ಚೆನ್ನೈ : Tulu Times | ಕೆಸಗ್ರ್ಯಾಂಡ್ 2003ರಲ್ಲಿ ಸ್ಥಾಪನೆಯಾದ ರಿಯಲ್ ಎಸ್ಟೇಟ್ ಕಂಪನಿ. ಚೆನ್ನೈನಲ್ಲಿ ಮುಖ್ಯ ಕಛೇರಿ ಹೊಂದಿರುವ ಇದು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅಪಾರ್ಟ್ಮೆಂಟ್, ಪ್ಲಾಟ್, ವಿಲ್ಲಾಗಳನ್ನು ನಿರ್ಮಿಸಿದೆ. ಇದೀಗ ಈ ಕಂಪನಿಯು ಉದ್ಯೋಗಿಗಳಿಗೆ ಫಾರೀನ್ ಟ್ರಿಪ್ ಕಳುಹಿಸುತ್ತಿದೆ. ಅದೂ 30 ಅಥವಾ 40 ಜನರಾ ಅಂತ ಕೇಳಿದ್ರೆ ಅಲ್ಲ, ಬರೋಬ್ಬರಿ 1,000 ಉದ್ಯೋಗಿಗಳನ್ನು ಒಂದು ವಾರ ಕಾಲ ಲಂಡನ್ಗೆ ಪ್ರವಾಸಕ್ಕೆ ಕಳುಹಿಸುತ್ತಿದೆ.
ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ, ಬೋನಸ್ ಅಲ್ಲದೆ ಇನ್ನೂ ಕೆಲ ಪ್ರೋತ್ಸಾಹಕಗಳನ್ನು ನೀಡುವುದುಂಟು. ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲವೊಮ್ಮೆ ಖುಷಿಯಿಂದಿರಲು ಹಲವು ಕಾರ್ಯಕ್ರಮ, ಗಿಫ್ಟ್ ಇತ್ಯಾದಿ ನೀಡುವುದಿದೆ. ಕೆಲವರಿಗೆ ಕಾರುಗಳ ಗಿಫ್ಟ್ ಸಿಗುತ್ತದೆ, ಕೆಲವರಿಗೆ ಬೈಕುಗಳು ಸಿಗುತ್ತವೆ, ಕೆಲವರಿಗೆ ಚಿನ್ನದ ನಾಣ್ಯಗಳು ಉಡುಗೊರೆಯಾಗಿ ಸಿಗಬಹುದು. ಕೆಸಗ್ರ್ಯಾಂಡ್ ಕಂಪನಿಯ ವಾರ್ಷಿಕ ಆದಾಯ ಹಂಚಿಕೆಯ ಭಾಗವಾಗಿ ಪ್ರತೀ ವರ್ಷವೂ ಉದ್ಯೋಗಿಗಳಿಗೆ ಈ ರೀತಿ ಗಿಫ್ಟ್ಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆಯಂತೆ. ಫಾರೀನ್ ಟ್ರಿಪ್ಗಳಿಗೆ ಕಳುಹಿಸುವುದೂ ಇದರ ಒಂದು ಭಾಗ. ಇಲ್ಲಿಯವರೆಗೆ ಈ ಕಂಪನಿಯ 6,000ಕ್ಕಿಂತ ಹೆಚ್ಚಿನ ಉದ್ಯೋಗಿಗಳು ಸಿಂಗಾಪುರ್, ಥಾಯ್ಲೆಂಡ್, ಮಲೇಷ್ಯಾ, ದುಬೈ, ಸ್ಪೇನ್ ಮೊದಲಾದ ದೇಶಗಳಿಗೆ ಪ್ರವಾಸ ಹೋಗಿ ಬಂದಿದ್ದಾರಂತೆ.
ಕಂಪನಿಯ ಏಳ್ಗೆಗಾಗಿ ಶ್ರಮಿಸಿದ ಕೆಲಸಗಾರರನ್ನು ಪ್ರತೀ ವರ್ಷ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಖುಷಿಪಡಿಸುವುದು ಕೆಸಗ್ರ್ಯಾಂಡ್ನ ಗುರಿ ಎಂದು ಈ ಕಂಪನಿಯ ಸಂಸ್ಥಾಪಕರಾದ ಅರುಣ್ ಎಂಎನ್ ಹೇಳುತ್ತಾರೆ. ಈ ವರ್ಷ 1,000 ಉದ್ಯೋಗಿಗಳಿಗೆ ಆಯೋಜಿಸಲಾಗಿರುವ ಲಂಡನ್ ಟ್ರಿಪ್ನ ಸಂಪೂರ್ಣ ಖರ್ಚುವೆಚ್ಚವೆಲ್ಲಾ ಕಂಪನಿಯದ್ದೇ ಆಗಿರುವುದು ವಿಶೇಷವಾಗಿದೆ. ಈ ಟ್ರಿಪ್ ಆಯೋಜಿಸಲು ಒಂದು ತಂಡವೇ ತಿಂಗಳುಗಳ ಕಾಲ ಪ್ಲಾನಿಂಗ್ ಮಾಡಿದೆ. ಪ್ರಮುಖ ಏರ್ಲೈನ್ ಕಂಪನಿಗಳು, ಹೋಟೆಲ್ಗಳೊಂದಿಗೆ ಪಾರ್ಟ್ನರ್ ಮಾಡಿಕೊಂಡಿದೆ. ಕೇವಲ ಚೆನ್ನೈ ಮಾತ್ರವಲ್ಲದೆ, ಭಾರತ ಹಾಗೂ ದುಬೈನಲ್ಲಿ ಕೆಲಸ ಮಾಡುತ್ತಿರುವ ಕಂಪನಿಯ ಉದ್ಯೋಗಿಗಳು ಈ ಟ್ರಿಪ್ಗೆ ಹೋಗುತ್ತಿದ್ದಾರೆ. ಅನೇಕರಿಗೆ ಇದು ಮೊದಲ ಫಾರೀನ್ ಟ್ರಿಪ್ ಆಗಿರುವುದು ವಿಶೇಷ.
London trip for 1,000 employees: One-month plan to organize the trip – ತುಳು ಟೈಮ್ಸ್
ಇದನ್ನೂ ಓದಿ :ಕೃಷ್ಣನೂರಿನಲ್ಲಿ ಮೋದಿ ನೋಡಲು ಜನಸಾಗರ..ಕೃಷ್ಣನಂತೆ ಕಂಡ ಪ್ರಧಾನಿ..!
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zt875dd88R8?si=QHY–Io8ABkjlznX











