Bengaluru: ರಾಜ್ಯದಲ್ಲಿ ವಿಷಕಾರಿ ಹಾವು ಕಚ್ಚಿದ್ರೆ ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತವರು ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದು ಸರ್ಕಾರ ಮಹತ್ವದ ಆದೇಶ ನೀಡಿದೆ.
ಕ್ಯಾಶ್ ಲೆಸ್’ ಚಿಕಿತ್ಸೆಗೆ ಆದೇಶ ಯಾಕೆ..?
ಹಾವು ಕಚ್ಚಿದ್ರೆ `ಕ್ಯಾಶ್ ಲೆಸ್’ ಚಿಕಿತ್ಸೆ ನೀಡುವಂತೆ ಸರ್ಕಾರದಿಂದ ಮಹತ್ವದ ಆದೇಶ ನೀಡಿದ್ದು, ಕರ್ನಾಟಕ ಸರ್ಕಾರದ ಅಸ್ತಿತ್ವದಲ್ಲಿರುವ ಆರೋಗ್ಯ ಯೋಜನೆ “ಆರೋಗ್ಯ ಕರ್ನಾಟಕ” ಮತ್ತು ಭಾರತ ಸರ್ಕಾರದ ಆರೋಗ್ಯ ಯೋಜನೆ “ಆಯುಷ್ಮಾನ್ ಭಾರತ್” ಅನ್ನು ಸಂಯೋಜಿಸುವ ಮೂಲಕ ಕರ್ನಾಟಕದ ಜನರಿಗೆ ಆರೋಗ್ಯ ರಕ್ಷಣೆ ಒದಗಿಸಲು ಮುಂದಾಗಲಾಗಿದೆ.
ಇನ್ನು ಹಾವು ಕಚ್ಚಿದ್ರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು, ಹಾವಿನ ವಿರೋಧಿ ವಿಷ (ASV), ಆರಂಭಿಕ ಸ್ಥಿರೀಕರಣ, ಚಿಕಿತ್ಸೆಯಿಂದ ಸಾವುಗಳನ್ನು ತಡೆಗಟ್ಟಬಹುದು ಎಂದು ತಿಳಿದಿಸಿದೆ. ಹಾವು ಕಡಿತದ ಪ್ರಕರಣಗಳಿಗೆ AB-PMJAY-CM’s-ArK ಯೋಜನೆಯ ವ್ಯಾಪ್ತಿಯನ್ನು ತುರ್ತು ವರ್ಗ (4A ಕೋಡ್‌ಗಳು) ಅಡಿಯಲ್ಲಿ ನೀಡಲಾಗಿದೆ. ಎಂಪನೇಲ್ಡ್ ಆಸ್ಪತ್ರೆಗಳಿಗೆ ಮರುಪಾವತಿಯನ್ನು 100% ನಲ್ಲಿ PHH ಫಲಾನುಭವಿಗಳಿಗೆ ಮತ್ತು ಪ್ಯಾಕೇಜ್ ವೆಚ್ಚದ 30% ನಲ್ಲಿ NPHH ಫಲಾನುಭವಿಗಳಿಗೆ ಸೀಮಿತಗೊಳಿಸಲಾಗಿದೆ. 2024-25ರ ಆರ್ಥಿಕ ವರ್ಷದಲ್ಲಿ, 14185 ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡಲಾಗಿದೆ. IHIP ಪೋರ್ಟಲ್‌ನಲ್ಲಿ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರಿ ಸಂಸ್ಥೆಗಳಲ್ಲಿ ವರದಿಯಾದ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿವೆ.
ಇನ್ನು ಸರ್ಕಾರಿ ಆಸ್ಪತ್ರೆಗಳಿಗೆ ಅಸ್ತಿತ್ವದಲ್ಲಿರುವ AB-PMJAY-CM’s-ArK ದರಗಳನ್ನು ಈ ಕೆಳಗಿನಂತೆ ನಿಗದಿ ಪಡಿಸಿರುವುದಾಗಿ ಹೇಳಿದೆ. ಸರ್ಕಾರಿ ಆಸ್ಪತ್ರೆಗಳ ದರ (ದಿನಕ್ಕೆ-ರೂ.) ಗಳ ಬಗ್ಗೆ ನೋಡೋದಾದ್ರೆ, ಹಾವು ಕಡಿತಕ್ಕೊಳಗಾದವರ ರೊಟೀನ್ ವಾರ್ಡ್ ಗೆ ರೂ.1,350 ದರವನ್ನು ನಿಗದಿ ಪಡಿಸಲಾಗಿದೆ. ಹಾವು ಕಡಿತ-HDU ವಾರ್ಡ್ ಗೆ ರೂ.2,300 ದರ ನಿಗದಿ ಪಡಿಸಲಾಗಿದೆ. ಹಾವು ಕಡಿತ – ಐಸಿಯು (ವೆಂಟಿಲೇಟರ್ ಇಲ್ಲದೆ) ವಾರ್ಡ್ ಗೆ ರೂ. 2,700 ದರ ನಿಗದಿ ಪಡಿಸಲಾಗಿದೆ. ಹಾವು ಕಡಿತ – ಐಸಿಯು (ವೆಂಟಿಲೇಟರ್) ವಾರ್ಡಿಗೆ ರೂ. 3,375 ದರ ನಿಗದಿ ಪಡಿಸಲಾಗಿದೆ.
ಇನ್ನೂ ಖಾಸಗಿ ಆಸ್ಪತ್ರೆಗಳಿಗೆ HBP 2022 ದರ (ಪ್ರತಿ ದಿನಕ್ಕೆ-ರೂ.)ಗಳ ಬಗ್ಗೆ ನೋಡೋದಾದ್ರೆ, ಹಾವು ಕಡಿತಕ್ಕೊಳಗಾದವರ ರೊಟೀನ್ ವಾರ್ಡ್ ಗೆ ರೂ. 2,300 ದರವನ್ನು ನಿಗದಿ ಪಡಿಸಲಾಗಿದೆ. ಹಾವು ಕಡಿತ-HDU ವಾರ್ಡ್ ಗೆ ರೂ.3,800 ದರ ನಿಗದಿ ಪಡಿಸಲಾಗಿದೆ. ಹಾವು ಕಡಿತ – ಐಸಿಯು (ವೆಂಟಿಲೇಟರ್ ಇಲ್ಲದೆ) ವಾರ್ಡ್ ಗೆ ರೂ. 8,800 ದರ ನಿಗದಿ ಪಡಿಸಲಾಗಿದೆ. ಹಾವು ಕಡಿತ – ಐಸಿಯು (ವೆಂಟಿಲೇಟರ್) ವಾರ್ಡಿಗೆ ರೂ. 10,350 ದರ ನಿಗದಿ ಪಡಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ, PHC ಗಳು ಮತ್ತು CHC ಗಳಲ್ಲಿ ತರಬೇತಿ ಪಡೆದ MBBS ವೈದ್ಯರಿಂದ ಹಾವು ಕಡಿತದ ಬಲಿಪಶುಗಳಿಗೆ ಆರಂಭಿಕ ಸ್ಥಿರೀಕರಣ ಮತ್ತು ಚಿಕಿತ್ಸೆಯನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











