ಬ್ರೇಕಿಂಗ್ ನ್ಯೂಸ್
ಕರ್ನಾಟಕ

Actress Ramya: ವಾವ್‌ ಮೋಹಕತಾರೆ ರಮ್ಯಾ ಲುಕ್‌ ಗೆ ಫ್ಯಾನ್ಸ್‌ ಕ್ಲೀನ್‌ ಬೋಲ್ಡ್..!

Actress Ramya: ಕನ್ನಡ ಚಿತ್ರರಂಗದ ಮೋಹಕ ತಾರೆ ಅಂದ್ರೆ ಅದು ರಮ್ಯಾ. ಈ ನಟಿ ವಯಸ್ಸಾದಂತೆ ಇನ್ನಷ್ಟು ಬ್ಯೂಟಿಫುಲ್‌ ಆಗಿ ಮಿಂಚುತ್ತಿರೋದು ಸಾಮಾನ್ಯವಾದ ಸಂಗತಿ. ಇದೀಗ ರಮ್ಯಾ ಕಪ್ಪು ಬಣ್ಣದ ಡ್ರೆಸ್‌ ತೊಟ್ಟು ವಾವ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಮೆಟ್ರೋ ಅಂತರ್ ಜಿಲ್ಲಾ ಸಂಚಾರ…!

ಇದೀಗ ಪೋಸ್ಟ್‌ ಮಾಡಿರುವ ಫೋಟೋ ಮೂಲಕ ಇನ್ಸ್ಟಾದಲ್ಲಿ ಮಿಂಚುತ್ತಿದ್ದಾರೆ.  ಕಪ್ಪುಬಣ್ಣದ ವೆಸ್ಟರ್ನ್ ಉಡುಗೆ ಧರಿಸಿರುವ ರಮ್ಯಾ ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ. ರಮ್ಯಾ  ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾಗಳಿಂದ ಕೊಂಚ ದೂರ ಇದ್ದು ತಾನಾಯ್ತು ತನ್ನ ವೈಯಕ್ತಿಕ ಬದುಕು ಆಯ್ತು ಅಂತ ಬಿಝಿ ಆಗಿರುವ ರಮ್ಯಾ ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ತನ್ನ ಇರುವಿಕೆಯನ್ನು ವ್ಯಕ್ತಪಡಿಸ್ತಾ ಇರುತ್ತಾರೆ. ಮುದ್ದಾದ ಚೆಲುವೆಯ ಫೋಟೋಗಳಿಗೆ ಇವರ ಫ್ಯಾನ್ಸ್‌ ನಾನಾ ಕಾಮೆಂಟ್ಸ್‌ ಮಾಡುತ್ತಿರುತ್ತಾರೆ.  ಇವರ ಅಂದಕ್ಕೆ ಪಡ್ಡೆ ಹುಡುಗರು ಯಾವಾಗಲೂ ಸೋಲುತ್ತಾರೆ. ನಟಿ ಫ್ರೀ ಹೇರ್ ಬಿಟ್ಟು ಬಾಡಿಕಾನ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದೇಶದಲ್ಲಿಯೇ ಕಾಲ ಕಳೆಯುವ  ಈ ಕನ್ನಡದ ಸುಂದರಿಯನ್ನು ಮತ್ತೆ ಯಾವಾಗ ಸಿನಿಮಾದಲ್ಲಿ ನೋಡ್ತೀವೋ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್‌ ಫ್ಯಾನ್ಸ್‌ 7 ಕೋಟಿ ರೂ. ಪರಿಹಾರ..?

ನಟಿ ರಮ್ಯಾ ಮದ್ವೆ ಯಾವಾಗ..?

ಇನ್ನು ರಮ್ಯಾ ಯಾವಾಗ ಮದುವೆ ಆಗ್ತಾರೆ ಅಂತ ಇವರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ. ಆದರೆ  ತನ್ನ ಮದುವೆಯ ಬಗ್ಗೆ ಈ ನಟಿ ಯಾವುದೇ ಮಾತನಾಡದೆ ಸುಮ್ಮನಿರುತ್ತಾರೆ.  ಸಿನಿಮಾ ಲೋಕಕ್ಕೆ ವಾಪಸ್ ಬರೋದಾಗಿ ಘೋಷಿಸುವ ರಮ್ಯಾ ಇದುವರೆಗೂ ಸಿನಿಮಾ ಘೋಷಿಸಿಲ್ಲ. ಆದರೆ ಈ ಬಾರಿ ಈ ಫೋಟೊ ಮತ್ತೆ ನಟನೆಗೆ ಮರಳುವ ನಿರೀಕ್ಷೆಗೆ ಜೀವ ತಂದಂತಿದೆ. ಈ ಲುಕ್‍ನಲ್ಲಿ 15 ವರ್ಷದ ಹಿಂದಿನ ರಮ್ಯಾ ಕಾಣಿಸ್ಕೊಂಡಿದ್ದಾರೆ. ಮ್ಯಾಗಜಿನ್‍ವೊಂದಕ್ಕಾಗಿ ರಮ್ಯಾ ಈ ಫೋಟೋಶೂಟ್ ಮಾಡಿಸಿದ್ಧಾರೆ. ಸದ್ಯ ರಮ್ಯಾ ಲುಕ್ ಫ್ಯಾನ್ಸ್ ಎದೆಯಲ್ಲಿ ರೋಮಾಂಚನ ಹುಟ್ಟಿಸಿದೆ.

ಇದನ್ನೂ ಓದಿ: ಶಬರಿಮಲೆಗೆ ಹೋಗುವ ಭಕ್ತರಿಗೆ ಶಾಕ್‌ ನೀಡಿದ ಕೇರಳ ಸರ್ಕಾರ..!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page