ಬ್ರೇಕಿಂಗ್ ನ್ಯೂಸ್
ಕರ್ನಾಟಕ

RSS 100 YEARS:ಬಿಜೆಪಿ ನಾಯಕರ ನಡೆಗೆ ಸ್ವಯಂಸೇವಕರ ಮೆಚ್ಚುಗೆ

RSS 100 YEARS ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರರ ಸಂಭ್ರಮಾಚರಣೆಯನ್ನು ವಿಜಯದಶಮಿಯಂದು ಸ್ವಯಂ ಸೇವಕರು ಭಾರತಾದ್ಯಂತ ವಿಶೇಷವಾಗಿ ಆಚರಿಸಿದ್ದಾರೆ.ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶದೊಂದಿಗೆ ಆರಂಭಗೊಂಡ ಆರ್ ಎಸ್.ಎಸ್ ನೂರು ವರ್ಷಗಳನ್ನು ಕಂಪ್ಲೀಟ್ ಮಾಡಿದ್ದು ಸಂಘದ ಒಡನಾಟ ಇಟ್ಟುಕೊಂಡವ್ರಿಗೆ  ಈ ವಿಚಾರ ತುಂಬಾನೆ ಸಂತೋಷ ನೀಡಿದೆ.1925 ರಲ್ಲಿ ವಿಜಯದಶಮಿಯಂದು http://Rashtriya Swayamsevak Sanghಆರಂಭಗೊಂಡಿತ್ತು.ನೂರರ ಸಂಭ್ರಮದಲ್ಲಿರುವ ಆರ್ ಎಸ್ ಎಸ್ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ನೂರರ ಸಂಭ್ರಮವನ್ನು ಸಂಘದಲ್ಲಿ ಬೆಳೆದ ನಾಯಕರು ವಿಭಿನ್ನವಾಗಿ ಆಚರಿಸಿದ್ದಾರೆ.ದಕ್ಷಿಣ ಕನ್ನಡದ ಬಿಜೆಪಿ ನಾಯಕರು ಸಂಘದ ಗಣವೇಷದಲ್ಲಿ ಕಾಣಿಸ್ಕೊಂಡು ಸಂಘದ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.ಅದರಲ್ಲೂ ಬಿಜೆಪಿಯ ನಾಯಕರು ತಮ್ಮ ಮಕ್ಕಳೊಂದಿಗೆ ಗಣವೇಷದಲ್ಲಿ ಕಾಣಿಸ್ಕೊಂಡಿದ್ದು ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿದೆ.ಕಾರ್ಕಳ ಶಾಸಕ ಸುನಿಲ್ ಕುಮಾರ್,ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ,ಶಾಸಕ ಹರೀಶ್ ಪೂಂಜಾ.ಸಿ.ಟಿ ರವಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸಂಘದ ಗಣವೇಷವನ್ನು ಧರಿಸಿ ಮಕ್ಕಳೊಂದಿಗೆ ಕಾಣಿಸ್ಕೊಂಡಿದ್ದಾರೆ.ಸಂಘದ ಸ್ವಯಂಸೇವಕರಿಗೆ,ಮತ್ತು ಬಿಜೆಪಿ ಕಾರ್ಯಕರ್ತರು ಮಕ್ಕಳ ಜೊತೆ ಗಣವೇಷದಲ್ಲಿ ಕಾಣಿಸ್ಕೊಂಡ ನಾಯಕರನ್ನು ಶ್ಲಾಘಿಸಿದ್ದಾರೆ.

