಿ ಗೌಡ ಜೊತೆ  ಸ್ನೇಹ ಹೊಂದಿದ್ದ ಜಾನ್ವಿ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಗಗನಕ್ಕೇರಿದ ನುಗ್ಗೇಕಾಯಿ ಬೆಲೆ..ಕೆ.ಜಿ. 500 ರಿಂದ 600 ರೂಪಾಯಿಗೆ ಏರಿಕೆ !

ಜಾನ್ವಿ ಆಚೆ ಬರಲು ಕಾರಣ ಏನಾಯ್ತು..?

ಈ ಹಿಂದೆ ಅಶ್ವಿನಿ ಗೌಡ ಜೊತೆ ಸೇರಿ ಜಾನ್ವಿ ಗೆಜ್ಜೆ ಶಬ್ಧ ಮಾಡಿದ್ದರು. ನಂತರ ಗೆಜ್ಜೆ ಧ್ವನಿ ಮಾಡಿದ್ದು ರಕ್ಷಿತಾ ಎಂದು ಮನೆಯವರನ್ನು ನಂಬಿಸಿದ್ದರು. ಈ ವಿಚಾರ ದೊಡ್ಡ ಸದ್ದು ಮಾಡಿತ್ತು. ಜೊತೆಗೆ ಸ್ಪಂದನಾ ವಾಹಿನಿ ಕಡೆಯಿಂದ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಸುದೀಪ್‌ ಕ್ಲಾಸ್‌ ತಗೆದುಕೊಂಡಿದ್ದರು.  ಡ್ರೆಸ್‌ ಚೇಂಜ್‌ ಮಾಡುವ ಕೊಠಡಿಯಲ್ಲಿ ಪಿಸು ಮಾತು ಆಡಿದ್ದಕ್ಕೆ ಕಿಚ್ಚ ಕ್ಲಾಸ್‌ ತಗೊಂಡಿದ್ರು.  ಎಚ್ಚರಿಕೆ ನೀಡಿದ ಬಳಿಕವೂ ಮತ್ತೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾತನಾಡಿದ್ದಕ್ಕೆ ಜಾನ್ವಿ ಮತ್ತು ಅಶ್ವಿನಿ ಗೌಡ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್‌ ಆಗಿದ್ದರೂ ಸೇವ್‌ ಆಗಿದ್ದರು.  ಇನ್ನು ಜಾನ್ವಿ ಈ ಬಾರಿ ಬಿಗ್‌ ಬಾಸ್‌ ಗೆಲ್ಲಬೇಕು ಎಂದು ಸ್ಪರ್ಧಿಗಳ ಜೊತೆ ಹೇಳುತ್ತಿದ್ದರು. ಆದರೆ ಈ ಬಾರಿ ವೀಕ್ಷಕರಿಂದ ಹೆಚ್ಚಿನ ವೋಟ್‌ ಪಡೆಯದ ಕಾರಣ ಮನೆಯಿಂದ ಔಟ್‌ ಆಗಿದ್ದಾರೆ.

ಇದನ್ನೂ ಓದಿ: ಇಂದು ನಿರ್ದೇಶಕ ರಾಜ್ ನಿಡಿಮೋರು ಜೊತೆ ವಿವಾಹವಾದ ನಟಿ ಸಮಂತಾ..!

ಬಿಗ್‌ಬಾಸ್ ನ ಮಾಜಿ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ  ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ.  ಅಶ್ವಿನಿ ಗೌಡ ಮತ್ತು ಜಾನ್ವಿ ಸ್ನೇಹದ ಕುರಿತು ವಿಶ್ಲೇಷಣೆ ಕೂಡ ಮಾಡಿದ್ದಾರೆ. ಇದೇ ವೇಳೆ ಇಬ್ಬರಲ್ಲಿ ಮೊದಲು ಹೊರಗೆ ಬರೋದು ಯಾರು ಎಂಬ ವಿಷಯವನ್ನು ಪ್ರಶಾಂತ್ ಸಂಬರಗಿ ಹಂಚಿಕೊಂಡಿದ್ದರು. ಈ ಸೀಸನ್‌ನಲ್ಲಿರುವ ಅಶ್ವಿನಿ ಗೌಡ ಮತ್ತು ಜಾನ್ವಿ ಜೋಡಿಯನ್ನು ಬಿಗ್‌ಬಾಸ್ ಬ್ರೇಕ್ ಮಾಡ್ತಾರೆ ಎಂದು ಹೇಳಿದ್ದರು.

Janhvi leaves the Bigg Boss house..! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page