ಬ್ರೇಕಿಂಗ್ ನ್ಯೂಸ್
ಕರ್ನಾಟಕ

Kicha Sudeep: ಸುದೀಪ್ ವಿರುದ್ಧ ಮಾತನಾಡಿದ ಮಹಿಳೆಗೆ ಕಿಚ್ಚನ ಅಭಿಮಾನಿಗಳಿಂದ ಧಮ್ಕಿ.!

Kicha Sudeep: ವಿವಾದಗಳ ಮೂಲಕ ಬಿಗ್‌ ಬಾಸ್‌ -12 ಇದೀಗ ಮತ್ತೊಂದು ವಿವಾದಕ್ಕೆ ಸಾಕ್ಷಿಯಾಗಿದೆ.  ಇದೀಗ ಸುದೀಪ್‌ ವಿರುದ್ಧವಾಗಿಯೇ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ ನ್ಯೂಸ್..! ಶೇ.50ರಷ್ಟು‌ ಭಾರೀ ರಿಯಾಯಿತಿ ಯಾಕೆ..?

 ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟದ್ಯಾಕೆ..? 

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ, ಕಾರಣ ಏನೆಂದರೆ, ಕಳೆದ ವೀಕೆಂಡ್ ನಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್  ಕೋಪಗೊಂಡಿದ್ದರು. ಹೀಗಾಗಿ ಈ ವಿಚಾರಕ್ಕೆ ರಕ್ಷಿತಾ ಮೇಲೆ ಮಾಡಿದ ಅನ್ಯಾಯ ಇದು. ಮಹಿಳೆಗೆ ಮಾಡಿದ ಅವಮಾನ ಎಂದು ಸಂಧ್ಯಾ ಪವಿತ್ರ ದೂರು ನೀಡಿದ್ದಾರೆ. ಸುದೀಪ್‌ ಕಳೆದ ವೀಕೆಂಡ್‌ ನಲ್ಲಿ ಪಿತ್ತ ನೆತ್ತಿರಗೇರುವ ಬಗ್ಗೆ ಮಾತನಾಡಿ ರಕ್ಷಿತಾಗೆ ಕೋಪದಲ್ಲಿಯೇ ವಾರ್ನಿಂಗ್‌ ಮಾಡಿದ್ದರು.  ಸಂಧ್ಯಾ ದೂರು ನೀಡುತ್ತಿದ್ದಂತೆ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟ ಪಾಪಿ ಹೆಂಡ್ತಿ..!

ಈ ಸಂಧ್ಯಾ ಪವಿತ್ರ ಯಾರು..?

ಸೋಷಿಯಲ್‌ ಮೀಡಿಯಾದಲ್ಲಿ ಸಂಧ್ಯಾ ಪವಿತ್ರ ಎಂಬ ಮಹಿಳೆ ಯಾವಾಗಲೂ ವೀಡಿಯೋ ಮೂಲಕ ಮಾತನಾಡುತ್ತಾ ಇರುತ್ತಾರೆ. ಇನ್ನು ಬಿಡದಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದ್ದು,ಬಿಗ್ ಬಾಸ್ ಸ್ಪರ್ಧೆ ವೇಳೆ ರಿಷಾ ಬಟ್ಟೆಗಳನ್ನು ವಾಷ್ ರೂಂ ನಲ್ಲಿ ಇಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.  ಈ ಹಿನ್ನೆಲೆ ಮಹಿಳಾ ಆಯೋಗ ವಿಡಿಯೋ ಫುಟೇಜ್ ಪರಿಶೀಲನೆ ಮಾಡಿದ್ದು, ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳುಹಿಸಿಕೊಡಲಾಗಿದೆ. ಬಿಗ್ ಬಾಸ್‌ ಮನೆಯಲ್ಲಿ ಗಿಲ್ಲಿ ಮಹಿಳೆಯರ ಬಳಿ ಮಾತನಾಡುವ ರೀತಿ ಜನಗಳಿಗೆ ಇಷ್ಟ ಆಗ್ತಿಲ್ಲ.

ಇದನ್ನೂ ಓದಿ: ಪುಟಾಣಿ ಮಕ್ಕಳಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ..ಹೈಕೋರ್ಟ್‌ ಆದೇಶ !

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:  https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page