ಆರೋಗ್ಯ : Tulu Times | ಯುವತಿಯರು (ಮಹಿಳೆಯರು) ಸಾಮಾನ್ಯವಾಗಿ ಲಿಪ್ ಸ್ಟಿಕ್ ಬಳಕೆ ಮಾಡುತ್ತಾರೆ. ಇದರಲ್ಲಿ ಎಲ್ಲವೂ ಕೆಮಿಕಲ್ ನಲ್ಲಿ ಮಾಡಿದ್ದಾಗಿದ್ದು. ಸೂಕ್ಷ್ಮ ಚರ್ಮಗಳಿಗೆ ಕೆಲವೊಂದು ಬಹುಬೇಗನೆ ಅಲರ್ಜಿಯನ್ನುಂಟು ಮಾಡುತ್ತದೆ. ಈ ಕಾರಣ ಕೆಲವೊಂದು ಕಂಪೆನಿಗಳು ಹೆಚ್ಚಿನ ದರ ನಿಗದಿ ಜೊತೆ ಉತ್ತಮ ಲಿಪ್ ಸ್ಟಿಕ್ ಗಳನ್ನು ತಯಾರಿಸಿ, ಆರೋಗ್ಯಕ್ಕೆ ಹಾನಿಕಾರಕವಾಗದಂತೆ ಪೂರೈಕೆ ಮಾಡುತ್ತವೆ. ಹೀಗಿದ್ದರೂ ಕೆಲವೊಮ್ಮೆ ಈ ಕೆಮಿಕಲ್ ಭರಿತ ಕಲರ್ ಗಳ ಮಿಶ್ರಣ ತುಟಿಗಳ ಆರೋಗ್ಯವನ್ನು, ಚರ್ಮವನ್ನು ಹದಗೆಡಿಸುತ್ತವೆ. ಆದ್ದರಿಂದ, ಮನೆಯಲ್ಲಿಯೇ ಲಿಪ್ ಸ್ಡಿಕ್ ತಯಾರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲರಿಗೂ ತಿಳಿದಿರುವ ವಿಷಯ ಏನೆಂದ್ರೆ ಬೀಟ್ರೋಟ್ ನೋಡಲು ಕೆಂಪಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು ಇದರಿಂದಲೇ ಲಿಪ್ ಸ್ಡಿಕ್ ತಯಾರಿ ಮಾಡುತ್ತಾರೆಂದು. ಆದ್ರೆ ತಯಾರಿಸುವ ಸರಿಯಾದ ವಿಧಾನ ಹೇಗೆಂದು ನೋಡೋಣ ಬನ್ನಿ.
ಮನೆಯಲ್ಲಿಯೇ ಲಿಪ್ ಸ್ಟಿಕ್ ತಯಾರಿಸಲು ಬೇಕಾಗುವ ವಸ್ತುಗಳು ; ಬೀಟ್ರೂಟ್, ತೆಂಗಿನ ಎಣ್ಣೆ ಹಾಗೂ ವ್ಯಾಸಲೀನ್.
ಮನೆಯಲ್ಲಿ ಲಿಪ್ ಸ್ಟಿಕ್ ತಯಾರಿಸಲು, ಮೊದಲು ಬೀಟ್ರೂಟ್ ಅನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಸಿದ ನಂತರ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದಪ್ಪ ಪೇಸ್ಟ್ ತಯಾರಿಸಿ. ಬೀಟ್ರೂಟ್ ಪೇಸ್ಟ್ ಮಾಡಿದ ನಂತರ, ನೀವು ಈಗ ಲಿಪ್ಸ್ಟಿಕ್ ಬೇಸ್ ತಯಾರಿಸಬೇಕು. ಇದನ್ನು ಮಾಡಲು, 1 ಟೀ ಚಮಚ ತೆಂಗಿನ ಎಣ್ಣೆ ಮತ್ತು 1/2 ಟೀ ಚಮಚ ವ್ಯಾಸಲೀನ್ ನ್ನು ಡಬಲ್ ಬಾಯ್ಲರ್ಗೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಎಲ್ಲವೂ ಚೆನ್ನಾಗಿ ಮಿಶ್ರಣವಾದ ನಂತರ, ಬಾಯ್ಲರ್ ಆಫ್ ಮಾಡಿ. ಈ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ.
ನಂತರ ಬೀಟ್ರೂಟ್ ಪೇಸ್ಟನ್ನು ತೆಗೆದುಕೊಂಡು ಅದನ್ನು ಮೊದಲೇ ತಯಾರಿಸಿಟ್ಟ ತೆಂಗಿನೆಣ್ಣೆ ಬೇಸ್ಗೆ ಸೇರಿಸಿ. ಈ ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಸಣ್ಣ ಬಾಕ್ಸ್ನಲ್ಲಿ ಹಾಕಿಟ್ಟು ಒಂದು ದಿನ ರೆಫ್ರಿಜರೇಟರ್ನಲ್ಲಿ ಇಟ್ಟರೆ ನ್ಯಾಚುರಲ್ ಲಿಪ್ಸ್ಟಿಕ್ ಸಿದ್ಧ. ಮನೆಯಲ್ಲಿ ತಯಾರಿಸಿದ ಈ ಲಿಪ್ಸ್ಟಿಕ್ ತುಟಿಗೆ ನೈಸರ್ಗಿಕ ಗುಲಾಬಿ ಬಣ್ಣವನ್ನು ನೀಡುವುದು ಮಾತ್ರವಲ್ಲದೆ, ಹಾನಿಯಿಂದ ತುಟಿಯನ್ನು ರಕ್ಷಿಸುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.
How to maintain lip skin with beetroot – ತುಳು ಟೈಮ್ಸ್
ಇದನ್ನೂ ಓದಿ :ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ..ಬೆಳ್ಳಿ ಬೆಲೆ ಏರಿಕೆ!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs











