BBK12: ಬಿಗ್ ಬಾಸ್ ಮನೆಯಲ್ಲಿ ಆಟಗಳು ದಿನದಿಂದ ದಿನಕ್ಕೆ ಬಹಳ ಟಫ್ ಆಗುತ್ತಾ ಹೋಗುತ್ತಿದೆ. ಕಳೆದ ಸಂಚಿಕೆಯಲ್ಲಿ ಕಾಕ್ರೋಚ್ ಸುಧಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಇನ್ನು ಕಿಚ್ಚನ ಜೊತೆಗಿನ ಮಾತುಕತೆಯ ಸಮಯದಲ್ಲಿ ಒಂದಿಷ್ಟು ಕಾಮಿಡಿ ಘಟನೆಗಳು ನಡೆದಿವೆ.
ಪ್ರತಿ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಮನೆಯವರಿಗೆ ಕ್ಲಾಸ್ ತಗೊಳ್ತಾರೆ. ಅದೇ ರೀತಿ ಕಳೆದ ಸಂಚಿಕೆಯಲ್ಲಿಯೂ ಕೂಡ ಸ್ಪರ್ಧಿಗಳಿಗೆ ಸುದೀಪ್ ಸಕತ್ತಾಗಿಯೇ ಕ್ಲಾಸ್ ತಗೊಂಡಿದ್ದಾರೆ. ಇನ್ನು ಈ ರೀತಿಯಾದಂತಹ ಮಾತುಕತೆಗಳ ನಡುವೆ ಕೆಲವೊಂದು ಆಕ್ಟಿವಿಟೀಸ್ ಗಳನ್ನೂ ಮಾಡುತ್ತಾರೆ. ಕೆಲವೊಂದು ಪ್ರಶ್ನೆಗಳನ್ನು ಸ್ಪರ್ಧಿಗಳಿಗೆ ಸುದೀಪ್ ಕೇಳುತ್ತಾರೆ. ಇವಕ್ಕೆಲ್ಲ ಕೆಲವರು ಫನ್ನಿ ಆಗಿ ಉತ್ತರವನ್ನು ಕೊಡುತ್ತಾರೆ. ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರಾ ಅಥವಾ ಗಂಡು ಮಕ್ಕಳು ಇದ್ದಾರಾ ಇವರಲ್ಲಿ ಯಾರು ಸ್ಟ್ರಾಂಗ್ ಅನ್ನೋ ಪ್ರಶ್ನೆಯನ್ನು ಕಿಚ್ಚ ಕೇಳಿದರು. ಹೆಣ್ಣು ಮಕ್ಕಳೇ ಸ್ಟ್ರಾಂಗ್ ಅಂತ ಮನೆಯ ಬಹುತೇಕ ಹೆಣ್ಣು ಮಕ್ಕಳು ಹೇಳಿದ್ದರು. ಆದರೆ ಗಂಡು ಮಕ್ಕಳಲ್ಲಿ ರಘು ಈ ರೀತಿ ಏನೂ ಇಲ್ಲ ಬಿಡಿ ಅಂತ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಜಾಹ್ನವಿ ಅವರ ಜೊತೆಗೆ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಜಾಹ್ನವಿ ಅವರ ಉತ್ತರವನ್ನು ಕೇಳಿದ ಕಿಚ್ಚ ಶಾಕ್ ಆಗಿದ್ದಾರೆ.
ಜಾಹ್ನವಿ ಮಾತಿಗೆ ಕಿಚ್ಚ ಫುಲ್ ಶಾಕ್ !
ಜಾಹ್ನವಿ ಈ ಪ್ರಶ್ನೆಗೆ ಉತ್ತರಿಸುತ್ತಾ ಮನೆಯಲ್ಲಿರುವ ಗಂಡು ಮಕ್ಕಳಲ್ಲಿ ಮ್ಯಾನ್ಲಿ ಅಂತ ಯಾರು ಇಲ್ಲ ಅಂತ ಹೇಳಿದ್ದಾರೆ. ಇದನ್ನು ಕೇಳಿ ಸುದೀಪ್ ಶಾಕ್ ಆಗಿದ್ದಾರೆ. ಹೀಗೆ ಮಾತು ಮುಂದುವರಿಸುತ್ತಾ, ಜಾಹ್ನವಿ ಈ ಮನೆಯಲ್ಲಿ ಬಹುತೇಕ ಹುಡುಗರು ಸಪ್ಪೆ ಆಗಿದ್ದಾರೆ. ರಘು ಸೈಲೆಂಟ್ ಆಗಿದ್ದಾರೆ. ಗಿಲ್ಲಿ ನಟನಿಗೆ ಸೊಂಟವೇ ಇಲ್ಲ. ರಘು ಅವರ ತೊಡೆಯ ಮೇಲೆಯೇ ಗಿಲ್ಲಿ ಮಲಗಿರುತ್ತಾರೆ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ಕಿಚ್ಚ ಸುದೀಪ್ ನಕ್ಕಿದ್ದಾರೆ. ಜಾಹ್ನವಿ ಏನು ಹೇಳ್ತಾ ಇದ್ದೀರಾ ಈ ರೀತಿ ಹೇಳಿದರೆ ಹೇಗೆ? ನೀವು ಹೇಳುವ ಮಾತಿನ ಅರ್ಥ ಏನು? ಅನ್ನೋದು ಗೊತ್ತಾ? ಎಂದು ಕಿಚ್ಚ ನಗುತ್ತಲೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಾಹ್ನವಿ ಮನೆಯಲ್ಲಿ ನಾವೇ ಸ್ಟ್ರಾಂಗ್ ಆಗಿ ಇರೋದು, ಗಂಡು ಮಕ್ಕಳು ಸ್ಟ್ರಾಂಗ್ ಆಗಿ ಇಲ್ವೇ ಇಲ್ಲ ಅಂತ ಹೇಳಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