ಸಾಮಾನ್ಯವಾಗಿ ಆರ್.ಎಸ್ .ಎಸ್ ನಿಂದ ಬಂದ ನಾಯಕರನ್ನು,ವಿರೋಧಿಗಳು ಟೀಕಿಸುವಾಗ ಮಕ್ಕಳಿಗೆ ಸಂಘ ಶಿಕ್ಷಣ ನೀಡದೆ,ಬೇರೆಯವರ ಮಕ್ಕಳನ್ನು ಸಂಘಕ್ಕೆ ದೂಡಿ ವೋಟ್ ಗಿಟ್ಟಿಸುತ್ತಾರೆ.ಎಂದು ಆರೋಪಿಸುತ್ತಿದ್ದರು,ಅದರಲ್ಲೂ ಕೆಲವೂ ನಾಯಕರು ಬಿಜೆಪಿ ನಾಯಕರಿಗೆ ತಾಕತ್ತಿದ್ರೆ ನಿಮ್ಮ ಮಕ್ಕಳಿಗೆ ಗಣವೇಷ ತೊಡಿಸಿ ಎಂದು ಹೇಳಿದ್ದೂ ಇದೆ.ಇಂತಹ ಹಲವಾರು ಟೀಕೆ ಟಿಪ್ಪಣಿಗಳಿಗೆ ಬಿಜೆಪಿ ನಾಯಕರು ಉತ್ತರಿಸಿದಂತಾಗಿದೆ.ತಮ್ಮ ಮಕ್ಕಳನ್ನು ಸಂಘದ ಗರಡಿಯಲ್ಲಿ ಬೆಳೆಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಸುನಿಲ್ ಕುಮಾರ್ ಸೇರಿದಂತೆ ಹಲವಾರು ನಾಯಕರು ನೀಡಿದ್ದಾರೆ.ಇದು ಸ್ವಯಂಸೇವಕರಿಗೆ ಮತ್ತಷ್ಟು ಹುರುಪು ನೀಡಿದೆ.

ಅಂದಹಾಗೆ ಆರ್ ಎಸ್ ಎಸ್ ನವರು ಧರಿಸುವ ಯೂನಿಫಾರ್ಮ್ ನ್ನು ಗಣವೇಷ ಎಂದು ಕರೆಯುತ್ತಾರೆ.ಗಣವೇಷ ಸಂಘದ ಶಿಸ್ತು.ಏಕತೆ,ಮತ್ತು ಸಮರ್ಪಣಾ ಮನೋಭಾವದ ಸಂಕೇತವಾಗಿದೆ,2016 ರ ಹಿಂದೆ ಖಾಕಿ ಚಡ್ಡಿ ಬಿಳಿ ಅಂಗಿ ಗಣವೇಷದಲ್ಲಿ ಬಳಕೆಯಲ್ಲಿತ್ತು ಆ ನಂತರದಲ್ಲಿ ಕಂದು ಬಣ್ಣದ ಉದ್ದನೆಯ ಪ್ಯಾಂಟ್ ಗೆ ಬದಲಾಯಿಸಲಾಯಿತು.ಇದರೊಂದಿಗೆ ತೋಳುಪಟ್ಟಿ ಟೋಪಿ,ಶೂ,ಕಂದು ಬಣ್ಣದ ಸಾಕ್ಸ್ ಮತ್ತು ಕೈಯಲ್ಲಿ ದಂಡ ಹಿಡಿಯಲಾಗುತ್ತದೆ.ಈ ಬಾರಿ ಬಿಜೆಪಿ ನಾಯಕರು ತಮ್ಮ ಮಕ್ಕಳೊಂದಿಗೆ ಸಂಘದ ಚಟುವಟಿಕೆಯಲ್ಲಿ ಗುರುತಿಸಿಕೊಂಡು,ಆರ್ ಎಸ್ ಎಸ್ ಮುಂದಿನ ಪೀಳಿಗೆಯಲ್ಲೂ ಮುಂದುವರೆಯುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ:
INDIA PAK TALKWAR:ಭಾರತದ ವಿರುದ್ಧ ಪಾಕಿಸ್ತಾನ ವ್ಯರ್ಥಪ್ರಲಾಪ!

RSS 100 YEARS: Volunteers appreciate BJP leaders' action
CREDIT TO ORGINAL SOURCE

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page